ಮುಸಲ್ಮಾನರು ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಪ್ರವೇಶಿಸಲು ಪ್ರಯತ್ನಿಸಿರುವ ಪ್ರಕರಣ
ತ್ರ್ಯಂಬಕೇಶ್ವರ (ನಾಸಿಕ ಜಿಲ್ಲೆ)- ಇಲ್ಲಿ ಮೇ 13 ರಂದು ರಾತ್ರಿ ಮುಸಲ್ಮಾನರ ಸ್ಥಳೀಯ ಉರೂಸನ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ಮಂದಿರವನ್ನು ಪ್ರವೇಶಿಸಲು ಹಟ ಹಿಡಿದು ಶಿವಲಿಂಗದ ಮೇಲೆ ಹಸಿರು ಶಾಲನ್ನು ಹೊದಿಸುವುದಾಗಿ ಹಟ ಹಿಡಿದರು. ಅಲ್ಲಿಯ ಭದ್ರತಾ ಸಿಬ್ಬಂದಿಗಳು ಮುಸಲ್ಮಾನರನ್ನು ತಡೆದಿದ್ದರಿಂದ ಮುಂದಿನ ಅನರ್ಥ ದೂರವಾಗಿತ್ತು; ಆದರೆ ಈ ವಿಷಯದಲ್ಲಿ ಉರೂಸ ಆಯೋಜಕರಾದ ಮತೀನ ಸಯ್ಯದರವರು ಒಂದು ವಾರ್ತಾವಾಹಿನಿಯ ಪ್ರತಿನಿಧಿಯೊಂದಿಗೆ ಮಾತನಾಡುವಾಗ ತ್ರ್ಯಂಬಕೇಶ್ವರ ನಗರದ ಉರೂಸನ ಪರಂಪರೆಯು ಅನೇಕ ವರ್ಷಗಳಿಂದ ಇದ್ದು ಅದರ ಸೇವಕರು ತ್ರ್ಯಂಬಕೇಶ್ವರ ದೇವಸ್ಥಾನದ ಉತ್ತರ ದ್ವಾರದ ಮೆಟ್ಟಿಲಿನ ಬಳಿ ಬಂದು ತ್ರ್ಯಂಬಕೇಶ್ವರನಿಗೆ ಶ್ರದ್ಧೆಯಿಂದ ಧೂಪವನ್ನು ತೋರಿಸುತ್ತಾರೆ ಮತ್ತು ಮುಂದುವರಿಯುತ್ತಾರೆ. ಆ ದಿನ ನಾವು ಧೂಪವನ್ನು ತೋರಿಸಲು ಬಂದಿದ್ದೆವು. ಉತ್ತರ ಮಹಾದ್ವಾರದ ಹತ್ತಿರ ಹೋಗಿ ಧೂಪವನ್ನು ತೋರಿಸುವ ಆಗ್ರಹವಿತ್ತು. ನಾವು ದೇವಸ್ಥಾನದ ಗರ್ಭಗುಡಿಗೆ ಹೋಗಲು ಪ್ರಯತ್ನಿಸಿರಲಿಲ್ಲ; ಹೀಗಿರುವಾಗ ಈ ಬಾರಿ ಈ ವಾದವೇಕೆ ? ಎಂದು ಪ್ರಶ್ನಿಸಿದ್ದಾರೆ. ಮತೀನ ಸಯ್ಯದರವರು ವಾರ್ತಾವಾಹಿನಿಯ ಕ್ಯಾಮೆರಾ ಎದುರಿಗೆ ಮಾತನಾಡಲು ಹಿಂದೆಮುಂದೆ ನೋಡಿದರು.
ಕಳೆದ 2 ದಿನಗಳಿಂದ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಪ್ರವೇಶ ಪಡೆಯುವ ಬಗ್ಗೆ ವಾದ ಉದ್ಭವಿಸಿದೆ. ಆದರೆ ಈ ವಾದವು ಅದೇ ದಿನ ಮುಗಿದಿರುವುದಾಗಿ ಹೇಳಲಾಗುತ್ತಿದೆ. ದೇವಸ್ಥಾನವು ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಪೊಲೀಸರಿಗೆ ಪತ್ರವನ್ನು ನೀಡಿದೆ. ಇದರಂತೆಯೇ ಪೊಲೀಸರೂ ಎರಡೂ ಪಕ್ಷಗಳೊಂದಿಗೆ ಆಳವಾಗಿ ಚರ್ಚಿಸಿ ಈ ವಾದವು ತಪ್ಪು ತಿಳುವಳಿಕೆಯಿಂದ ಆಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತ ವಾದವು ಮುಕ್ತಾಯವಾಗಿರುವುದಾಗಿ ಹೇಳಿದ್ದಾರೆ. ಈಗ ಉಪಮುಖ್ಯಮಂತ್ರಿ ದೇವೇಂದ್ರ ಫಡನವಿಸರು ಈ ಪ್ರಕರಣವನ್ನು ಎಸ್. ಐ. ಟಿ. ಗೆ ತನಿಖೆಗಾಗಿ ಒಪ್ಪಿಸಿದ್ದಾರೆ.
ಸಂಪಾದಕೀಯ ನಿಲುವುಇಸ್ಲಾಮಿನಲ್ಲಿ ಉರುಸ ಆಚರಿಸಲಾದರೆ, ಹಿಂದೂ ಧರ್ಮದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಜಾತ್ರೆಗಳನ್ನು ನಡೆಸಲಾಗುತ್ತದೆ. ಉರೂಸ ಮತ್ತು ತ್ರ್ಯಂಬಕೇಶ್ವರ ದೇವಸ್ಥಾನಕ್ಕೆ ಏನು ಸಂಬಂಧ ? ಮುಸಲ್ಮಾನರು ದೇವಸ್ಥಾನವನ್ನು ಪ್ರವೇಶಿಸಲು ಪಟ್ಟು ಹಿಡಿಯುವುದು, ಇದು ಯಾವ ತತ್ವವಾಗಿದೆ ? ಹಿಂದೂಗಳು ಮಸೀದಿಗೆ ನುಗ್ಗಿದರೆ ಮುಸಲ್ಮಾನರಿಗೆ ಇಷ್ಟವಾಗುವುದೇ ? ಈ ಪ್ರಕರಣದಲ್ಲಿ ಪೊಲೀಸರು ಕೇವಲ ಪ್ರೇಕ್ಷಕರಂತೆ ನೋಡದೇ ದೋಷಿಗಳ ಮೇಲೆ ಕಠೀಣ ಕ್ರಮ ಕೈಕೊಳ್ಳಬೇಕು ! |