ಅಸ್ಸಾಂನಲ್ಲಿ ೧೬ ಜಿಹಾದಿ ಉಗ್ರರ ಬಂಧನ

ಗುಹಾಟಿ – ಅಸ್ಸಾಂ ಪೊಲೀಸರು ಅಲ್ ಖಾಯಿದಾದೊಂದಿಗೆ ಸಂಬಂಧವಿರುವ ಬಾಂಗ್ಲಾದೇಶದ ‘ಅನ್ಸರ್ ಉಲ ಬಾಂಗ್ಲಾ ಟೀಂ’ ಎಂಬ ಜಿಹಾದಿ ಉಗ್ರ ಸಂಘಟನೆಯ ಅನೇಕ ತಾಣಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ಇಲ್ಲಿಯವರೆಗೆ ಈ ಸಂಘಟನೆಯ ೧೬ ಉಗ್ರರನ್ನು ಬಂಧಿಸಿದ್ದಾರೆ. ಅಸ್ಸಾಮಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಉಗ್ರರ ತಾಣ ಧ್ವಂಸ ಮಾಡಿರುವುದಕ್ಕಾಗಿ ಅಸ್ಸಾಂ ಪೊಲೀಸರನ್ನು ಶ್ಲಾಘಿಸಿದ್ದಾರೆ.

೧. ದೀರ್ಘಕಾಲದವರೆಗೆ ನಡೆಯುತ್ತಿರುವ ಕಾರ್ಯಾಚರಣೆಯ ಅಂತರ್ಗತ ಅಸ್ಸಾಂ ಪೊಲೀಸರು ಅನ್ಸರ್ ಉಲ ಬಾಂಗ್ಲಾ ಟೀಮ್ ನ ಅನೇಕ ತಾಣಗಳನ್ನು ಧ್ವಂಸ ಮಾಡಿದ್ದಾರೆ. ಇದು ಅಸ್ಸಾಂ ಪೊಲೀಸರು ಧೈರ್ಯ ಮತ್ತು ಸಮರ್ಪಣೆಯ ನಿಜವಾದ ಉದಾಹರಣೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ಏಪ್ರಿಲ್ ೧೮, ೨೦೨೨ ರಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ರಾಜ್ಯದ ಜಿಹಾದಿ ಬಲೆ ನಾಶ ಪಡಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

೨. ಈ ಮೊದಲು ಏಪ್ರಿಲ್ ೧೫ ರಂದು ಪೊಲೀಸರು ಅಸ್ಸಾಮಿನ ಬಾರ ಪೇಟ ಜಿಲ್ಲೆಯ ಅನ್ಸಾರ್ ಉಲ್ ಬಾಂಗ್ಲಾ ಟೀಮ್ ಜಿಹಾದಿ ಉಗ್ರ ಸಂಘಟನೆಯ ೬ ಜನರನ್ನು ಬಂಧಿಸಿದ್ದರು.

ಸಂಪಾದಕೀಯ ನಿಲುವು

ಈ ಉಗ್ರರನ್ನು ಗಲ್ಲುಶಿಕ್ಷೆಗೆ ಗುರಿಯಾಗಿಸಲು ಸರಕಾರ ಪ್ರಯತ್ನಿಸುವುದು ಆವಶ್ಯಕ !