ಚೀನಾ ಮೂರನೇ ಸ್ಥಾನದಲ್ಲಿದ್ದರೆ, ಅಮೆರಿಕ ೧೬ ನೇ ಸ್ಥಾನದಲ್ಲಿದೆ!
(ನಾರ್ಸಿಸಿಸ್ಟ್ ಎಂದರೆ ಸ್ವಕೇಂದ್ರಿತ. ಇಂತಹ ವ್ಯಕ್ತಿಗಳು ಅತಿಯಾಗಿ ಸ್ವಮಗ್ನರಾಗಿರುತ್ತಾರೆ. ಅವರ ನಡವಳಿಕೆಯಲ್ಲಿ ತಮ್ಮದೇ ಪ್ರಾಮುಖ್ಯತೆಯ ಅತಿಯಾದ ಅವಾಸ್ತವಿಕವೆನಿಸುವಂತಹ ಭಾವನೆಯಿರುತ್ತದೆ. ಸದಾ ಪ್ರಶಂಸೆ ಪಡೆಯುವ ತೀವ್ರ ಬಯಕೆ ಮತ್ತು ಇತರರ ಬಗ್ಗೆ ಸಹಾನುಭೂತಿಯ ಸಂಪೂರ್ಣ ಅಭಾವ ಇಂತಹ ವ್ಯಕ್ತಿಗಳಲ್ಲಿರುತ್ತದೆ.)

ಲ್ಯಾನ್ಸಿಂಗ್ (ಅಮೆರಿಕ) – ‘ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯ’ದ ಸಂಶೋಧಕರು ನಡೆಸಿದ ಬೃಹತ್ ಅಧ್ಯಯನವೊಂದರಲ್ಲಿ ಜನರ ವ್ಯಕ್ತಿತ್ವ ಮತ್ತು ಅವರಲ್ಲಿರುವ ಸ್ವಕೇಂದ್ರಿತ ವರ್ತನೆಯ ಕುರಿತು ಆಶ್ಚರ್ಯಕರ ತೀರ್ಮಾನಗಳನ್ನು ಮಂಡಿಸಿದ್ದಾರೆ. ಸಾಮಾನ್ಯವಾಗಿ ಅಮೆರಿಕನ್ನರು ಸ್ವತಃ ತಮಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಈ ಸಂಶೋಧನೆಯು ಜರ್ಮರಿಯಲ್ಲಿ ಇಂತಹ ಜನರ ಸಂಖ್ಯೆ ಅತಿ ಹೆಚ್ಚಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ. ತದನಂತರ ಇರಾಕ್, ಚೀನಾ, ನೇಪಾಳ ಮತ್ತು ದಕ್ಷಿಣ ಕೊರಿಯಾಗಳು ಬರುತ್ತವೆ. ಸಂಶೋಧನೆಯಲ್ಲಿ ೫೩ ದೇಶಗಳ ೪೫ ಸಾವಿರದ ೮೦೦ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಅಮೆರಿಕ ೧೬ ನೇ ಸ್ಥಾನದಲ್ಲಿದೆ.
ಹೇಗೆ ನಡೆಸಲಾಯಿತು ಸಂಶೋಧನೆ ?
೧. ಸಂಶೋಧನೆಯಲ್ಲಿ ಭಾಗವಹಿಸಿದವರಿಗೆ ‘ನನ್ನ ಗಮನಾರ್ಹ ಸಾಧನೆಯಿಂದಾಗಿ ನಾನು ಆಕರ್ಷಣೆಯ ಕೇಂದ್ರವಾಗುತ್ತೇನೆ’ ಮತ್ತು ‘ನನ್ನ ಪ್ರತಿಸ್ಪರ್ಧಿಗಳು ವಿಫಲರಾಗಬೇಕು ಎನ್ನುವುದು ನನ್ನ ಇಚ್ಛೆಯಾಗಿದೆ’, ಎಂಬಂತಹ ಹೇಳಿಕೆಗಳಿಗೆ ಅವರು ಎಷ್ಟು ಸಮ್ಮತಿಸುತ್ತಾರೆ ಎಂದು ಕೇಳಲಾಗಿತ್ತು.
