
ನವದೆಹಲಿ – ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಉಂಟಾದ ವಿವಾದ, ಹಲವು ವಾರಗಳ ಕಾಲ ನಡೆದ ತೀವ್ರ ಪ್ರತಿಭಟನೆಗಳು ಮತ್ತು ಎಲ್ಲಾ ಹಂತಗಳಿಂದ ಹೆಚ್ಚಿದ ಒತ್ತಡದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜುಲೈ 25 ರ ಮಧ್ಯಾಹ್ನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಪ್ರಧಾನಿ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ‘ಕಾಕ್ರೋಚ್ ಜನತಾ ಪಕ್ಷ’ ಆರಂಭದಿಂದಲೂ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿತ್ತು ಮತ್ತು ತಮ್ಮ ನಿಲುವಿಗೆ ಬದ್ಧವಾಗಿತ್ತು. ಸರಕಾರ ಮತ್ತು ಕಾಕ್ರೋಚ್ ಜನತಾ ಪಕ್ಷದ ನಡುವಿನ ಮೂರನೇ ಸುತ್ತಿನ ಮಾತುಕತೆಗೆ ಮುನ್ನವೇ ಪ್ರಧಾನ್ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ.
ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆ, ಇದೇ ಒಂದು ಸಶಕ್ತ ರಾಷ್ಟ್ರದ ಬುನಾದಿ !
— Dharmendra Pradhan (@dpradhanbjp) July 25, 2026
ಪ್ರಧಾನ್ ಅವರು ‘ಎಕ್ಸ್’ ಮೂಲಕ ತಮ್ಮ ರಾಜೀನಾಮೆಯ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು,
1. ನನ್ನ ಯುವ ಸ್ನೇಹಿತರೇ, 4 ದಶಕಗಳಿಗೂ ಹೆಚ್ಚು ಕಾಲ ನಾನು ವಿದ್ಯಾರ್ಥಿ, ಬೋಧನೆ ಮತ್ತು ಶಿಕ್ಷಣ ಸುಧಾರಣೆಗಳ ಕ್ಷೇತ್ರಕ್ಕೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ಒಂದು ಸಶಕ್ತ, ಸರ್ವಸಮಾವೇಶಕ ಮತ್ತು ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯು ಒಂದು ಸಶಕ್ತ ರಾಷ್ಟ್ರದ ಬುನಾದಿಯಾಗಿದೆ ಎಂಬುದನ್ನು ನಾನು ಯಾವಾಗಲೂ ನಂಬಿದ್ದೇನೆ.
2. ದೇಶದ ಯುವಕರ ಆಕಾಂಕ್ಷೆಗಳು, ಭಾವನೆಗಳು ಮತ್ತು ನ್ಯಾಯಯುತ ನಿರೀಕ್ಷೆಗಳನ್ನು ನಾನು ಮನಸಾರ ಗೌರವಿಸುತ್ತೇನೆ. ಭಾರತದ ಯುವ ಪೀಳಿಗೆಯ ಕನಸುಗಳನ್ನು ನನಸು ಮಾಡುವುದು ನನ್ನ ರಾಜಕೀಯ ಮತ್ತು ಸಾಮಾಜಿಕ ಜೀವನದ ನೈತಿಕ ಬದ್ಧತೆಯಾಗಿದೆ. ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
3. ಮೇ 3, 2026 ರಂದು ನಡೆದ ‘ನೀಟ್’ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದಿತ್ತು. ಈ ಪ್ರಕರಣವನ್ನು ತಕ್ಷಣವೇ ಪರಿಗಣಿಸಿ ಭಾರತ ಸರಕಾರವು ಇದರ ತನಿಖೆಯನ್ನು ಸಿಬಿಐಗೆ ವಹಿಸಿತು, ಪರೀಕ್ಷೆಯನ್ನು ರದ್ದುಗೊಳಿಸಿತು ಮತ್ತು ಮರುಪರೀಕ್ಷೆಯ ದಿನಾಂಕವನ್ನು ಘೋಷಿಸಿತು. ಅಲ್ಲದೆ ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಗಣಕಯಂತ್ರ ಆಧಾರಿತ ಪರೀಕ್ಷಾ ವಿಧಾನದಲ್ಲಿ ನಡೆಸಲು ನಿರ್ಧರಿಸಲಾಯಿತು.
4. ಈ ಇಡೀ ಪ್ರಕ್ರಿಯೆಯ ಸಮಯದಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಯು ಸುಲಲಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಅತ್ಯುನ್ನತ ಆದ್ಯತೆಯಾಗಿತ್ತು. ‘ಸಂಪೂರ್ಣ-ಸರಕಾರ ಸಮನ್ವಯದ ದೃಷ್ಟಿಕೋನ’ವನ್ನು ಅಳವಡಿಸಿಕೊಂಡು ಈ ಕೆಲಸವನ್ನು ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ !
ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ಮೊದಲ ದಿನದಿಂದಲೂ ನಾನು ಈ ಪ್ರಕರಣದ ಜವಾಬ್ದಾರಿಯನ್ನು ಸ್ವೀಕರಿಸಿದ್ದೆ ಮತ್ತು ಎಂದಿಗೂ ಈ ಪರಿಸ್ಥಿತಿಯಿಂದ ದೂರ ಓಡಿಹೋಗಲಿಲ್ಲ. ‘ಪರೀಕ್ಷಾ ಮಾಫಿಯಾ’ದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲು ಬಿಡುವುದಿಲ್ಲ ಮತ್ತು ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗುವುದಿಲ್ಲ.
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