ಅಲವರದ ಶಿವಮಂದಿರ ಧ್ವಂಸ ಪ್ರಕರಣದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ

ಅಲವರ (ರಾಜಸ್ಥಾನ) – ಇಲ್ಲಿನ ರಾಜಗಡದಲ್ಲಿ ೩೦೦ ವರ್ಷಗಳಷ್ಟು ಹಳೆಯದಾದ ಶಿವಮಂದಿರ ಮತ್ತು ಇತರ ಎರಡು ದೇವಾಲಯಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಗಡ ಆಡಳಿತ ಆಧಿಕಾರಿ ಕೇಶವ ಮೀನಾ ಅವರನ್ನು ಸರಕಾರ ಅಮಾನತುಗೊಳಿಸಿದೆ. ಪಾಲಿಕೆ ಅಧಿಕಾರಿಗಳಾದ ಬನ್ವಾರಿಲಾಲ ಮೀನಾ ಮತ್ತು ಪೌರಾಯುಕ್ತ ಸತೀಶ ದುಹರಿಯಾ ಅವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ.