ಭೋಂಗಾಗಳ ಬಗ್ಗೆ ಮುಂದಿನ ಭೂಮಿಕೆಯನ್ನು ರಾಜ ಠಾಕರೆಯವರು ಇಂದು ಮಂಡಿಸಲಿದ್ದಾರೆ

ಹಿಂದೆ ನಿರ್ಧರಿಸಿದಂತೆ ಅಕ್ಷಯ ತೃತಿಯಾದಂದು ಎಲ್ಲಿಯೂ ಆರತಿಗಳನ್ನು ಮಾಡಬೇಡಿ. ಮುಸಲ್ಮಾನ ಸಮಾಜದ ಈದ್ ಹಬ್ಬವು ಆನಂದದಿಂದ ಆಚರಿಸಲ್ಪಡಬೇಕು. ನಮಗೆ ಯಾರದ್ದೇ ಹಬ್ಬಗಳಲ್ಲಿ ಅಡಚಣೆಗಳನ್ನು ತರಲಿಕ್ಕಿಲ್ಲ. ಭೋಂಗಾಗಳ ವಿಷಯವು ಧಾರ್ಮಿಕವಾಗಿರದೇ ಸಾಮಾಜಿಕವಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಮ ಆದ್ಮಿ ಪಕ್ಷದ ಮಹಿಳಾ ನಾಯಕಿಗೆ ೭ ವರ್ಷಗಳ ಜೈಲು ಶಿಕ್ಷೆ

ಇಲ್ಲಿನ ನಗರ ವಸತಿ ಅಭಿವೃದ್ಧಿ ಪ್ರಾಧಿಕಾರದ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆಮ ಆದ್ಮಿ ಪಕ್ಷದ ನಾಯಕಿ ಮತ್ತು ಸ್ಥಳೀಯ ನಗರಾಧ್ಯಕ್ಷೆ ನಿಶಾ ಸಿಂಗ ಸೇರಿದಂತೆ ಒಟ್ಟು ೧೦ ಮಹಿಳೆಯರಿಗೆ ನ್ಯಾಯಾಲಯವು ೭ ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ೧೦೦೦೦ ರೂಪಾಯಿ ದಂಡ ವಿಧಿಸಲಾಗಿದೆ.

ಪಂಜಾಬಿನಲ್ಲಿ ಶಿವಸೇನೆಯ (ಬಾಳ ಠಾಕರೆ) ಖಲಿಸ್ತಾನ ವಿರೋಧಿ ಮೆರವಣಿಗೆಯ ಮೇಲೆ ಖಲಿಸ್ತಾನ ಸಮರ್ಥಕರ ದಾಳಿ

ಶಿವಸೇನೆ (ಬಾಳ ಠಾಕರೆ) ಯು ಖಲಿಸ್ತಾನ ವಿರುದ್ಧ ‘ಖಲಿಸ್ತಾನ ಮುರ್ದಾಬಾದ’ ಎಂಬ ಮೆರವಣಿಗೆ ಆಯೋಜಿಸಿತ್ತು. ಅದರ ವಿರುದ್ಧ ಕೆಲವು ಸಿಖ್ಖರು ಖಲಿಸ್ತಾನ ಬೆಂಬಲಿಸಿ ಮೆರವಣಿಗೆ ನಡೆಸಿದರು. ಶಿವಸೇನೆಯ ಮೆರವಣಿಗೆಯಲ್ಲಿ ‘ಖಲಿಸ್ತಾನ ಮುರ್ದಾಬಾದ’ ಘೋಷಣೆಯಾದ ನಂತರ ಖಲಿಸ್ತಾನ ಪರ ಸಿಖ್ಖರು ತಮ್ಮ ಕತ್ತಿಗಳನ್ನು ಹಿಡಿದು ಅದರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು.

ಝಾರಖಂಡ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಫಿಜುಲ ಹಸನ ಅನ್ಸಾರಿಯಿಂದ ಹಿಂದೂಗಳಿಗೆ ಬೆದರಿಕೆ !

ದೇಶದಲ್ಲಿ ನಮ್ಮ ವಿರುದ್ಧ (ಮುಸ್ಲಿಂರ ವಿರುದ್ಧ) ಏನೇ ನಡೆಯುತ್ತಿದ್ದರೂ ಅದನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇದರಿಂದ ನಮಗೂ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ನಾವು ಶೇಕಡಾ 20 ಇದ್ದೆವೆ ಅದರೆ ನೀವು (ಹಿಂದೂ) ಶೇಕಡಾ 70-80 ಇರುವಿರಿ.

ನಲ್ಲೊರ್ (ಆಂಧ್ರಪ್ರದೇಶ)ನಲ್ಲಿ ಹನುಮ ಶೋಭಾಯಾತ್ರೆಯ ಮೇಲೆ ಮತಾಂಧರಿಂದ ಅನಧಿಕೃತ ಮಸೀದಿಯಿಂದ ಕಲ್ಲು ಮತ್ತು ಮದ್ಯದ ಬಾಟಲಿಗಳ ತೂರಾಟ !

