ಪಂಜಾಬಿನಲ್ಲಿ ಶಿವಸೇನೆಯ (ಬಾಳ ಠಾಕರೆ) ಖಲಿಸ್ತಾನ ವಿರೋಧಿ ಮೆರವಣಿಗೆಯ ಮೇಲೆ ಖಲಿಸ್ತಾನ ಸಮರ್ಥಕರ ದಾಳಿ

  • ದೊಡ್ಡಪ್ರಮಾಣದಲ್ಲಿ ಕಲ್ಲು ತೂರಾಟ

  • ಖಡ್ಗಗಳ ಪ್ರದರ್ಶನ

  • ಓರ್ವ ಹಿಂದೂ ನಾಯಕ ಮತ್ತು ಪೊಲೀಸ್ ಅಧಿಕಾರಿಗೆ ಗಾಯ

ಪಟಿಯಾಲ (ಪಂಜಾಬ) – ಶಿವಸೇನೆ (ಬಾಳ ಠಾಕರೆ) ಯು ಖಲಿಸ್ತಾನ ವಿರುದ್ಧ ‘ಖಲಿಸ್ತಾನ ಮುರ್ದಾಬಾದ’ ಎಂಬ ಮೆರವಣಿಗೆ ಆಯೋಜಿಸಿತ್ತು. ಅದರ ವಿರುದ್ಧ ಕೆಲವು ಸಿಖ್ಖರು ಖಲಿಸ್ತಾನ ಬೆಂಬಲಿಸಿ ಮೆರವಣಿಗೆ ನಡೆಸಿದರು. ಶಿವಸೇನೆಯ ಮೆರವಣಿಗೆಯಲ್ಲಿ ‘ಖಲಿಸ್ತಾನ ಮುರ್ದಾಬಾದ’ ಘೋಷಣೆಯಾದ ನಂತರ ಖಲಿಸ್ತಾನ ಪರ ಸಿಖ್ಖರು ತಮ್ಮ ಕತ್ತಿಗಳನ್ನು ಹಿಡಿದು ಅದರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

1. ಶಿವಸೇನೆ (ಬಾಳ ಠಾಕ್ರೆ) ಕಾರ್ಯಾಧ್ಯಕ್ಷ ಹರೀಶ ಸಿಂಗ ನೇತ್ರತ್ವದಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ‘ಖಲಿಸ್ತಾನ ಮುರ್ದಾಬಾದ’ ಘೋಷಣೆಗಳು ಮೊಳಗಿದಾಗ ಖಲಿಸ್ತಾನ ಪರ ಸಿಖ್ಖರು ವಿರೋಧಿಸಿದರು. ಶಿವ ಸೇನೆಯನ್ನು ‘ವಾನರ ಸೇನೆ’ ಎಂದು ವಾಗ್ದಾಳಿ ನಡೆಸಿದ ಅವರು, ‘ನಾವಿದನ್ನು ವಿರೋಧಿಸುತ್ತೇವೆ’ ಎಂದರು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದ ಬಳಿಕ ಖಲಿಸ್ತಾನಿಗಳು ಮೊದಲು ಶಿವಸೇನೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ನಂತರ ಕತ್ತಿಯಿಂದ ದಾಳಿ ನಡೆಸಲು ಯತ್ನಿಸಿದ್ದಾರೆ. ಶಿವ ಸೈನಿಕರು ಕೂಡಾ ಅವರ ಮೇಲೆ ಕಲ್ಲು ತೂರಾಟದ ಮೂಲಕ ಎದುರೇಟು ನೀಡಿ ತಮ್ಮ ಕತ್ತಿಗಳನ್ನು ಸಹ ತೆಗೆದರು.

2. ಈ ವೇಳೆ ಇಲ್ಲಿನ ಕಾಳಿಮಾತಾ ದೇವಸ್ಥಾನ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮೆರವಣಿಗೆಯ ವೀಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ವೀಡಿಯೋದಲ್ಲಿ ದೇವಸ್ಥಾನದ ಪಕ್ಕದ ಕಟ್ಟಡದ ಮೇಲೆ ವ್ಯಕ್ತಿಯೊಬ್ಬರು ನಿಂತಿದ್ದು ಕೆಳಗೆ ಜಮಾಯಿಸಿದ ಜನರ ಮೇಲೆ ಕಲ್ಲುಗಳನ್ನು ಎಸೆಯುತ್ತಲಿದ್ದಾರೆ. ಘರ್ಷಣೆಯಲ್ಲಿ ಒಬ್ಬ ಹಿಂದೂ ಮುಖಂಡ ಮತ್ತು ಪೊಲೀಸ ಅಧಿಕಾರಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ ಎರಡೂ ಗುಂಪುಗಳು ಮೆರವಣಿಗೆ ತೆಗೆಯಲು ಅನುಮತಿ ಪಡೆದಿಲ್ಲ.

