ಬ್ಯೂಟಿ ಪಾರ್ಲರನ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿಯೊಂದಿಗೆ ಮೂವರ ಬಂಧನ

ಗಾಝಿಯಾಬಾದ (ಉತ್ತರಪ್ರದೇಶ) – ಉತ್ತರಪ್ರದೇಶದ ಗಾಝಿಯಾಬಾದಿನ ಪೊಲೀಸರು ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಮೋಸಗೊಳಿಸಿರುವ ಪ್ರಕರಣದಲ್ಲಿ ಪಾದ್ರಿ, ಆತನ ಪತ್ನಿಯೊಂದಿಗೆ ಇನ್ನೂ ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸ್ಥಳೀಯ ಭಾಜಪದ ಮಹಿಳಾ ನಾಯಕಿಯಾದ ಸುನೀತಾ ಆರೋರಾರವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಈ ದೂರಿನಲ್ಲಿ `ನನ್ನನ್ನು ಬ್ಯೂಟಿ ಪಾರ್ಲರಿಗೆ ಕರೆಯಿಸಿ ನನ್ನ ಮತಾಂತರ ಮಾಡುವ ಸಂಚು ನಡೆದಿತ್ತು. ಅಲ್ಲಿ ಹೋದಾಗ ನನ್ನ ಕೊರಳಿನಲ್ಲಿದ್ದ ಶ್ರೀಕೃಷ್ಣನ ಪದಕವನ್ನು ತೆಗೆದರು. ನಾನು ಬ್ಯೂಟಿ ಪಾರ್ಲರನ್ನು ತಲುಪಿದಾಗ ಅಲ್ಲಿದ್ದ 6 ಜನರು ಕೈಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಪ್ರಾರ್ಥನೆ ಮಾಡುತ್ತಿದ್ದರು. ಪಾದ್ರಿ ಇಬ್ರಾಹಿಮ ಥಾಮಸ್ ಜನರನ್ನು ಅಲ್ಲಿಗೆ ಪ್ರಾರ್ಥನೆಗಾಗಿ ಕರೆದುಕೊಂಡು ಹೋಗುತ್ತಿದ್ದರು.

ಇಬ್ರಾಹಿಮನು ನನ್ನ ಕೊರಳಿನಲ್ಲಿದ್ದ ಭಗವಾನ ಶ್ರೀಕೃಷ್ಣನ ಪದಕವನ್ನು ತೆಗೆಯಲು ಹೇಳಿದನು. ಇಷ್ಟೇ ಅಲ್ಲ, ಅವನು ನನಗೆ ನನ್ನ ಮನೆಯಲ್ಲಿರುವ ದೇವತೆಗಳ ಚಿತ್ರಗಳನ್ನು ತೆಗೆಯುವಂತೆ ಹೇಳಿದರು. ಪಾದ್ರಿಯು ಇದೆಲ್ಲವನ್ನು ಮಾಡಿದ ನಂತರ ಏಸು ಕ್ರಿಸ್ತನ ದರ್ಶನವಾಗಲಿದೆ ಎಂದು ಹೇಳಿದ್ದನು’ ಎಂದು ಸುನೀತಾರವರು ಆರೋಪಿಸಿದ್ದಾರೆ. ಇದು ಮತಾಂತರದ ಪ್ರಕರಣವಾಗಿದೆ ಎಂಬುದು ಸುನೀತಾ ಅರೋರಾರವರ ಗಮನಕ್ಕೆ ಬಂದಿತು. ಅವರು ತಮ್ಮ ಕೆಲವು ಸಹೋದ್ಯೋಗಿಗಳನ್ನು ಘಟನಾಸ್ಥಳಕ್ಕೆ ಕರೆಸಿಕೊಂಡರು. ಅನಂತರ ಅವರು ಮೂವರು ಆರೋಪಿಗಳನ್ನು ಹಿಡಿದು ಖೋಡಾ ಪೊಲೀಸ ಠಾಣೆಗೆ ಕರೆದೊಯ್ದರು. ಪೊಲೀಸರು ಆರೋಪಿಗಳ ವಿರುದ್ಧ ದೂರನ್ನು ದಾಖಲಿಸಿ ಅವರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಸಂಪಾದಕೀಯ ನಿಲುವು

ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಪಾದ್ರಿಗಳ ನಿಜ ಸ್ವರೂಪ ! ಭಾರತಾದ್ಯಂತ ಮತಾಂತರ ವಿರೋಧಿ ಕಾನೂನು ರಚಿಸುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ.