ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಮುಸಲ್ಮಾನರಿಂದ ಶಿವಲಿಂಗದ ಮೇಲೆ ಹಸಿರು ಚಾದರ್ ಅನ್ನು ಹೊದಿಸಲು ಪ್ರಯತ್ನ !

ಭದ್ರತಾ ಸಿಬ್ಬಂದಿಗಳ ಜಾಗರೂಕತೆಯಿಂದ ಅನಾಹುತ ತಪ್ಪಿತು

ನಾಶಿಕ – ತ್ರ್ಯಂಬಕೇಶ್ವರದಲ್ಲಿ ಮೇ 13 ರಂದು ರಾತ್ರಿ 9.41 ಗಂಟೆಗೆ ಮುಸಲ್ಮಾನರ ಸ್ಥಳೀಯ ಉರುಸ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಪ್ರವೇಶಿಸಲು ಹಠ ಮಾಡಿದರು. ಈ ಮುಸಲ್ಮಾನರು ಇಷ್ಟಕ್ಕೇ ನಿಲ್ಲಲಿಲ್ಲ, ಅವರು ಶಿವಪಿಂಡಿಯ ಮೇಲೆ ಹಸಿರು ಶಾಲನ್ನು ಹೊದಿಸಲು ಆಗ್ರಹ ಮಾಡಿದರು. ಅಲ್ಲಿಯ ಭದ್ರತಾ ಸಿಬ್ಬಂದಿಯವರು ಈ ಮುಸಲ್ಮಾನರನ್ನು ತಡೆದಿದ್ದರಿಂದ ಮುಂದಿನ ಅನಾಹುತ ತಪ್ಪಿತು. ಈ ಪ್ರಕರಣದಲ್ಲಿ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನ ಟ್ರಸ್ಟ ಮತ್ತು ಬ್ರಾಹ್ಮಣ ಮಹಾಸಂಘ ನಾಶಿಕ ಇವರು ತೀವ್ರ ವಿರೋಧಿಸಿದ್ದು, ಸಂಬಂಧಿಸಿದವರ ಮೇಲೆ ಕ್ರಮ ಕೈಕೊಳ್ಳಲು ತ್ರ್ಯಂಬಕೇಶ್ವರ ಪೊಲೀಸ ಠಾಣೆಯಲ್ಲಿ ದೂರು ನೀಡಲಾಗಿದೆ.

ಕಠಿಣ ಕಾನೂನುರೀತಿ ಕ್ರಮ ಕೈಗೊಳ್ಳಬೇಕು ! – ಮಹಾರಾಷ್ಟ್ರ ಮಂದಿರ ಮಹಾಸಂಘ

ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘದ ಸಮನ್ವಯಕ ಶ್ರೀ. ಸುನೀಲ ಘನವಟ ಇವರು ಈ ಪ್ರಕರಣದ ಕುರಿತು ನಾಶಿಕ ಪೊಲೀಸ ಅಧೀಕ್ಷಕರು ಮತ್ತು ಗೃಹಸಚಿವರಿಗೆ ಮನವಿಯನ್ನು ಸಲ್ಲಿಸಿದರು. `ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಸಂವಿಧಾನದಂತೆ ದರ್ಶನದ ಹಕ್ಕು ಕೇವಲ ಹಿಂದೂ ಧರ್ಮದ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. ತ್ರ್ಯಂಬಕೇಶ್ವರದ ಭಗವಾನ ಶಿವನ ಸ್ಥಾನವನ್ನು ಕೋಟ್ಯಾವಧಿ ಹಿಂದೂಗಳ ಶ್ರದ್ಧಾಸ್ಥಾನವಾಗಿದ್ದು, ಈ ಘಟನೆ ಗಂಭೀರವಾಗಿದೆ. ಈ ಪ್ರಕರಣದಿಂದ ಉದ್ದೇಶಪೂರ್ವಕವಾಗಿ ಸಾಮಾಜಿಕ ತ್ವೇಷಮಯ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸಲಾಗಿದೆ. ಆದುದರಿಂದ ಈ ಪ್ರಕರಣದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಕಾನೂನುರೀತ್ಯಾ ಕ್ರಮವನ್ನು ಕೈಕೊಳ್ಳಬೇಕು ಎಂದು ಮನವಿಯನ್ನು ನಿವೇದನೆಯಲ್ಲಿ ಮಾಡಲಾಗಿದೆ.

ಕಳೆದ ಕೆಲವು ದಿನಗಳಿಂದ ಅಮರಾವತಿ, ಸಂಭಾಜಿನಗರ, ಅಕೋಲಾದ ಪ್ರಕರಣಗಳನ್ನು ನೋಡಿದರೆ ನಾಶಿಕನ ತ್ರ್ಯಂಬಕೇಶ್ವರ ದೇವಸ್ಥಾನದ ಸಂದರ್ಭದಲ್ಲಿ ನಡೆದಿರುವ ಘಟನೆ ಉದ್ದೇಶಪೂರ್ವಕವಾಗಿ ಸಾಮಾಜಿಕ ತ್ವೇಷವನ್ನು ಹೆಚ್ಚಿಸುವುದಾಗಿದ್ದು ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ದೊಡ್ಡ ಷಡ್ಯಂತ್ರವಿರಬಹುದು. ಆದುದರಿಂದ ಈ ಸಂದರ್ಭದಲ್ಲಿ ರಾಜ್ಯದ ಬೇರೆ ಸ್ಥಳಗಳಲ್ಲಿ ಒತ್ತಾಯಪೂರ್ವಕ ಇಂತಹ ಪ್ರಕರಣಗಳು ನಡೆಯುತ್ತಿದ್ದರೆ, ಅದರೆಡೆಗೆ ತಕ್ಷಣವೇ ಗಮನಹರಿಸಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಈ ನಿವೇದನೆಯಲ್ಲಿ ಮನವಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳು ಎಂದಾದರೂ ಯಾವುದಾದರೂ ದರ್ಗಾಗೆ ಹೋಗಿ ಹಿಂದೂ ದೇವತೆಗಳ ಆರತಿ ಮಾಡುವುದು, ಭಜನೆ-ಕೀರ್ತನೆ ಮಾಡಲು ಧೈರ್ಯವನ್ನು ಮಾಡುವರೇ? ಮತ್ತು ಹೀಗೆ ಧೈರ್ಯ ಮಾಡುವವರ ಶಿರಚ್ಛೇದ ಮಾಡಿದರೆ, ಆಶ್ಚರ್ಯ ಪಡಬಾರದು !

ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಇಂತಹ ಘಟನೆಗಳನ್ನು ನ್ಯಾಯೋಚಿತ ಮಾರ್ಗದಿಂದ ವಿರೋಧಿಸುತ್ತಾರೆ; ಆದರೆ ಸರಕಾರ ಮಾತ್ರ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲು ಧೈರ್ಯ ತೋರಿಸುವುದೇ ? ಎನ್ನುವ ಪ್ರಶ್ನೆ ಉಳಿಯುತ್ತದೆ !