‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’

ಜಂತರ್ ಮಂತರ್‌ ಪ್ರತಿಭಟನೆಯ ಕುರಿತು ಬಾಂಗ್ಲಾದೇಶ ಸರಕಾರದ ಅನಗತ್ಯ ಹೇಳಿಕೆ

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಾಮಾ ಉಬೈದ್

ಢಾಕಾ (ಬಾಂಗ್ಲಾದೇಶ): “ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ಕೇಳಿದೆವು. ನಮ್ಮ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಬೇಕು ಎಂಬುದು ಬಾಂಗ್ಲಾದೇಶ ಸರಕಾರದ ಆಶಯವಾಗಿದೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು ತನ್ನ ಜನರ ಸಮಸ್ಯೆಗಳನ್ನು ಆಲಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುತ್ತದೆ ಎಂದು ನಮ್ಮ ಸರಕಾರ ಆಶಿಸುತ್ತದೆ,” ಎಂದು ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಥಿತ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಉಬೈದ್ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸುವುದನ್ನು ಪಾಕಿಸ್ತಾನ ಸರಕಾರ ತಪ್ಪಿಸಲು ಯತ್ನಿಸಿದೆ.

ಬಾಂಗ್ಲಾದೇಶದ ಹಲವಾರು ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹೊರತುಪಡಿಸಿ, ಶ್ರೀಲಂಕಾ ಮತ್ತು ನೇಪಾಳ ದೇಶಗಳ ಮಾಧ್ಯಮಗಳೂ ಕೂಡ ಭಾರತದ ಯುವಕರ ನೇತೃತ್ವದ ಈ ಪ್ರತಿಭಟನೆಗೆ ಪ್ರಮುಖ ಪ್ರಚಾರ ನೀಡಿವೆ.

ಸಂಪಾದಕೀಯ ನಿಲುವು

ಯಾವ ದೇಶದಲ್ಲಿ ಅನೇಕ ಬಾರಿ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ ದಂಗೆ ಮಾಡಲಾಯಿತೊ ಮತ್ತು ಎರಡು ವರ್ಷಗಳ ಹಿಂದೆ ಕಥಿತ ವಿದ್ಯಾರ್ಥಿಗಳು ಹಿಂಸಾಚಾರ ನಡೆಸಿದರೊ, ಆ ದೇಶದ ಸರಕಾರವೇ ಭಾರತಕ್ಕೆ ಸಲಹೆ ನೀಡುತ್ತದೆ ಎಂದರೆ ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ಸಂಗತಿ ಬೇರೇನಿದೆ?