ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಪ್ರಕರಣದಲ್ಲಿ ಯುಕ್ತಿವಾದ ಮುಗಿದಿದೆ : ಇಂದು ತೀರ್ಪು!

ಇಲ್ಲಿನ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಿ ದೇವಸ್ಥಾನಗಳ ಸಮೀಕ್ಷೆಯ ಸಂದರ್ಭದಲ್ಲಿ ದಿವಾನಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಯುಕ್ತಿವಾದವು ಪೂರ್ಣವಾಗಿದ್ದು, ಅದರ ಮೇಲೆ ಮೇ ೧೨ ರಂದು ಮಧ್ಯಾಹ್ನ ೧೨ ಗಂಟೆಗೆ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು.

ದೇಶದ್ರೋಹ ಕಾನೂನಿನ ಮೇಲೆ ಪುನರ್ ವಿಚಾರ ನಡೆಸಲಾಗುವುದು !

ದೇಶದ್ರೋಹದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಒಂದು ಪ್ರಕರಣದ ಬಗ್ಗೆ ಉತ್ತರ ನೀಡಿರುವ ಕೇಂದ್ರ ಸರಕಾರವು, ದೇಶದ್ರೋಹ ಕಾನೂನಿನಲ್ಲಿ ಪುನರ್ ವಿಚಾರ ಮತ್ತು ವಿಚಾರಣೆ ನಡೆಸುವ ನಿರ್ಣಯ ನಾವು ತೆಗೆದುಕೊಂಡಿದ್ದೇವೆ.

ಮುಸ್ಲಿಮರು ನಿಯಮಾನುಸಾರ ಧ್ವನಿವರ್ಧಕಗಳನ್ನು ಬಳಸುತ್ತಿರುವುದರಿಂದ ಪುನಃ ನ್ಯಾಯಾಲಯಕ್ಕೆ ಹೋಗುವ ಆವಶ್ಯಕತೆಯಿಲ್ಲ ! – ಮೌಲಾನಾ ಖಾಲಿದ್ ರಶೀದ ಫರಂಗಿ ಮಹಾಲಿ

ಸರ್ವೋಚ್ಚ ನ್ಯಾಯಾಲಯವು ೨೦೦೫ ರಲ್ಲಿಯೇ ನೀಡಿರುವ ಆದೇಶವನ್ನು ಎಷ್ಟು ಮಸೀದಿಗಳು ಪಾಲಿಸಿವೆ ? ಈಗ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರವರು ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ನಂತರ ಧ್ವನಿವರ್ಧಕಗಳನ್ನು ಕೆಳಗಿಳಿಸಲಾಗುತ್ತಿದೆ, ಈ ಬಗ್ಗೆ ಮೌಲಾನಾ ಏಕೆ ಮಾತನಾಡುತ್ತಿಲ್ಲ ?

ಮೂರು ಐ.ಎ.ಎಸ್. ಅಧಿಕಾರಿಗಳಿಗೆ ೧ ತಿಂಗಳ ಜೈಲು ಶಿಕ್ಷೆ !

ನ್ಯಾಯಾಂಗ ನಿಂದನೆ ಮತ್ತು ನಿಗದಿತ ಅವಧಿಯೊಳಗೆ ಆದೇಶವನ್ನು ಪಾಲಿಸದ ಆರೋಪದಲ್ಲಿ ಮೂವರು ಐಎಎಸ್ ಅಧಿಕಾರಿಗಳಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ಮತ್ತು ೨,೦೦೦ ರೂಪಾಯಿ ದಂಡ ವಿಧಿಸಿದೆ.

ಗುಜರಾತಿನ ನಿರ್ದಲಿಯ ಶಾಸಕ ಜಿಗ್ನೇಶ್ ಮೇವಾನಿ ಇವರ ಸಹಿತ ೧೦ ಜನರಿಗೆ ಕಾರಾಗೃಹ ಶಿಕ್ಷೆ

೫ ವರ್ಷಗಳ ಮೊದಲು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವ ಪ್ರಕರಣದಲ್ಲಿ ಇಲ್ಲಿಯ ದಂಡಾಧಿಕಾರಿ ನ್ಯಾಯಾಲಯವು ಗುಜರಾತಿನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇನ್ನಿತರ ೯ ಜನರನ್ನು ತಪ್ಪಿತಸ್ಥರೆಂದು ಘೋಷಿಸಿ ೩ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ದೆಹಲಿಯಲ್ಲಿನ ಧಾರ್ಮಿಕ ಸ್ಥಳಗಳಲ್ಲಿನ ಭೋಂಗಾಗಳ ಮೇಲೆ ಕಾರ್ಯಾಚರಣೆಯನ್ನು ಮಾಡಲು ಕೇಂದ್ರ ಸರಕಾರಕ್ಕೆ ಹೇಳಬೇಕು !

