ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪ

ನವ ದೆಹಲಿ – ಹೊಣೆಗಾರಿಕೆ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಆಗ್ರಹಿಸುತ್ತಿರುವ ವಿದ್ಯಾರ್ಥಿಗಳನ್ನು ಭವಿಷ್ಯದ ಸೂಕ್ತ ಪಾಲುದಾರರೆಂದು ಗುರುತಿಸುವ ಬದಲಿಗೆ, ಮೋದಿ ಸರಕಾರವು ಅವರನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ. ವಿದ್ಯಾರ್ಥಿಗಳು ನ್ಯಾಯಯುತ ಬೇಡಿಕೆಗಳೊಂದಿಗೆ ರಸ್ತೆಗಿಳಿದಾಗ, ಸರಕಾರವು ಅವರ ಧೈರ್ಯಕ್ಕೆ ಹೇಡಿತನ ಮತ್ತು ಅನ್ಯಾಯದ ವರ್ತನೆಯ ಮೂಲಕ ಪ್ರತಿಕ್ರಿಯಿಸುತ್ತಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ‘ಶಿಕ್ಷಣ ವ್ಯವಸ್ಥೆಯ ಪತನ, ಯುವ ಭಾರತಕ್ಕೆ ಆಘಾತ’ ಎಂಬ ಲೇಖನವನ್ನು ಬರೆಯುವ ಮೂಲಕ ಅವರು ಈ ಆರೋಪಗಳನ್ನು ಮಾಡಿದ್ದಾರೆ.
Students’ Struggle, Congress’ Political Weapon?
Sonia Gandhi alleges the Modi Govt treats protesting students as “enemies of the nation”.
Attacking peaceful students is unacceptable; however, while Congress, Communists, Islamist organizations, and anti-national elements attempt… pic.twitter.com/2alttTvby5
— Sanatan Prabhat (@SanatanPrabhat) July 24, 2026

"स्टूडेंट्स का आंदोलन नरेंद्र मोदी सरकार की विफल नीतियों का परिणाम है."
– 'द हिंदू' अखबार में प्रकाशित CPP चेयरपर्सन श्रीमती सोनिया गांधी जी के लेख का हिंदी अनुवाद: pic.twitter.com/8euOIko578
— Congress (@INCIndia) July 24, 2026
ಗಾಂಧಿ ಅವರು,
1. ದೇಶಾದ್ಯಂತ ವಿದ್ಯಾರ್ಥಿಗಳು ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಕುಸಿಯುತ್ತಿರುವ ಶಿಕ್ಷಣ ವ್ಯವಸ್ಥೆಯ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅವರ ಬೇಡಿಕೆಗಳು ಸ್ಪಷ್ಟವಾಗಿವೆ – ಸರಕಾರವು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಶಿಕ್ಷಣದಲ್ಲಿ ಸುಧಾರಣೆಗಳನ್ನು ತರಬೇಕು.
2. ಮೋದಿ ಸರಕಾರವು ಒಟ್ಟು ಬಜೆಟ್‌ನಲ್ಲಿ ಶಾಲಾ ಶಿಕ್ಷಣದ ಪಾಲು ಶೇ. 50 ರಷ್ಟು ಮತ್ತು ಉನ್ನತ ಶಿಕ್ಷಣದ ಪಾಲನ್ನು ಶೇ. 33 ರಷ್ಟು ಕಡಿಮೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸರಕಾರವು ಸುಮಾರು 1 ಲಕ್ಷ ಸರಕಾರಿ ಶಾಲೆಗಳನ್ನು ಮುಚ್ಚಿದ್ದಾರೆ ಹಾಗೂ 43 ಸಾವಿರ ಖಾಸಗಿ ಶಾಲೆಗಳನ್ನು ತೆರೆದಿದೆ. ಇವುಗಳಲ್ಲಿ ಹೆಚ್ಚಿನ ಭಾಗವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಸಂಯೋಜಿತ ಸಂಘಟನೆಗಳು ನಡೆಸುತ್ತಿವೆ. (ರಾಷ್ಟ್ರಪ್ರೇಮಿ ಸಂಘದ ಶಾಲೆಗಳು ಪ್ರಾರಂಭವಾಗುತ್ತಿರುವುದು ಗಾಂಧಿ ಅವರಿಗೆ ಹೊಟ್ಟೆಯುರಿ ತಂದಿದೆ. – ಸಂಪಾದಕರು)
3. ಶಿಕ್ಷಣ ಮುಗಿದ ನಂತರ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಹೀಗಿದ್ದರೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಸದೀಯ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿದ್ದಾರೆ ಮತ್ತು ಇಂತಹ ದೊಡ್ಡ ಘಟನೆಗಳ ನಂತರವೂ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. (ಕಾಂಗ್ರೆಸ್ 6 ದಶಕಗಳ ಕಾಲ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಅದು ಏನು ಮಾಡಿತು ಎಂಬುದನ್ನು ಗಾಂಧಿ ಏಕೆ ಹೇಳುತ್ತಿಲ್ಲ? – ಸಂಪಾದಕರು)
4. ದೆಹಲಿ ಪೊಲೀಸ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಹತೋಟಿಗೆ ತರಲು ಲಾಠಿಚಾರ್ಜ್, ಅಶ್ರುವಾಯು ಮತ್ತು ಪೆಲೆಟ್ ಗನ್‌ಗಳಂತಹ ಹಿಂಸಾಚಾರವನ್ನು ಬಳಸಿದವು. ಈ ಹಿಂಸಾಚಾರದಲ್ಲಿ ಹಲವು ನಿರಾಪರಾದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !