ಪೊಲೀಸರ ಮೇಲೆಯೂ ದಾಳಿ
ಜಳಗಾಂವ, ಮೇ 13(ವಾರ್ತೆ) – ಜಿಲ್ಲೆಯ ಯಾವಲ ತಾಲೂಕಿನ ಫೈಜಪುರನಲ್ಲಿ ಶ್ರೀರಾಮ ಚಿತ್ರಮಂದಿರದಲ್ಲಿ ಮೇ 12 ರಂದು ಮಧ್ಯಾಹ್ನ 12 ಗಂಟೆಗೆ `ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರಸಾರಣ ಪ್ರಾರಂಭವಾಗಿತ್ತು. ಕೆಲವು ಹಿಂದುತ್ವನಿಷ್ಠರು ಪರಿಸರದಲ್ಲಿರುವ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಈ ಚಲನಚಿತ್ರವನ್ನು ಉಚಿತವಾಗಿ ತೋರಿಸಲು ಆಯೋಜಿಸಿದ್ದರು. ಚಲನಚಿತ್ರದ ಹಿಂಬದಿಯಲ್ಲಿ ಒಂದು ಮಸೀದಿ ಇದೆ. ಮಧ್ಯಾಹ್ನ 2.30 ಗಂಟೆಗೆ ನಮಾಜ ಬಳಿಕ ಕೆಲವು ಮತಾಂಧರು ಘೋಷಣೆಯನ್ನು ಕೂಗುತ್ತಾ ಚಲನಚಿತ್ರಗೃಹ ಮತ್ತು ಮಹಿಳಾ ವೀಕ್ಷಕರ ಮೇಲೆ ಕಲ್ಲನ್ನು ತೂರಿದರು, ಹಾಗೆಯೇ ಚಲನಚಿತ್ರದ ಫಲಕವನ್ನು ಹರಿದರು. ಘಟನಾಸ್ಥಳಕ್ಕೆ ಪೊಲೀಸರು ತಲುಪಿದ ಕೂಡಲೇ ಮತಾಂಧರು ಅವರ ಮೇಲೆಯೂ ದಾಳಿ ನಡೆಸಿದರು. (ಉದ್ಧಟ ಮತಾಂಧರು ! – ಸಂಪಾದಕರು)
ಮತಾಂಧರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಂದ ಮೀನಾಮೇಷ !
ಘಟನೆಯನ್ನು ನಿಷೇಧಿಸಲು ಮತ್ತು ಕಲ್ಲು ತೂರಾಟದ ಮತಾಂಧರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಹಿಂದೂಗಳು ಫೈಜ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದರು. ಚಿತ್ರಮಂದಿರ ಹಾಗೂ ಚೌಕದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ’, ಪೊಲೀಸರು ಭರವಸೆ ನೀಡಿದ್ದಾರೆ. ಸಂಜೆ 5 ಗಂಟೆಯವರೆಗೂ ಯಾವುದೇ ಅಪರಾಧ ದಾಖಲಾಗಿಲ್ಲ. (ಯಾವಾಗಲೂ ಹಿಂದೂಗಳ ವಿರುದ್ಧ ಕೇಸುಗಳನ್ನು ದಾಖಲಿಸುವ ಆತುರದಲ್ಲಿರುವ ಪೊಲೀಸರು ಮತಾಂಧರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಲ್ಲಿ ಮೀನಾಮೇಷ ಮಾಡುತ್ತಾರೆ ಎಂಬುದನ್ನು ಗಮನಿಸಿ ! – ಸಂಪಾದಕರು)
ಸಂಪಾದಕೀಯ ನಿಲುವುಇದರಿಂದ ಮತಾಂದರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆಯೆನ್ನುವುದು ಸ್ಪಷ್ಟವಾಗಿದೆ ! ಕಲ್ಲು ತೂರಾಟ ನಡೆಸಿ ಕಾನೂನನ್ನು ಕೈಗೆತ್ತಿಕೊಳ್ಳುವ ಮತಾಂಧರಿಗೆ ಪೊಲೀಸರು ಕಠಿಣ ಶಿಕ್ಷೆಯನ್ನು ನೀಡುವ ಆವಶ್ಯಕತೆಯಿದೆ ! ಇದೇ ರೀತಿ ಹಿಂದೂಗಳು ಹಿಂದೂ ವಿರೋಧಿ ಚಲನಚಿತ್ರದ ಸಂದರ್ಭದಲ್ಲಿ ಮಾಡಿದ್ದರೆ, ಇಲ್ಲಿಯವರೆಗೆ ಕಾಂಗ್ರೆಸ್, ಸಮಾಜವಾದಿ, ಬುದ್ಧಿವಾದಿ, ವ್ಯಕ್ತಿ ಸ್ವಾತಂತ್ರ್ಯವಾದಿಗಳು, ನಾಸ್ತಿಕರು ಮುಂತಾದವರು ಹಿಂದೂಗಳನ್ನು ತಾಲಿಬಾನಿಗಳೆಂದು ನಿರ್ಧರಿಸಿ `ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ಮಾಡಲಾಗುತ್ತಿದೆ’, `ಪ್ರಜಾಪ್ರಭುತ್ವ ಅಪಾಯದಲ್ಲಿದೆ’, ಎಂದು ಕೂಗಾಡುತ್ತಿದ್ದರು. ಈಗ ಮಾತ್ರ ಈ ಜನರ ಮೌನಕ್ಕೆ ಶರಣಾಗಿದ್ದಾರೆ ! |