ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India

ಬಲವಂತದ ಶ್ರಮದಿಂದ ತಯಾರಿಸಿದ ಸರಕುಗಳ ಬಗ್ಗೆ ೬೦ ದೇಶಗಳ ಮೇಲೆ ಸುಂಕ

ವಾಷಿಂಗ್ಟನ್ (ಅಮೆರಿಕ) – ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕವನ್ನು ವಿಧಿಸುವುದಾಗಿ ಅಮೆರಿಕ ಘೋಷಿಸಿದೆ. ಶ್ರಮಪಟ್ಟು ತಯಾರಿಸಿದ ಸರಕುಗಳ ಆಮದಿಗೆ ಸಂಬಂಧಿಸಿದಂತೆ ೬೦ ದೇಶಗಳ ಮೇಲೆ ಅಮೆರಿಕ ಈ ಸುಂಕವನ್ನು ವಿಧಿಸಿದೆ. ಈ ದೇಶಗಳ ಮೇಲೆ ಶೇ. ೧೦ ರಿಂದ ೧೨.೫ ರಷ್ಟು ಹೆಚ್ಚುವರಿ ಸುಂಕವನ್ನು ಹಾಕಲಾಗಿದೆ. ೧೭ ದೇಶಗಳ ಮೇಲೆ ಶೇ. ೧೦ ರಷ್ಟು, ಹಾಗೆಯೇ ೪೩ ದೇಶಗಳ ಮೇಲೆ ಶೇ. ೧೨.೫ ರಷ್ಟು ಸುಂಕವನ್ನು ವಿಧಿಸಲಾಗಿದೆ. ಭಾರತ ಸೇರಿದಂತೆ ಬ್ರಿಟನ್, ಕೆನಡಾ, ಇಂಡೋನೇಷ್ಯಾ, ಬಾಂಗ್ಲಾದೇಶ, ಮೆಕ್ಸಿಕೋ, ಪಾಕಿಸ್ತಾನ ಮತ್ತು ಶ್ರೀಲಂಕಾ ಹಾಗೂ ಇನ್ನಿತರ ಕೆಲವು ದೇಶಗಳನ್ನು ಶೇ. ೧೦ ರಷ್ಟು ಸುಂಕದ ಪಟ್ಟಿಯಲ್ಲಿ ಇರಿಸಲಾಗಿದೆ.