ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!

  • ಕೇಂದ್ರ ಸರಕಾರದೊಂದಿಗೆ ಕಾಕ್ರೋಚ್ ಜನತಾ ಪಕ್ಷದ ಸಭೆ;

  • ನಾಳೆ ಮತ್ತೆ ಸರಕಾರದೊಂದಿಗೆ ಚರ್ಚೆ ನಡೆಯಲಿದೆ

ನವದೆಹಲಿ: ಕೇಂದ್ರ ಸರಕಾರವು ಕಾಕ್ರೋಚ್ ಜನತಾ ಪಕ್ಷವನ್ನು (‘ಸಿಜೆಪಿ’ಯನ್ನು) ಚರ್ಚೆಗೆ ಆಹ್ವಾನಿಸಿತ್ತು. ನಂತರ ಸಿಜೆಪಿಯ ರಾಷ್ಟ್ರೀಯ ವಕ್ತಾರರಾದ ಆಶುತೋಷ್ ರಾಂಕಾ ಮತ್ತು ಸೌರಭ್ ದಾಸ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜಿತೇಂದ್ರ ಸಿಂಗ್ ಅವರನ್ನು ‘ಕಾನ್ಸ್‌ಟಿಟ್ಯೂಷನ್ ಕ್ಲಬ್’ನಲ್ಲಿ ಭೇಟಿಯಾದರು. ಈ ವೇಳೆ ೧೦ ನಿಮಿಷಗಳ ಕಾಲ ಚರ್ಚೆ ನಡೆಯಿತು. ​ಇದರ ನಂತರ ರಾಂಕಾ ಅವರು ಹೊರಬಂದು ಮಾಧ್ಯಮಗಳಿಗೆ ತಿಳಿಸುತ್ತಾ, ನಾವು ಸರಕಾರದೊಂದಿಗೆ ೧೦ ನಿಮಿಷಗಳ ಕಾಲ ಚರ್ಚಿಸಿದ್ದೇವೆ. ನಾವು ಸರಕಾರಕ್ಕೆ ಮೂರು ಬೇಡಿಕೆಗಳನ್ನು ಇಟ್ಟಿದ್ದೇವೆ. ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ೧ ಕೋಟಿ ರೂಪಾಯಿ ಪರಿಹಾರ ಸಿಗಬೇಕು. ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಬೇಕು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ, ಎಂದು ಹೇಳಿದರು. ​ನಾಳೆ (ಜುಲೈ ೨೫ ರಂದು) ಸರಕಾರದೊಂದಿಗೆ ಮತ್ತೊಮ್ಮೆ ಚರ್ಚೆ ನಡೆಯಲಿದೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಮ್ಮ ಬೇಡಿಕೆಯ ಕುರಿತು ಸರಕಾರವು ನಾಳೆ ಮಧ್ಯಾಹ್ನದವರೆಗೆ ಸಮಯ ಕೇಳಿದೆ. ಸರಕಾರ ಅವರನ್ನು ಶೀಘ್ರದಲ್ಲೇ ಹುದ್ದೆಯಿಂದ ತೆಗೆದುಹಾಕುತ್ತದೆ ಎಂಬ ಭರವಸೆ ನಮಗಿದೆ, ಎಂದು ಅವರು ತಿಳಿಸಿದರು.