ದೆಹಲಿಯಲ್ಲಿ ಮಹಿಳೆಯೊಬ್ಬಳ ಮತಾಂತರದ ಸುದ್ದಿಯನ್ನು ವೆಬ್ ಸೈಟ್ ನಿಂದ ಅಳಿಸಲು ದೆಹಲಿ ಉಚ್ಚನ್ಯಾಯಾಲಯದಿಂದ ಆದೇಶ

ಆರೋಪಿಯ ಜೀವಕ್ಕೆ ಅಪಾಯ ಉಂಟಾಗುವುದಾಗಿ ನ್ಯಾಯಾಲಯದ ಅಭಿಪ್ರಾಯ !

ನವ ದೆಹಲಿ – ದೆಹಲಿಯಲ್ಲಿ ವಾಸಿಸುವ ಮಹಿಳೆಯೊಬ್ಬಳು ಅವಳ ಮುಸ್ಲಿಂ ಪ್ರೇಮಿಯಿಂದ ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸಿದ್ದ ಘಟನೆಯ ವಾರ್ತೆ ಮತ್ತು ವಿಡಿಯೋವನ್ನು ವೆಬ್ ಸೈಟ್ ನಿಂದ ಅಳಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಟ್ವಿಟರ್, ಗೂಗಲ್ ಮತ್ತು ಇತರ ಸಾಮಾಜಿಕ ಮಾಧ್ಯಮದವರಿಗೆ ಆದೇಶಿಸಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡಕಾಸ್ಟಿಂಗ್ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರಕ್ಕೂ ನೋಟಿಸ್ ನೀಡಲಾಗಿದೆ. ‘ಸುದ್ದಿ ತೆಗೆದು ಹಾಕದಿದ್ದರೆ ಕ್ರಮ ಕೈಗೊಳ್ಳುವುದಾಗಿ’ ನ್ಯಾಯಾಲಯವು ಎಚ್ಚರಿಕೆಯನ್ನೂ ನೀಡಿದೆ.

೧. ನ್ಯಾಯಾಲಯವು ಆದೇಶ ನೀಡುವಾಗ, “ಇದು ಒಂದು ಗಂಭೀರ ಅಪಾಯವಾಗಿದೆ; ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುದ್ದಿಗಳಿಗೆ ಜನರು ಭಿನ್ನಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಅರ್ಜಿದಾರರ ಸುರಕ್ಷತೆಗೆ ಸಂಬಂಧಿಸಿದಂತೆ ಈ ಸುದ್ದಿಗಳನ್ನು ಅಳಿಸಬೇಕು ಎಂದು ಹೇಳಿದೆ.

೨. ಅರ್ಜಿದಾರರ ಹೆಸರು ಅಜ್ಮತ್ ಅಲಿ ಖಾನ್ ಎಂದಾಗಿದೆ. ಆತ, ಕಳೆದ ೮ ವರ್ಷಗಳಿಂದ ಈ ಮಹಿಳೆಯೊಂದಿಗೆ ‘ಲಿವ್ ಇನ್ ರಿಲೇಶನ್ ಶಿಪ್’ (ಮದುವೆಯಾಗದೆ ಲಿವಿಂಗ್ ಟುಗೆದರ್) ನಲ್ಲಿದ್ದೇನೆ. ಈ ಮಹಿಳೆ ದೂರು ನೀಡಿದ ನಂತರ, ಅದರ ಸುದ್ದಿ ವೈರಲ್ ಆಗಿದೆ. ವೆಬ್ ಸೈಟ್ ಗಳಿಂದ ಆ ಸುದ್ದಿಯನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಲಾಗಿದೆ. ಇಂತಹ ವರದಿಗಳಿಂದ ಪ್ರಾಣ, ಘನತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವಿದೆ ಎಂದು ಖಾನ್ ಹೇಳಿದ್ದಾನೆ. ಅವನ ವಿರುದ್ಧವಿರುವ ಮತಾಂತರದ ಆರೋಪವೂ ಸುಳ್ಳು ಎಂದು ಅವನು ಹೇಳಿದ್ದಾನೆ.