೨. ಸಂಶೋಧನೆಯಿಂದ ಸ್ವಕೇಂದ್ರಿತತೆಯ ೨ ಪ್ರಕಾರಗಳು ಸ್ಪಷ್ಟವಾಗಿವೆ :
ಅ. ‘ಪ್ರಶಂಸೆ-ಪ್ರಿಯತೆ’ : ವ್ಯಕ್ತಿಯು ತನ್ನನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಲು, ಗಮನ ಸೆಳೆಯಲು ಮತ್ತು ಇತರರನ್ನು ಪ್ರಭಾವಿಸಲು ಪ್ರಯತ್ನಿಸುತ್ತಾನೆ.
ಆ. ‘ಪ್ರತಿಸ್ಪರ್ಧೆಯ-ವೃತ್ತಿ’ : ಸ್ಪರ್ಧೆ, ಇತರರನ್ನು ಕೀಳಾಗಿ ಕಾಣುವುದು ಮತ್ತು ಪ್ರತಿಸ್ಪರ್ಧಿಗಳ ವೈಫಲ್ಯವನ್ನು ಬಯಸುವುದು ಮುಂತಾದ ಪ್ರವೃತ್ತಿಗಳು ಇದರಲ್ಲಿ ಸೇರಿವೆ.
೩. ಈ ಸ್ವಭಾವಗಳ ಮಾರಕ ಪರಿಣಾಮಗಳು : ಪ್ರಶಂಸೆ-ಪ್ರಿಯತೆಯಿಂದಾಗಿ ತಾತ್ಕಾಲಿಕ ಆತ್ಮವಿಶ್ವಾಸ ಮತ್ತು ಜನಪ್ರಿಯತೆ ಹೆಚ್ಚಾಗಬಹುದಾದರೂ, ಸ್ಪರ್ಧಾ-ವೃತ್ತಿಯಿಂದಾಗಿ ದೀರ್ಘಾವಧಿಯಲ್ಲಿ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಬಹುದು, ಆತ್ಮಗೌರವ ಕಡಿಮೆಯಾಗಬಹುದು ಮತ್ತು ಸಾಮಾಜಿಕ ಸಂಘರ್ಷಗಳು ಉದ್ಭವಿಸಬಹುದು ಎಂದು ಸಂಶೋಧಕರು ಹೇಳುತ್ತಾರೆ.
೪. ಯುವಜನರಲ್ಲಿ ‘ನಾರ್ಸಿಸಿಸಮ್’ ಪ್ರಮಾಣ ಹೆಚ್ಚು : ವೃದ್ಧರಿಗೆ ಹೋಲಿಸಿದರೆ ಯುವಜನರಲ್ಲಿ ‘ನಾರ್ಸಿಸಿಸಮ್’ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ ಎಂಬುದು ಸರಿಸುಮಾರು ಎಲ್ಲಾ ದೇಶಗಳಲ್ಲಿಯೂ ಕಂಡುಬಂದ ಸಾಮಾನ್ಯ ಪ್ರವೃತ್ತಿಯಾಗಿದೆ. ಇದಲ್ಲದೆ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಇದರ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.
೫. ಸಾಮೂಹಿಕ ಸಂಸ್ಕೃತಿಯಿರುವ ದೇಶಗಳ ಕುರಿತು ಆಶ್ಚರ್ಯಕರ ತೀರ್ಮಾನ : ಸಾಮೂಹಿಕ ಸಂಸ್ಕೃತಿಯಿರುವ ದೇಶಗಳ ಜನರಲ್ಲಿಯೂ ‘ನಾರ್ಸಿಸಿಸಮ್’ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಈ ಹಿಂದೆ ಇಂತಹ ಸಂಸ್ಕೃತಿಗಳಲ್ಲಿ ಜನರು ಗುಂಪು ಮತ್ತು ಸಮಾಜಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂಬ ಕಲ್ಪನೆಯಿತ್ತು. ಆದರೆ ಈ ಅಧ್ಯಯನವು ಆ ಕಲ್ಪನೆ ತಪ್ಪೆಂದು ಸಾಬೀತುಪಡಿಸಿದೆ.
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ನಾಗರಿಕ ಅಣು ಒಪ್ಪಂದಕ್ಕಾಗಿ ಸೌದಿ ಅರೇಬಿಯಾ ಇಸ್ರೇಲ್ ಅನ್ನು ಒಪ್ಪಿಗೆ ನೀಡಬೇಕು ! : Recognize Israel
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!