ಹುಬ್ಬಳ್ಳಿಯ ಹಿಂಸಾಚಾರದಲ್ಲಿ ರಝಾ ಅಕಾಡೆಮಿಯೂ ಭಾಗಿಯಾಗಿದೆ

ಹುಬ್ಬಳ್ಳಿ – ಇಲ್ಲಿ ಹನುಮಾನ ಜಯಂತಿಯಂದು ಮತಾಂಧರು ಒಂದು ತಥಾಕಥಿತ ಅಕ್ಷೇಪಾರ್ಹ ಪೋಸ್ಟನಿಂದಾಗಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಈ ಪ್ರಕರಣದ ತನಿಖೆಯಿಂದ ರಝಾ ಅಕಾಡೆಮಿಯೂ ಇದರಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಝಾ ಅಕಾಡೆಮಿಯು ೨೦೧೨ರಲ್ಲಿ ಮುಂಬೈಯ ಆಝಾದ ಮೈದಾನದಲ್ಲಿ ಹಿಂಸಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿದೆ.

ಹುಬ್ಬಳ್ಳಿಯ ದರ್ಗಾದಲ್ಲಿ ಎಂಐಎಂ ಮುಖಂಡ ಮೌಲಾನಾ ವಾಸಿಂ ಪ್ರಚೋದನಾಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಮತಾಂಧರು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಆತನನ್ನು ಬಂದಿಸಲಾಗಿದೆ. ಆತನ ವಿಚಾರಣೆಯ ವೇಳೆ ತೌಫಿಕ ಮುಲ್ಲಾ ಎಂಬವನ ಹೆಸರು ಬಯಲಿಗೆ ಬಂದಿದೆ. ಮುಲ್ಲಾ ರಝಾ ಅಕಾಡೆಮಿಯ ಸದಸ್ಯನಾಗಿದ್ದಾನೆ.

(ಸೌಜನ್ಯ : News18 Kannada)

ಸಂಪಾದಕೀಯ ನಿಲುವು

ರಝಾ ಅಕಾಡೆಮಿಯನ್ನು ಯಾವಾಗ ನಿಷೇಧಿಸಲಾಗುವುದು?