
ಬಹರೈಚ್ (ಉತ್ತರ ಪ್ರದೇಶ): ಇಲ್ಲಿನ ಭಾರತ-ನೇಪಾಳ ಗಡಿಯಲ್ಲಿ ಸಶಸ್ತ್ರ ಸೀಮಾ ದಳ ಮತ್ತು ಪೊಲೀಸರು ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆ ‘ವಾರಿಸ್ ಪಂಜಾಬ್ ದೇ’ಗೆ ಸಂಬಂಧಿಸಿದ ಹಾಗೂ ಪರಾರಿಯಾಗಿದ್ದ ವಿಕ್ರಮ್‌ಜಿತ್ ಸಿಂಗ್ ಮತ್ತು ‘ವೀಸಾ’ ಇಲ್ಲದೆ ಭಾರತಕ್ಕೆ ಪ್ರವೇಶಿಸುತ್ತಿದ್ದ ಅಮೆರಿಕನ್ ಸಿಖ್ ಪ್ರಜೆ ಮನ್‌ಬೀರ್ ಸಿಂಗ್ ಧಿಲ್ಲೋನ್ ಅವರನ್ನು ಬಂಧಿಸಿದ್ದಾರೆ. ಈ ಸಂಪೂರ್ಣ ಪ್ರಕರಣದಲ್ಲಿ ನೆರವು ನೀಡಿದ ಮೂವರು ಸ್ಥಳೀಯರು ಸೇರಿದಂತೆ ಒಟ್ಟು ೫ ಜನರನ್ನು ಬಂಧಿಸಲಾಗಿದೆ. ವಿಕ್ರಮ್‌ಜಿತ್ ಸಿಂಗ್ ಪಂಜಾಬ್‌ನ ರೂಪನಗರದ ನಿವಾಸಿಯಾಗಿದ್ದು, ಈತ ಫೆಬ್ರವರಿ ೨೦೨೩ ರಲ್ಲಿ ಪಂಜಾಬ್‌ನ ಅಜನಾಲಾ ಪೊಲೀಸ್ ಠಾಣೆಯಲ್ಲಿ ನಡೆದ ಹಿಂಸಾಚಾರ ಮತ್ತು ಕಲಂ ೩೦೭ ಪ್ರಕರಣದಲ್ಲಿ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದನು.
ಮನ್‌ಬೀರ್ ಸಿಂಗ್ ಧಿಲ್ಲೋನ್ ಮೂಲತಃ ಪಂಜಾಬ್‌ನ ಮೋಗಾ ನಿವಾಸಿಯಾಗಿದ್ದು ಅಮೆರಿಕದ ಪ್ರಜೆಯಾಗಿದ್ದಾನೆ. ಈತನ ಬಳಿ ಭಾರತದ ವೀಸಾ ಇರಲಿಲ್ಲ. ವಿಕ್ರಮ್‌ಜಿತ್ ಆತನನ್ನು ಅಕ್ರಮ ಮಾರ್ಗದ ಮೂಲಕ ಗಡಿ ದಾಟಿಸಿ ತರುತ್ತಿದ್ದನು. ಮನ್‌ಬೀರ್‌ನೊಂದಿಗೆ ಆತನ ಪತ್ನಿ ರೇಲಿನ್ ಅಲೆಕ್ಸಾಂಡರ್ ಧಿಲ್ಲೋನ್ ಮತ್ತು ೮ ತಿಂಗಳ ಹೆಣ್ಣು ಮಗು ಕೂಡ ಇದ್ದರು. ದಾಖಲೆಗಳು ಸರಿಯಾಗಿದ್ದರಿಂದ ನಿಯಮಾನುಸಾರ ಅವರಿಗೆ ಭಾರತಕ್ಕೆ ಪ್ರವೇಶ ನೀಡಲಾಯಿತು. ಈ ಅಕ್ರಮ ವಲಸೆಗೆ ನೆರವು ನೀಡಿದ ಸ್ಥಳೀಯ ಕಳ್ಳಸಾಗಣೆ ಮಾಡುವವನಾದ ಸುರೇಶ್ ಕುಮಾರ್ ಪಾಠಕ್, ದಿಲೀಪ್ ಉಪಾಧ್ಯಾಯ ಮತ್ತು ವಾಹನ ಚಾಲಕ ರಾಹುಲ್ ಕುಮಾರ್ ಅವರನ್ನು ಕೂಡ ಬಂಧಿಸಲಾಗಿದೆ.
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ
ಸಿಲಿಗುರಿ ಕಾರಿಡಾರ್ ಈಗ ‘ಚಿಕನ್ ನೆಕ್’ ಆಗಿ ಉಳಿದಿಲ್ಲ, ಬದಲಿಗೆ ‘ಎಲಿಫೆಂಟ್ಸ್ ಟ್ರಂಕ್’ ಆಗಿದೆ!
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters