‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’

ಅಪರಾಧದ ತನಿಖೆ ಪೂರ್ಣಗೊಳ್ಳುವ ಮುನ್ನವೇ ಕಾಂಗ್ರೆಸ್ಸಿಗೆ ಇಷ್ಟೊಂದು ಅವಸರವೇಕೆ ?

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ ೨೩ ರ ಮಧ್ಯರಾತ್ರಿ ನೀಡಿದ ವೀಡಿಯೊ ಸಂದೇಶದಲ್ಲಿ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆಯನ್ನು ನಿಗದಿಪಡಿಸಿಲ್ಲ. ಅಲ್ಲದೆ ವಿದ್ಯಾರ್ಥಿಗಳ ಪ್ರತಿಭಟನೆಗಳು ಅಥವಾ ಅವರ ಮೇಲೆ ನಡೆಸಲಾದ ಪೊಲೀಸ್ ಕ್ರಮದ ಕುರಿತಾಗಿಯೂ ಯಾವುದೇ ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ ರಮೇಶರವರು ಆರೋಪಿಸಿದ್ದಾರೆ.

ಅವರು ಮಾತು ಮುಂದುವರೆಸುತ್ತಾ, ಪ್ರಧಾನಿಯವರು ಎಷ್ಟೇ ಭಾಷಣಗಳನ್ನು ಮಾಡಿದರೂ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರವರನ್ನು ಹುದ್ದೆಯಿಂದ ವಜಾಗೊಳಿಸುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರಿಗೆ ಶಿಕ್ಷೆ ವಿಧಿಸುವುದು ಮತ್ತು ಕ್ಷಮೆಯಾಚಿಸುವುದು – ಈ ೩ ವಿಷಯಗಳನ್ನು ಮಾಡುವುದು ಅತ್ಯಗತ್ಯವಾಗಿದೆ, ಎಂದರು.

ರಮೇಶ ರವರು, ಕಳೆದ ಎರಡು ತಿಂಗಳುಗಳಿಂದ ವ್ಯಕ್ತವಾದ ಪ್ರಚಂಡ ಜನಾಕ್ರೋಶದಿಂದಾಗಿಯೇ ಪ್ರಧಾನಿಯವರು ಸತ್ಯವನ್ನು ಒಪ್ಪಿಕೊಳ್ಳಬೇಕಾಯಿತು. ಆದಾಗ್ಯೂ ಇದೇ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಮೋದಿ ಸರಕಾರದ ಮೇಲಿದ್ದ ನಂಬಿಕೆ ಹೊರಟುಹೋಗಿದೆ. ಸರಕಾರವು ವಿದ್ಯಾರ್ಥಿಗಳ ಹಿತಾಸಕ್ತಿಗಿಂತ ತನ್ನ ರಾಜಕೀಯ ಲಾಭಕ್ಕೆ ಸದಾ ಆದ್ಯತೆ ನೀಡಿದೆ, ಎಂದು ಹೇಳಿದರು. (‘ಊರಿಗೆಲ್ಲ ವೇದಾಂತ, ತನಗೆ ಮಾತ್ರ ಶೂನ್ಯ ಸಿದ್ಧಾಂತ’ ಎಂಬ ಪ್ರವೃತ್ತಿಯ ಕಾಂಗ್ರೆಸ್! – ಸಂಪಾದಕರು)