ಇಲ್ಲಿ ಏಪ್ರಿಲ್ ೨೪ ರಂದು ಶ್ರೀ ಹನುಮ ಶೋಭಾಯಾತ್ರೆ ನಡೆಸುವಾಗ ಅದರ ಮೇಲೆ ಅನಧಿಕೃತ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಯಿತು. ಹಾಗೂ ಮೆರವಣಿಗೆಯಲ್ಲಿನ ಹನುಮಂತನ ಮೂರ್ತಿಯ ಮೇಲೆ ಮದ್ಯದ ಬಾಟಲಿಗಳನ್ನು ಎಸೆಯಲಾಯಿತು.

ಪಾಕಿಸ್ತಾನದ ಮದರಸಾಗಳು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿವೆ ! – ಅಮೆರಿಕಾದ ಸಂಸ್ಥೆಯೊಂದರ ವರದಿ

ಪಾಕಿಸ್ತಾನದಲ್ಲಿ ಸಧ್ಯ ೪೦೦೦೦ ಮದರಸಾಗಳಿಂದ ಭಯೋತ್ಪಾದಕರು ಹೊರಹೊಮ್ಮುತ್ತಿದ್ದಾರೆ. ಈ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತರೆ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ನೀತಿಯು ಪಾಕಿಸ್ತಾನದ ಸೇನೆಯ ನಿಯಂತ್ರಣಕ್ಕೆ ಬಂದಿತು.

ಅಲವರದ ಶಿವಮಂದಿರ ಧ್ವಂಸ ಪ್ರಕರಣದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ

ಇಲ್ಲಿನ ರಾಜಗಡದಲ್ಲಿ ೩೦೦ ವರ್ಷಗಳಷ್ಟು ಹಳೆಯದಾದ ಶಿವಮಂದಿರ ಮತ್ತು ಇತರ ಎರಡು ದೇವಾಲಯಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಗಡ ಆಡಳಿತ ಆಧಿಕಾರಿ ಕೇಶವ ಮೀನಾ ಅವರನ್ನು ಸರಕಾರ ಅಮಾನತುಗೊಳಿಸಿದೆ. ಪಾಲಿಕೆ ಅಧಿಕಾರಿಗಳಾದ ಬನ್ವಾರಿಲಾಲ ಮೀನಾ ಮತ್ತು ಪೌರಾಯುಕ್ತ ಸತೀಶ ದುಹರಿಯಾ ಅವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ.

ಅಸ್ಸಾಂನಲ್ಲಿ ೧೬ ಜಿಹಾದಿ ಉಗ್ರರ ಬಂಧನ

ಅಸ್ಸಾಂ ಪೊಲೀಸರು ಅಲ್ ಖಾಯಿದಾದೊಂದಿಗೆ ಸಂಬಂಧವಿರುವ ಬಾಂಗ್ಲಾದೇಶದ ‘ಅನ್ಸರ್ ಉಲ ಬಾಂಗ್ಲಾ ಟೀಂ’ ಎಂಬ ಜಿಹಾದಿ ಉಗ್ರ ಸಂಘಟನೆಯ ಅನೇಕ ತಾಣಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ಇಲ್ಲಿಯವರೆಗೆ ಈ ಸಂಘಟನೆಯ ೧೬ ಉಗ್ರರನ್ನು ಬಂಧಿಸಿದ್ದಾರೆ.

ನ್ಯೂಸ ೧೮ ಪತ್ರಕರ್ತ ಅಮನಚೋಪ್ರಾ ವಿರುದ್ಧ ರಾಜಸ್ಥಾನದಲ್ಲಿ ೨ ಅಪರಾಧಗಳು ದಾಖಲು

ಹಿಂದಿ ನ್ಯೂಸ ವಾಹಿನಿ ‘ನ್ಯೂಸ೧೮’ ನಿರೂಪಕ ಅಮನ ಚೋಪ್ರಾ ವಿರುದ್ಧ ರಾಜಸ್ಥಾನದ ಬುಂದಿ ಮತ್ತು ಡುಂಗರಪುರದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದ ಅಲವರ ಜಿಲ್ಲೆಯ ರಾಜಗಡನಲ್ಲಿರುವ ೩೦೦ ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ರಸ್ತೆ ವಿಸ್ತರಣೆಗಾಗಿ ಕೆಡವಲಾಯಿತು.

ಹುಬ್ಬಳ್ಳಿಯ ಹಿಂಸಾಚಾರದಲ್ಲಿ ರಝಾ ಅಕಾಡೆಮಿಯೂ ಭಾಗಿಯಾಗಿದೆ

ಇಲ್ಲಿ ಹನುಮಾನ ಜಯಂತಿಯಂದು ಮತಾಂಧರು ಒಂದು ತಥಾಕಥಿತ ಅಕ್ಷೇಪಾರ್ಹ ಪೋಸ್ಟನಿಂದಾಗಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಈ ಪ್ರಕರಣದ ತನಿಖೆಯಿಂದ ರಝಾ ಅಕಾಡೆಮಿಯೂ ಇದರಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಝಾ ಅಕಾಡೆಮಿಯು ೨೦೧೨ರಲ್ಲಿ ಮುಂಬೈಯ ಆಝಾದ ಮೈದಾನದಲ್ಲಿ ಹಿಂಸಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿದೆ.