ಕೇಂದ್ರ ಸರಕಾರದಿಂದ ಮೂರೂ ಬೇಡಿಕೆಗೆ ಒಪ್ಪಿಗೆ !

ನವದೆಹಲಿ – ಕೇಂದ್ರ ಸಚಿವ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಜುಲೈ 25 ರಂದು ಮಧ್ಯಾಹ್ನ ನಡೆದ ಮೂರನೇ ಸಭೆಯ ನಂತರ ಕಾಕ್ರೋಚ್ ಜನತಾ ಪಕ್ಷವು (‘ಸಿಜೆಪಿ’) ತನ್ನ ಹೋರಾಟವನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿತು. ಈ ಸಭೆಯಲ್ಲಿ ಸಿಜೆಪಿಯ ಎಲ್ಲಾ 3 ಬೇಡಿಕೆಗಳನ್ನು ಸರಕಾರವು ಒಪ್ಪಿಕೊಂಡಿದ್ದರಿಂದ ಸಭೆಯ ನಂತರ ಜೆ.ಪಿ. ನಡ್ಡಾ, ಜಿತೇಂದ್ರ ಸಿಂಗ್, ಸಿಜೆಪಿಯ ವಕ್ತಾರ ಸೌರಭ ದಾಸ ಮತ್ತು ಅಶುತೋಷ ರಾಂಕಾ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ಘೋಷಣೆ ಮಾಡಿದರು. ಈ ಸಮಯದಲ್ಲಿ ಸೌರಭ ದಾಸ ಅವರು ಪ್ರತಿಭಟನಾಕಾರರಿಗೆ, ‘ಜಂತರ್ ಮಂತರ್‌ನಲ್ಲಿ ಉಪಸ್ಥಿತರಿರುವ ಎಲ್ಲಾ ಪ್ರತಿಭಟನಾಕಾರರು ಈಗ ಮನೆಗೆ ಹಿಂತಿರುಗಬೇಕು’, ಎಂದು ಕರೆ ನೀಡಿದರು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಸುದ್ದಿ ಹರಡುತ್ತಿದ್ದಂತೆಯೇ ಜಂತರ್ ಮಂತರ್‌ನಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ವಿದ್ಯಾರ್ಥಿಗಳು ‘ವಿದ್ಯಾರ್ಥಿ ಏಕತಾ ಜಿಂದಾಬಾದ್’, ‘ಜೈ ಭೀಮ್’ ಎಂಬ ಘೋಷಣೆಗಳನ್ನು ಕೂಗಿದರು ಮತ್ತು ರಾಷ್ಟ್ರಗೀತೆ ಹಾಡಿದರು.
ಸರಕಾರವು ಒಪ್ಪಿಕೊಂಡ ಬೇಡಿಕೆಗಳು
ಅ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ
ಆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನಷ್ಟಪರಿಹಾರ ನೀಡಲಾಗುವುದು
ಇ. ಜಂತರ್ ಮಂತರ್‌ನಲ್ಲಿ ನಡೆದ ಹಿಂಸಾತ್ಮಕ ಹೋರಾಟದ ಸಮಯದಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಲಾಗುವುದು
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !