ಫಾರೂಕ್ ಅಬ್ದುಲ್ಲಾ ಇಸ್ಲಾಂ ವಿರೋಧಿ ! – ಶ್ರೀನಗರದ ಮೇಯರ್

ಮದೀನಾದಲ್ಲಿ ‘ಅಲ್-ನವಾಬಿ’ ಮಸೀದಿಗೆ ಅವಮಾನ ಮಾಡಿದ ಆರೋಪ !

ಎಡಗಡಯಿಂದ ಫಾರೂಕ್ ಅಬ್ದುಲ್ಲಾ ಮತ್ತು ನಗರ ಸೇವಕ ಜುನೈದ್ ಅಜೀಂ ಮಟ್ಟು

ಶ್ರೀನಗರ – ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಇಸ್ಲಾಂ ವಿರೋಧಿ ಎಂದು ಇಲ್ಲಿಯ ನಗರ ಸೇವಕ ಜುನೈದ್ ಅಜೀಂ ಮಟ್ಟು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಟ್ವೀಟ್ ಮೂಲಕ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಬ್ದುಲ್ಲಾನ ಹಿಂದೆ ನಟರಾಜನ ವಿಗ್ರಹವಿದೆ ಮತ್ತು ಅದರ ಕೆಳಗೆ ಮದೀನಾದಲ್ಲಿರುವ ‘ಅಲ್-ನವಾಬಿ ಮಸೀದಿ’ ಛಾಯಾಚಿತ್ರವಿದೆ. ಫಾರೂಕ್ ಅಬ್ದುಲ್ಲಾ ಅವರು ಹಿಂದೂ ದೇವತೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಮಟ್ಟು ಅವರು ಟೀಕಿಸಿದ್ದಾರೆ.

ಮೇ ೧೨ ರಂದು, ಅಬ್ದುಲ್ಲಾ ಅವರು ಕಾಶ್ಮೀರದ ಮುಸ್ಲಿಂ ಯುವಕರಿಗೆ ವೆಬ್‌ಸೈಟ್ ಮೂಲಕ ಕರೆ ನೀಡುತ್ತಾ, ಪ್ರತಿಯೊಬ್ಬ ಕಾಶ್ಮೀರಿಯೂ ತಮ್ಮ ರಾಜ್ಯಕ್ಕೆ ಹಿಂದಿನ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯಬೇಕೆಂದು ಬಯಸುತ್ತಾರೆ ಎಂದು ಹೇಳಿದರು. ಅರಾಜಕತೆ ಮತ್ತು ನಿರುದ್ಯೋಗ ಹೆಚ್ಚಿದೆ ಎಂದು ಆರೋಪಿಸಿ, ಯುವಕರಿಗೆ ಇಸ್ಲಾಮಿಕ್ ಶಿಕ್ಷಣವನ್ನು ಅನುಸರಿಸುವಂತೆ ಕೇಳಿಕೊಂಡಿದ್ದರು. ಮಟ್ಟು ಅವರು ಈ ಹೇಳಿಕೆಯನ್ನು ‘ನಾಟಕ’ ಎಂದು ಸಂಬೊಧಿಸಿ ಅಬ್ದುಲ್ಲಾ ಅವರನ್ನು ‘ಮುರ್ತದ’ ಅಂದರೆ ಇಸ್ಲಾಮಿಕ್ ತತ್ವಗಳನ್ನು ತ್ಯಜಿಸಿದವನು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ಬಗ್ಗೆ ಫಾರೂಕ್ ಅಬ್ದುಲ್ಲಾ ಏನು ಹೇಳುವರು ?

ಮುಸ್ಲಿಮರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಮೊದಲು ಕಟ್ಟರ ಮುಸಲ್ಮಾನರೇಯಾಗಿರುತ್ತಾರೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ ! ಇದರಿಂದ ಶ್ರೇಷ್ಠ ಹಿಂದೂ ಧರ್ಮವನ್ನು ದ್ವೇಷಿಸುವ ಹಿಂದೂ ನಾಯಕರು ಏನಾದರೂ ಕಲಿಯುತ್ತಾರೆಯೇ ?