ನನ್ನ ಬಂಧನವು ಮುಖ್ಯಮಂತ್ರಿ ವಿಜಯನ್ ಇವರಿಂದ ಜಿಹಾದಿಗಳಿಗೆ ನೀಡಿರುವ ರಮಝಾನ ಉಡುಗೊರೆ – ಮಾಜಿ ಶಾಸಕ ಪಿ.ಸಿ. ಜಾರ್ಜ

ತಿರುವನಂತಪುರಮ್ (ಕೇರಳ) – ನನ್ನ ಬಂಧನವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಮಝಾನ ನಿಮಿತ್ತ ಭಯೋತ್ಪಾದಕ ಮುಸಲ್ಮಾನರಿಗೆ ನೀಡಿರುವ ಉಡುಗೊರೆಯಾಗಿದೆಯೆಂದು ಮಾಜಿ ಶಾಸಕ ಮತ್ತು ಕಾಂಗ್ರೆಸ್ಸಿನ ಮಾಜಿ ಮುಖಂಡ ಪಿ.ಸಿ. ಜಾರ್ಜ ಟೀಕಿಸಿದ್ದಾರೆ. ಜಾರ್ಜರನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿರುವ ಕುರಿತು ಜಾರ್ಜರನ್ನು ಬಂಧಿಸಲಾಗಿತ್ತು.

ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ! – ಜಾರ್ಜ

ಜಾರ್ಜ ತಮ್ಮ ಮಾತನ್ನು ಮುಂದುವರಿಸುತ್ತಾ, ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಒಂದು ವೇಳೆ ನಾನು ಏನಾದರೂ ತಪ್ಪು ಮಾತನಾಡಿದ್ದರೆ, ನಾನು ಅದನ್ನು ಹಿಂದಕ್ಕೆ ಪಡೆದು ಕ್ಷಮೆಯಾಚಿಸಲು ಹಿಂಜರಿಯುತ್ತಿರಲಿಲ್ಲ. ನನ್ನ ಭಾಷಣ ಹಿಂದೂ ಮಹಾಸಮ್ಮೇಳನದ ಸ್ಥಳದಲ್ಲಿ ಮಾಡಿದ್ದೆನು. ನಾನು ಅಲ್ಲಿ ಹೇಳಿರುವುದೇನೆಂದರೆ, ನನಗೆ ಕಟ್ಟಾ ಮುಸಲ್ಮಾನರ ಮತಗಳ ಆವಶ್ಯಕತೆಯಿಲ್ಲ, ಯಾರು ಭಾರತವನ್ನು ಪ್ರೀತಿಸುವುದಿಲ್ಲವೋ, ಅಂತಹ ಯಾವುದೇ ವ್ಯಕ್ತಿಯನ್ನು, ಅವನು ಕ್ರಿಶ್ಚಿಯನ್ ಆಗಿರಲಿ, ಮುಸಲ್ಮಾನ ಆಗಿರಲಿ ಅಥವಾ ಹಿಂದೂ ಆಗಿರಲಿ ಅವರ ಮತಗಳು ನನಗೆ ಬೇಕಾಗಿಲ್ಲ ಎಂದು ನಾನು ಹೇಳಿದ್ದರಿಂದ ನಾನು ಮತಾಂಧ ಹೇಗೆ ಆಗಿದ್ದೇನೆ? ಎನ್ನುವ ಪ್ರಶ್ನೆಯನ್ನು ಕೂಡ ಅವರು ಎತ್ತಿದರು.

ಪಿ.ಸಿ.ಜಾರ್ಜ ಹೇಳಿದ್ದಾದರೂ ಏನು ?

ಪಿ.ಸಿ.ಜಾರ್ಜ ಹಿಂದೂ ಮಹಾಸಮ್ಮೇಳದಲ್ಲಿ ಭಾಷಣ ಮಾಡುವಾಗ, `ಮುಸಲ್ಮಾನರ ಉಪಹಾರಗೃಹದಲ್ಲಿ ಹಿಂದೂಗಳನ್ನು ನಪುಂಸಕರನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ, ಇಲ್ಲಿ ಚಹಾದಂತಹ ಪೇಯಗಳಲ್ಲಿ ಔಷಧಿಯನ್ನು ಹಾಕಲಾಗುತ್ತದೆ, ಇದರಿಂದ ವ್ಯಕ್ತಿ ನಪುಂಸಕನಾಗುತ್ತಾನೆ. ಇಂತಹ ಉಪಹಾರಗೃಹಗಳನ್ನು ಬಹಿಷ್ಕರಿಸಬೇಕು. ಮುಸಲ್ಮಾನರು ಇತರೆ ಧರ್ಮದವರನ್ನು ನಪುಂಸಕರನ್ನಾಗಿ ಮಾಡಿ ದೇಶವನ್ನು ತಮ್ಮ ವಶಕ್ಕೆ ಪಡೆಯಲು ನೋಡುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ’, ಈ ಹೇಳಿಕೆಯ ಬಗ್ಗೆ ಜಾರ್ಜರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.