ಬಾಂಗ್ಲಾದೇಶದಲ್ಲಿ ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ಮತಾಂಧರಿಂದ ಹಿಂದೂ ನೇತಾರನ ಥಳಿತ

ಢಾಕಾ (ಬಾಂಗ್ಲಾದೇಶ) – ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ‘ಬಾಂಗ್ಲಾದೇಶ ಹಿಂದೂ ಬೌದ್ಧ ಇಸಾಯಿ ಓಕ್ಯಾ ಪರಿಷದ್‌’ನ ದಕ್ಷಿಣ ಚಟಗಾವಿನ ಉಪಾಧ್ಯಕ್ಷರಾದ ಶ್ರೀ. ಜಿತೇಂದ್ರ ಕಾಂತಿ ಗುಹಾರವರನ್ನು ಮತಾಂಧರು ಏಪ್ರಿಲ್‌ ೩೦ರಂದು ಇಲ್ಲಿನ ಪಟಿಯಾ ಉಪಜಿಲ್ಲೆಯಲ್ಲಿನ ಹೈದಗಾಂವದಲ್ಲಿನ ಗೌಚಿಯಾ ಸಾಮುದಾಯಿಕ ಕೇಂದ್ರದ ಎದುರು ಒಂದು ಗಿಡಕ್ಕೆ ಕಟ್ಟಿ ಥಳಿಸಿದರು. ಶ್ರೀ. ಗುಹಾರವರು ಹಿಂದೆ ಅವಾಮೀ ಲೀಗ್‌ ಪಕ್ಷದ ಸ್ಥಳೀಯ ಅಧ್ಯಕ್ಷರಾಗಿದ್ದರು. ಅವರನ್ನು ಸ್ಥಳೀಯ ಸರಕಾರಿ ಅಧಿಕಾರಿಗಳ ಸಮರ್ಥಕರು ಥಳಿಸಿದ್ದಾರೆ.

ಈ ಬಗ್ಗೆ ‘ವಾಯಿಸ ಆಫ್‌ ಬಾಂಗ್ಲಾದೇಶ ಹಿಂದೂ ೭೧’ ಎಂಬ ಹೆಸರಿನ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು ಶ್ರೀ. ಗುಹಾರವರನ್ನು ಗಿಡಕ್ಕೆ ಕಟ್ಟಿಹಾಕಿರುವ ಛಾಯಾಚಿತ್ರವನ್ನೂ ಪ್ರಸಾರ ಮಾಡಲಾಗಿದೆ. ಇದರಲ್ಲಿ ‘ಇಫ್ತಾರ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ಅವಾಮೀ ಲೀಗ್‌ ಪಕ್ಷದ ಸ್ಥಳೀಯ ನೇತಾರ ಮಹಮ್ಮದ ಜಸೀಮನು ಶ್ರೀ. ಗುಹಾರವರನ್ನು ಥಳಿಸಿದನು’, ಎಂದು ಬರೆಯಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಅಸುರಕ್ಷಿತ ಹಿಂದೂ ! ಭಾರತದಲ್ಲಿ ದೀಪಾವಳಿ, ಹೋಳಿ ಇತ್ಯಾದಿ ಹಿಂದೂ ಹಬ್ಬಗಳಲ್ಲಿ ಸಹಭಾಗಿಯಾಗದಿರುವ ಅಲ್ಪಸಂಖ್ಯಾತರ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತದೆಯೇ? ಹೀಗಿರುವಾಗಲೂ ತಥಾಕಥಿತ ಜಾತ್ಯಾತೀತವಾದಿಗಳು ಹಿಂದೂಗಳನ್ನೇ ಅಸಹಿಷ್ಣು ಎಂದು ಹೇಳುತ್ತಾರೆ !