ಮುಂಬಯಿ – ಹಿಂದೆ ನಿರ್ಧರಿಸಿದಂತೆ ಅಕ್ಷಯ ತೃತಿಯಾದಂದು ಎಲ್ಲಿಯೂ ಆರತಿಗಳನ್ನು ಮಾಡಬೇಡಿ. ಮುಸಲ್ಮಾನ ಸಮಾಜದ ಈದ್ ಹಬ್ಬವು ಆನಂದದಿಂದ ಆಚರಿಸಲ್ಪಡಬೇಕು. ನಮಗೆ ಯಾರದ್ದೇ ಹಬ್ಬಗಳಲ್ಲಿ ಅಡಚಣೆಗಳನ್ನು ತರಲಿಕ್ಕಿಲ್ಲ. ಭೋಂಗಾಗಳ ವಿಷಯವು ಧಾರ್ಮಿಕವಾಗಿರದೇ ಸಾಮಾಜಿಕವಾಗಿದೆ. ಈ ಬಗ್ಗೆ ಮುಂದೆ ಇನ್ನೇನು ಮಾಡಬೇಕು ಎಂಬುದನ್ನು ನಾನು ನಾಳೆ, ಮೇ ೩ರಂದು ‘ಟ್ವೀಟ್’ ಮೂಲಕ ಹೇಳುವೆನು, ಎಂದು ರಾಜ ಠಾಕರೆಯವರು ಮೇ ೨ರಂದು ಟ್ವೀಟ್ ಮಾಡಿ ಹೇಳಿದ್ದಾರೆ.
Appeal to Maharashtra Sainik’s… pic.twitter.com/sTzbTI14Qu
— Raj Thackeray (@RajThackeray) May 2, 2022
ಠಾಣೆಯಲ್ಲಿನ ಸಾರ್ವಜನಿಕ ಸಭೆಯಲ್ಲಿ ರಾಜ ಠಾಕರೆಯವರು ಮಸೀದಿಗಳ ಮೇಲೆ ಭೋಂಗಾಗಳನ್ನು ಹಚ್ಚಿದರೆ ಮೇ ೩ ರಂದು ದೇವಸ್ಥಾನಗಳಲ್ಲಿ ಮಹಾರತಿಯನ್ನು ಮಾಡಲು ಕರೆ ನೀಡಿದ್ದರು; ಆದರೆ ಪೊಲೀಸರ ಮೇಲೆ ಒತ್ತಡ ಬರಬಾರದು ಎಂದು ಭೋಂಗಾಗಳ ಬಗೆಗಿನ ಭೂಮಿಕೆಯನ್ನು ಈದಿನ ನಂತರ ಮಂಡಿಸುವುದಾಗಿ ಮನಸೆಯು ಹೇಳಿದೆ.