ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!

ಮನಿಲಾ (ಫಿಲಿಪೈನ್ಸ್) ಇಲ್ಲಿನ ‘ಆಸಿಯಾನ್’ ದೇಶಗಳ ಸಭೆಯಲ್ಲಿ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರ ಕರೆ

(‘ಆಸಿಯಾನ್’ ಎಂದರೆ ಆಗ್ನೇಯ ಏಷ್ಯಾದ ದೇಶಗಳ ಸಂಘಟನೆ. ಇದರಲ್ಲಿ ಬ್ರೂನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳು ಸೇರಿವೆ.)

ಮನಿಲಾ (ಫಿಲಿಪೈನ್ಸ್) – ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಇರಬೇಕು. ಭಯೋತ್ಪಾದಕ ಕೃತ್ಯಗಳ ಪರಿಣಾಮವನ್ನು ಅನುಭವಿಸಲೇಬೇಕಾಗುತ್ತದೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ಭಯೋತ್ಪಾದನೆಗೆ ಸೊಪ್ಪು ಹಾಕುವ ಆರ್ಥಿಕ ನೆರವನ್ನು ತಡೆಯುವುದಕ್ಕೆ ನಾವು ಆದ್ಯತೆ ನೀಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇಲ್ಲಿ ಆಯೋಜಿಸಲಾಗಿದ್ದ ೩೩ ನೇ ‘ಆಸಿಯಾನ್ ರೀಜನಲ್ ಫೋರಂ’ನ ಸಚಿವ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಕರೆ ನೀಡಿದರು. ಇದರೊಂದಿಗೆ ಅಂತರರಾಷ್ಟ್ರೀಯ ನೌಕಾ ಸಂಚಾರ ಮಾರ್ಗಗಳು ಸುರಕ್ಷಿತವಾಗಿ ಮತ್ತು ಮುಕ್ತವಾಗಿರುವಂತೆ ನೋಡಿಕೊಳ್ಳಲು ಅವರು ಮನವಿ ಮಾಡಿದರು.

ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳ ಮೂಲಕ ನಡೆಯುವ ವ್ಯಾಪಾರ ಸುರಕ್ಷಿತವಾಗಿರಬೇಕು!

ಹಾರ್ಮುಜ್ ಜಲಸಂಧಿಯ ಸಮೀಪದ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತು ಮಾತನಾಡಿದ ಡಾ. ಜೈಶಂಕರ್ ಅವರು, ಸಮುದ್ರ ನೌಕಾ ಸಾರಿಗೆ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಜಲಮಾರ್ಗಗಳ ಮೂಲಕ ನಡೆಯುವ ವ್ಯಾಪಾರವು ಸುರಕ್ಷಿತವಾಗಿ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಬೇಕು. ಈ ದಾಳಿಗಳಲ್ಲಿ ಭಾರತೀಯ ನಾವಿಕರೂ ಮೃತಪಟ್ಟಿದ್ದಾರೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಯೋತ್ಪಾದನೆಯ ವಿರುದ್ಧ ಅಮೆರಿಕ ಮತ್ತು ಇಸ್ರೇಲ್‌ನಂತೆ ಭಾರತವೂ ನಿರ್ಣಾಯಕ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ!