ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ವಿಜಯದ ಬಳಿಕ ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ !

ಬೆಳಗಾವಿ – ಬೆಳಗಾವಿ ಉತ್ತರ ಚುನಾವನಾಕ್ಷೇತ್ರದಿಂದ ಕಾಂಗ್ರೆಸ್ಸಿನ ವಿಜಯದ ಬಳಿಕ `ಆರ್ ಪಿಡಿ ಕ್ರಾಸ್ ಹತ್ತಿರ’ ನೆರೆದಿದ್ದ ಕಾರ್ಯಕರ್ತರು `ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದರು. ಈ ಸಂದರ್ಭದ ಒಂದು `ವಿಡಿಯೋ’ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಇದರಿಂದ ಈ ಪ್ರಕರಣದ ಆರೋಪಿಯ ಮೇಲೆ ಕ್ರಮ ಕೈಗೊಳ್ಳುವಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಮೇ 13 ರಂದು ರಾತ್ರಿ ಟಿಳಕವಾಡಿ ಪೊಲೀಸ ಠಾಣೆಯ ಹೊರಗೆ ಧರಣಿ ಆಂದೋಲನ ನಡೆಸಿದರು. ಈ ಸಂದರ್ಭದಲ್ಲಿ ಬಜರಂಗ ದಳದ ಕಾರ್ಯಕರ್ತರು ಪೊಲೀಸ ಠಾಣೆಯ ಹೊರಗೆ ಕುಳಿತುಕೊಂಡು ಹನುಮಾನ ಚಾಲೀಸಾ ಪಠಿಸಿದರು. ಈ ಪ್ರಕರಣದಲ್ಲಿ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಲಾಗುವುದು ಎಂದು ಪೊಲೀಸ ಆಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ ಎಂದು `ಪುಢಾರಿ’ ದಿನಪತ್ರಿಕೆಯಲ್ಲಿ ಸುದ್ದಿ ನೀಡಿದೆ.

ಈ ಹಿಂದೆಯೂ ಇದೇ ಚುನಾವಣಾಕ್ಷೇತ್ರದದಲ್ಲಿ 2018 ರ ವಿಧಾನಸಭೆ ಚುನಾವಣೆಯ ಕಾಲದಲ್ಲಿ ಚುನಾವಣೆಯ ಮೊದಲು ನಡೆದ ಮೆರವಣಿಗೆಯಲ್ಲಿ `ಪಾಕಿಸ್ತಾನ ಝಿಂದಾಬಾದ’ ಘೋಷಣೆಯನ್ನು ಕೂಗಲಾಗಿತ್ತೆಂದು ಆರೋಪಿಸಲಾಗಿತ್ತು. ಆ ಸಮಯದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಗಲಭೆ ನಡೆದಿತ್ತು ಮತ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು.

ಸಂಪಾದಕರ ನಿಲುವು

ಇಂತಹ ಘೋಷಣೆಯನ್ನು ಯಾರು ನೀಡುತ್ತಾರೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಪಾಕಿಸ್ತಾನ ಪ್ರೇಮಿಗಳಿಂದ ಇಂತಹ ಘೋಷಣೆ ಅನೇಕ ಸ್ಥಳಗಳಲ್ಲಿ ಆಗತೊಡಗಿದರೆ ಆಶ್ಚರ್ಯವೇನಿಲ್ಲ !