ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಮ ಆದ್ಮಿ ಪಕ್ಷದ ಮಹಿಳಾ ನಾಯಕಿಗೆ ೭ ವರ್ಷಗಳ ಜೈಲು ಶಿಕ್ಷೆ

ಗುರುಗ್ರಾಮ (ಹರಿಯಾಣ) – ಇಲ್ಲಿನ ನಗರ ವಸತಿ ಅಭಿವೃದ್ಧಿ ಪ್ರಾಧಿಕಾರದ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆಮ ಆದ್ಮಿ ಪಕ್ಷದ ನಾಯಕಿ ಮತ್ತು ಸ್ಥಳೀಯ ನಗರಾಧ್ಯಕ್ಷೆ ನಿಶಾ ಸಿಂಗ ಸೇರಿದಂತೆ ಒಟ್ಟು ೧೦ ಮಹಿಳೆಯರಿಗೆ ನ್ಯಾಯಾಲಯವು ೭ ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ೧೦೦೦೦ ರೂಪಾಯಿ ದಂಡ ವಿಧಿಸಲಾಗಿದೆ. ಮೇ ೧೫, ೨೦೧೫ರಂದು ಈ ಘಟನೆ ನಡೆದಿತ್ತು. (ಘಟನೆ ನಡೆದು ೭ ವರ್ಷ ಕಳೆದ ಮೇಲೆ ಶಿಕ್ಷೆಯಾಗುವುದು ನ್ಯಾಯವಲ್ಲ, ಅನ್ಯಾಯವೆ ಆಗಿದೆ ! ಅಪರಾಧಿಗಳಿಗೆ ತಕ್ಷಣ ಶಿಕ್ಷೆಯಾದರೆ ದೇಶದಲ್ಲಿ ಅಪರಾಧ ಕೃತ್ಯಗಳು ನಿಲ್ಲುತ್ತವೆ ಎಂಬುದನ್ನು ಸರಕಾರ ಅರಿತುಕೊಳ್ಳಬೇಕು ! – ಸಂಪಾದಕರು) ಈ ದಳದಿಂದ ಸೆಕ್ಟರ ೪೭ ರಲ್ಲಿ ಅತಿಕ್ರಮಣವನ್ನು ತೆರವುಗೊಳಿಸುತ್ತಿರುವಾಗ ಅವರ ಮೇಲೆ ನಿಶಾ ಸಿಂಗ ಮತ್ತು ಇತರ ಜನರು ಕಲ್ಲುತೂರಾಟ ನಡೆಸಿದ್ದರು. (ಅತಿಕ್ರಮಣವನ್ನು ತೆರವುಗೊಳಿಸಲು ವಿರೋಧಿಸುವ ಜನಪ್ರತಿನಿಧಿಗಳು ಜನತಾದ್ರೋಹಿಗಳೇ ಆಗುತ್ತಾರೆ ! – ಸಂಪಾದಕರು) ನಿಶಾ ಸಿಂಗ ಇವರು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕಲ್ಲು ತೂರಾಟದಲ್ಲಿ ೧೫ ಪೊಲೀಸ ಸಿಬ್ಬಂದಿ ಗಾಯಗೊಂಡಿದ್ದರು.

ಸಂಪಾದಕೀಯ ನಿಲುವು

ಹಿಂಸಾಚಾರ ಮಾಡುವವರ ವಿರುದ್ದ ಇಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕು !