ನ್ಯೂಸ ೧೮ ಪತ್ರಕರ್ತ ಅಮನಚೋಪ್ರಾ ವಿರುದ್ಧ ರಾಜಸ್ಥಾನದಲ್ಲಿ ೨ ಅಪರಾಧಗಳು ದಾಖಲು

‘ಜಹಾಂಗಿರಪುರಿಯಲ್ಲಿನ ಅಕ್ರಮ ನಿರ್ಮಾಣಗಳ ವಿರುದ್ಧ ತೆಗೆದುಕೊಂಡ ಕ್ರಮಕ್ಕೆ ಸೇಡು ತೀರಿಸಿಕೊಳ್ಳಲು ೩೦೦ ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯವನ್ನು ಕೆಡವಲಾಗಿದೆಯೇ’ ಎಂಬ ಪ್ರಶ್ನೆಯನ್ನು ಕೇಳಿದ್ದಕ್ಕೆ ಕ್ರಮ ಜರುಗಿಸಲಾಗಿದೆ.

ನವದೆಹಲಿ – ಹಿಂದಿ ನ್ಯೂಸ ವಾಹಿನಿ ‘ನ್ಯೂಸ೧೮’ ನಿರೂಪಕ ಅಮನ ಚೋಪ್ರಾ ವಿರುದ್ಧ ರಾಜಸ್ಥಾನದ ಬುಂದಿ ಮತ್ತು ಡುಂಗರಪುರದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದ ಅಲವರ ಜಿಲ್ಲೆಯ ರಾಜಗಡನಲ್ಲಿರುವ ೩೦೦ ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ರಸ್ತೆ ವಿಸ್ತರಣೆಗಾಗಿ ಕೆಡವಲಾಯಿತು. ಈ ಕುರಿತು ಸುದ್ದಿಯನ್ನು ಬಿತ್ತರಿಸುವಾಗ ಚೋಪ್ರಾ ಅವರು ‘ದೆಹಲಿಯ ಜಹಾಂಗೀರಪುರಿಯಲ್ಲಿ ಅನಧಿಕೃತ ನಿರ್ಮಾಣಗಳ ವಿರುದ್ಧ ತೆಗೆದುಕೊಂಡ ಕ್ರಮದ ಸೇಡು ತೀರಿಸಿಕೊಳ್ಳಲು ಈ ದೇವಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯೇ’? ಎಂದು ಪ್ರಶ್ನಿಸಿದ್ದರು. ಇದರ ಪರಿಣಾಮವಾಗಿ ಅವರ ವಿರುದ್ಧ ಅಪರಾದಗಳನ್ನು ದಾಖಲಿಸಲಾಗಿದೆ. ಸುದ್ದಿಯಲ್ಲಿ ಧಾರ್ಮಿಕ ಉದ್ವಿಗ್ನತೆ ಸ್ರಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ದೇಶದ್ರೋಹದ ಆರೋಪವನ್ನೂ ಹೋರಿಸಲಾಗಿದೆ.

೧. ದೂರಿನ ಪ್ರಕಾರ ಚೋಪ್ರಾ ತಮ್ಮ ವರದಿಯಲ್ಲಿ ಕಾಂಗ್ರೆಸ ಹೆಸರನ್ನು ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ ಸರಕಾರದ ವಿರುದ್ದ ದೊಂಬಿ ಏಬ್ಬಿಸುವುದು ಅವರ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಈ ಸುಳ್ಳು ಸುದ್ದಿ ಹಬ್ಬಿಸಿರುವುದು ರಾಜಸ್ಥಾನ ಸರಕಾರದ ವಿರುದ್ಧದ ಒಂದು ಷಡ್ಯಂತ್ರ. ಇದನ್ನು ದೇಶದ್ರೋಹದ ಅಪರಾಧ ಎಂದು ಪರಿಗಣಿಸಬೇಕು ಎಂದು ಆರೋಪಿಸಲಾಗಿದೆ.

೨. ಇದನ್ನು ಬಿಜೆಪಿ ನಾಯಕ ಕಪಿಲ ಮಿಶ್ರಾ ಟೀಕಿಸಿದ್ದಾರೆ. ಪತ್ರಕರ್ತನ ಮೇಲೆ ಸುನಿಯೋಜಿತ ದಾಳಿ ನಡೆಸಿರುವುದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಅಮನ ಚೋಪ್ರಾಗೆ ಪ್ರಶ್ನೆ ಕೇಳಬೇಡಿ, ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಎಂದು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ ರಾಜ್ಯದಲ್ಲಿ ತಟಸ್ಥ ಪತ್ರಿಕೋದ್ಯಮ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಕಾಂಗ್ರೆಸ ಪ್ರಸಾರ ಮಾಧ್ಯಮಗಳ ವಿರುದ್ಧ ಮಾಡಿದ್ದನ್ನೆ ಈಗ ಮಾಡುತ್ತಿದೆ. ಇದರಿಂದ ಕಾಂಗ್ರೆಸ ಅಸಂವಿಧಾನಿಕ ಮತ್ತು ಕಾನೂನು ಉಲ್ಲಂಘಿಸುವ ಪಕ್ಷ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.