‘ಮುಸ್ಲಿಮನನ್ನು ಉಪಮುಖ್ಯಮಂತ್ರಿ ಮಾಡಬೇಕಂತೆ !’ – ರಾಜ್ಯದ ವಕ್ಫ್ ಬೋರ್ಡ್ ನ ಆಗ್ರಹ

  • ಮುಸ್ಲಿಮರಿಂದಾಗಿ ಕಾಂಗ್ರೆಸ್ ಗೆದ್ದಿದ್ದರಿಂದ ವಕ್ಫ್ ಮಂಡಳಿಯಿಂದ ಕಾಂಗ್ರೆಸ್ ಬಳಿ ಆಗ್ರಹ !

  • ಗೆದ್ದ 9 ಮುಸ್ಲಿಂ ಶಾಸಕರಲ್ಲಿ ಐವರನ್ನು ಸಚಿವರನ್ನಾಗಿ ಮಾಡಿ !

  • ಗೃಹ, ಆದಾಯ, ಶಿಕ್ಷಣ ಮುಂತಾದ ಪ್ರಮುಖ ಖಾತೆಗಳನ್ನು ನೀಡಿ!

ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ

ಬೆಂಗಳೂರು – ರಾಜ್ಯದಲ್ಲಿ ಭಾಜಪ ಹೀನಾಯ ಸೋಲಿಗೆ ರಾಜ್ಯದಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಭಾರಿ ಮತ ಹಾಕಿರುವುದೇ ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಅಲ್ಲಿನ ಮುಸ್ಲಿಂ ಸಂಘಟನೆಗಳು ಕಾಂಗ್ರೆಸ್ ಗೆ ಬೇಡಿಕೆ ಇಡಲಾರಂಭಿಸಿವೆ. ರಾಜ್ಯದ ವಕ್ಫ ಬೋರ್ಡ್ ರಾಜ್ಯದಲ್ಲಿ ಆರಿಸಿ ಬಂದಿರುವ 9 ಶಾಸಕರ ಪೈಕಿ ಒಬ್ಬರನ್ನು ಉಪಮುಖ್ಯಂತ್ರಿಯನ್ನಾಗಿ ಮಾಡುವುದರೊಂದಿಗೆ 5 ಮಂದಿಯನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದೆ. ಅಷ್ಟೇ ಅಲ್ಲ, ಈ ಸಚಿವರಿಗೆ ಗೃಹಖಾತೆ, ಕಂದಾಯ, ಶಿಕ್ಷಣ ಮತ್ತಿತರ ಪ್ರಮುಖ ಖಾತೆಗಳನ್ನು ನೀಡುವಂತೆಯೂ ಒತ್ತಾಯಿಸಲಾಗಿದೆ.

1. ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮಾತನಾಡಿ, ರಾಜ್ಯದಲ್ಲಿ 72 ಚುನಾವಣಾ ಕ್ಷೇತ್ರಗಳಲ್ಲಿ ಮುಸಲ್ಮಾನರಿಂದಲೇ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್‌ಗೆ ಮುಸ್ಲಿಮರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಮುಸಲ್ಮಾನರಿಗೆ ಅದರ ಪ್ರತಿಯಾಗಿ ಏನನ್ನಾದರೂ ನೀಡಬೇಕು. ಇದಕ್ಕೆ ನಮಗೆ ಕೃತಜ್ಞತೆ ಸಲ್ಲಿಸುವುದು ಕಾಂಗ್ರೆಸ್ ನ ಹೊಣೆಯಾಗಿದೆ. ಈ ಬೇಡಿಕೆಗಳಿಗಾಗಿ ನಾವು ಸುನ್ನಿ ಉಲಮಾ ಬೋರ್ಡ್ ನ ಕಚೇರಿಯಲ್ಲಿ ತುರ್ತು ಸಭೆಯನ್ನು ಆಯೋಜಿಸಿದೆ.

2. ಕುತೂಹಲದ ಸಂಗತಿಯೆಂದರೆ, ರಾಜ್ಯದಲ್ಲಿ ಮುಸ್ಲಿಂರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಶಾಫಿ ಸಾದಿ ಅವರು ಚುನಾವಣೆಗೆ ಮುನ್ನ ಕಾಂಗ್ರೆಸ್ ಬಳಿ ಒತ್ತಾಯಿಸಿದ್ದರು. ಮುಸ್ಲಿಮರನ್ನು 30 ಸ್ಥಾನಗಳಲ್ಲಿ ಅಭ್ಯರ್ಥಿಯನ್ನಾಗಿ ಮಾಡಬೇಕು.’ ವಾಸ್ತವವಾಗಿ ಕಾಂಗ್ರೆಸ್ 15 ಮುಸ್ಲಿಮರನ್ನು ಅಭ್ಯರ್ಥಿಯನ್ನಾಗಿ ಮಾಡಿತು ಮತ್ತು ಅವರಲ್ಲಿ 9 ಜನರು ಆಯ್ಕೆಯಾದರು.

ಮುಖ್ಯಮಂತ್ರಿ ಹೆಸರಿಗೆ ಇನ್ನೂ ಒಮ್ಮತ ಮೂಡಿಲ್ಲ !

ಕಾಂಗ್ರೆಸ್ ಬಹುಮತ ಪಡೆದಿದ್ದರೂ ಮುಖ್ಯಮಂತ್ರಿ ಸ್ಥಾನದ ಹೆಸರಲ್ಲಿ ಒಮ್ಮತ ಮೂಡದಿರುವುದು ಕಂಡು ಬರುತ್ತಿದೆ. ಈ ಹುದ್ದೆಗಾಗಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಝಟಾಪಟಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಸಂಪಾದಕೀಯ ನಿಲುವು

ಮುಸಲ್ಮಾನರು ಇದೇ ರೀತಿ ಕಾಂಗ್ರೆಸ್‌ ಬಳಿ ಭಾರತ ವಿಭಜನೆಗೆ ಒತ್ತಾಯಿಸಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಬೇಡಿಕೆಯನ್ನು ಒಪ್ಪಿಕೊಂಡಿತ್ತು ! ಈಗಲೂ ಮುಸ್ಲಿಮರ ಈ ಬೇಡಿಕೆಗಳನ್ನು ಕಾಂಗ್ರೆಸ್ ಒಪ್ಪಿಕೊಂಡರೆ ಆಶ್ಚರ್ಯಪಡಬೇಡಿ !

ಬಹುಸಂಖ್ಯಾತ ಹಿಂದೂಗಳು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಥವಾ ಇನ್ನಾವುದೇ ರಾಜಕೀಯ ಪಕ್ಷದಿಂದ ಎಂದಾದರೂ ‘ಹಿಂದು’ ಎಂದು ಬೇಡಿಕೆ ಇಟ್ಟಿದ್ದಾರೆಯೇ ? ಅಥವಾ ಈಗಲಾದರೂ ಹಿಂದೂಗಳು ಎಂದಾದರೂ ಬೇಡುತ್ತಾರೆಯೇ? ಮತ್ತು ಕೇಳಿದರೆ, ಯಾವುದೇ ರಾಜಕೀಯ ಪಕ್ಷವು ಹಿಂದೂಗಳಿಗೆ ‘ಹಿಂದು’ ಎಂದು ಏನನ್ನಾದರೂ ನೀಡುತ್ತದೆಯೇ ?