3. ಈ ಘಟನೆಯ ನಂತರ ಎಲ್ಲಾ ಪಕ್ಷಗಳ ಮುಖಂಡರು ಎರಡೂ ಗುಂಪುಗಳ ಜನರಿಗೆ ಶಾಂತವಾಗಿರಲು ಹೇಳುತ್ತ ತಮ್ಮ ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

4. ನಾವು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದೇವೆ! – ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ

ಈ ಘರ್ಷಣೆಯ ಕುರಿತು ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ ಅವರು ಈ ವಿಷಯವನ್ನು ಪೊಲೀಸ ಮಹಾನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಪ್ರಸ್ತುತ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ನಾವೂ ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎಂಬ ಕಾಳಜಿ ನಮಗಿದೆ. ಪಂಜಾಬನಲ್ಲಿ ಶಾಂತಿ ನೆಲೆಸುವುದು ಮುಖ್ಯ. (ಕೇವಲ ಕಣ್ಣಿಟ್ಟರೆ ಪ್ರಯೋಜನವಿಲ್ಲ, ಖಲಿಸ್ತಾನ ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡು ಜೈಲಿಗೆ ಹಾಕಬೇಕು! – ಸಂಪಾದಕರು)

ನಾವು ಪಂಜಾಬನ್ನು ಖಲಿಸ್ತಾನವಾಗಲು ಬಿಡುವುದಿಲ್ಲ! – ಶಿವಸೇನೆ (ಬಾಳ ಠಾಕ್ರೆ)

ಈ ಕುರಿತು ಶಿವಸೇನೆ (ಬಾಳ ಠಾಕ್ರೆ) ಕಾರ್ಯಾಧ್ಯಕ್ಷ ಹರೀಶ ಸಿಂಗ ಅವರು ಪಂಜಾಬನ್ನು ಖಲಿಸ್ತಾನವಾಗಲು ನಾವು ಬಿಡುವುದಿಲ್ಲ ಮತ್ತು ಖಲಿಸ್ತಾನ ಹೆಸರನ್ನು ಉಚ್ಚರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಖಲಿಸ್ತಾನಿ ಸಂಘಟನೆಯ ಸಿಖ್ಸ ಫಾರ ಜಸ್ಟಿಸನ ಸಂಚಾಲಕ ಗುರುಪತವಂತ ಪನ್ನು ಅವರು ಏಪ್ರಿಲ 29ನ್ನು `ಖಲಿಸ್ತಾನ ಸ್ಥಾಪನಾ ದಿನ’ ಎಂದು ಘೋಷಿಸಿದ್ದರು. ಅವರ ವಿರುದ್ಧ ` ಖಲಿಸ್ತಾನ ಮುರ್ದಾಬಾದ’ ಹೆಸರಿನಲ್ಲಿ ಮೆರವಣಿಗೆ ಕೂಡಾ ಘೋಷಿಸಿದ್ದೆವು.

ಸಂಪಾದಕೀಯ ನಿಲುವು

ಎರಡೂ ಕಡೆಯಿಂದ ಕಲ್ಲುತೂರಾಟ ಮತ್ತು ಮಾರಕ ಆಯುಧಗಳಿಂದ ಸೇನೆಸಾಟ.

‘ಆಮ ಆದ್ಮಿ ಪಕ್ಷವು ಖಲಿಸ್ತಾನಿಗಳನ್ನು ಬೆಂಬಲಿಸುತ್ತಿದೆ ಪಂಜಾಬಿನಲ್ಲಿ ‘ಆಪ’ ಸರಕಾರ ಅಧಿಕಾರದಲ್ಲಿದ್ದ ಕಾರಣ ಖಲಿಸ್ತಾನಿ ಬೆಂಬಲಿಗರು ಹಿಂದೂಗಳ ಮೆರವಣಿಗೆಯ ಮೇಲೆ ದಾಳಿ ಮಾಡಲು ಧೈರ್ಯ ಮಾಡುತ್ತಾರೆ. ಕೇಂದ್ರ ಸರಕಾರವು ಇದರತ್ತ ತಕ್ಷಣ ಗಮನಹರಿಸಿ ಹಿಂದೂಗಳ ರಕ್ಷಣೆಗೆ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ ಪಂಜಾಬ್ ಇನ್ನೊಂದು ಕಾಶ್ಮೀರ ಆಗುವುದು!

ಪಂಜಾಬಿನಲ್ಲಿ ಹಿಂದೂಗಳು ಖಲಿಸ್ತಾನನ್ನು ವಿರೋಧಿಸುತ್ತಾರೆ, ಹೆಚ್ಚಿನ ಸಿಖ್ಖರು ಮೌನವಾಗಿದ್ದಾರೆ ಆದರೆ ಖಲಿಸ್ತಾನ ಬೆಂಬಲಿಗರು ಹಿಂದೂಗಳನ್ನು ವಿರೋಧಿಸುತ್ತಾರೆ, ಇದರ ಅರ್ಥವೇನು?