ದೆಹಲಿ ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಲ್ಲಿರುವ ಭೋಂಗಾಗಳನ್ನು ತೆಗೆಯುವ ಬಗ್ಗೆ ಭಾಜಪವು ಮನವಿ ಮಾಡಿದಾಗ ಅಧಿಕಾರದಲ್ಲಿರುವ ಆಮ ಆದಮಿ ಪಕ್ಷದಿಂದ ಅದಕ್ಕೆ ಒಪ್ಪಿಗೆಯನ್ನು ನೀಡಲಾಯಿತು.

ಇಸ್ಲಾಂ ತೊರೆದ ವ್ಯಕ್ತಿಯನ್ನು ಥಳಿಸಿದ ಮತಾಂಧರ ಗುಂಪು

ಇಲ್ಲಿ ಓರ್ವ ಮುಸಲ್ಮಾನನು ಇಸ್ಲಾಂ ತೊರೆದಿರುವುದರಿಂದ ಮತಾಂಧರ ಗುಂಪು ಅವನ ಮೇಲೆ ಹಲ್ಲೆ ನಡೆಸಿದೆ. ಆ ವ್ಯಕ್ತಿಯ ಹೆಸರು ಅಸ್ಕರ ಅಲೀ. ಹಲ್ಲೆ ಪ್ರಕರಣದಲ್ಲಿ ಪೊಲೀಸರಲ್ಲಿ ತಕರಾರನ್ನು ನೋಂದಿಸಲಾಯಿತು.

ಉತ್ತರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿ ಸಾಮೂಹಿಕ ಬಲಾತ್ಕಾರ

ಇಲ್ಲಿನ ಓರ್ವ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅಪಹರಿಸಿ ಆಕೆಯನ್ನು ಭೋಪಾಲಕ್ಕೆ ಒಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಅನಂತರ ಸಂತ್ರಸ್ತೆಯು ಈ ಬಗ್ಗೆ ದೂರ ನೀಡಲು ಪೊಲೀಸ ಠಾಣೆಗೆ ಹೋದಾಗ ಆಕೆಯ ಮೇಲೆ ಪೊಲೀಸ ಅಧಿಕಾರಿಯೂ ಬಲಾತ್ಕಾರ ಮಾಡಿದನು.

ನನ್ನ ಬಂಧನವು ಮುಖ್ಯಮಂತ್ರಿ ವಿಜಯನ್ ಇವರಿಂದ ಜಿಹಾದಿಗಳಿಗೆ ನೀಡಿರುವ ರಮಝಾನ ಉಡುಗೊರೆ – ಮಾಜಿ ಶಾಸಕ ಪಿ.ಸಿ. ಜಾರ್ಜ

ನನ್ನ ಬಂಧನವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಮಝಾನ ನಿಮಿತ್ತ ಭಯೋತ್ಪಾದಕ ಮುಸಲ್ಮಾನರಿಗೆ ನೀಡಿರುವ ಉಡುಗೊರೆಯಾಗಿದೆಯೆಂದು ಮಾಜಿ ಶಾಸಕ ಮತ್ತು ಕಾಂಗ್ರೆಸ್ಸಿನ ಮಾಜಿ ಮುಖಂಡ ಪಿ.ಸಿ. ಜಾರ್ಜ ಟೀಕಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ಮತಾಂಧರಿಂದ ಹಿಂದೂ ನೇತಾರನ ಥಳಿತ

ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ‘ಬಾಂಗ್ಲಾದೇಶ ಹಿಂದೂ ಬೌದ್ಧ ಇಸಾಯಿ ಓಕ್ಯಾ ಪರಿಷದ್‌’ನ ದಕ್ಷಿಣ ಚಟಗಾವಿನ ಉಪಾಧ್ಯಕ್ಷರಾದ ಶ್ರೀ. ಜಿತೇಂದ್ರ ಕಾಂತಿ ಗುಹಾರವರನ್ನು ಮತಾಂಧರು ಏಪ್ರಿಲ್‌ ೩೦ರಂದು ಇಲ್ಲಿನ ಪಟಿಯಾ ಉಪಜಿಲ್ಲೆಯಲ್ಲಿನ ಹೈದಗಾಂವದಲ್ಲಿನ ಗೌಚಿಯಾ ಸಾಮುದಾಯಿಕ ಕೇಂದ್ರದ ಎದುರು ಒಂದು ಗಿಡಕ್ಕೆ ಕಟ್ಟಿ ಥಳಿಸಿದರು.