ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರದ ಆದೇಶದ ನಂತರ, ಮುಸ್ಲೀಮರು ರಂಜಾನ್ ಸಮಯದಲ್ಲಿ ನಿಯಮದ ಅನುಸಾರ ಧ್ವನಿವರ್ಧಕಗಳನ್ನು ಬಳಸಿದ್ದಾರೆ. ಜನರು ಈಗಲೂ ಅದನ್ನು ಪಾಲಿಸುತ್ತಿದ್ದಾರೆ, ಆದರೂ ಆಗಾಗ ನ್ಯಾಯಾಲಯಕ್ಕೆ ಹೋಗುವುದು ಸೂಕ್ತವಲ್ಲ ಎಂದು ‘ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ’ದ ಅಧ್ಯಕ್ಷರು ಹಾಗೂ ಇಲ್ಲಿಯ ಈದಗಾಹನ ಮೌಲಾನಾ (ಇಸ್ಲಾಮಿ ಪಂಡಿತ) ಖಾಲಿದ ರಶೀದ ಫರಂಗಿ ಮಹಾಲಿಯವರು ಹೇಳಿದ್ದಾರೆ. ಅಲಾಹಾಬಾದ್ ಉಚ್ಚ ನ್ಯಾಯಾಲಯವು ‘ಮಸೀದಿಗಳಲ್ಲಿ ಅಜಾನ್‌ಗಾಗಿ ಧ್ವನಿವರ್ಧಕಗಳನ್ನು ಬಳಸುವುದು ಮೂಲಭೂತ ಅಧಿಕಾರವಲ್ಲ’, ಎಂಬ ತೀರ್ಪನ್ನು ನೀಡಿದೆ. ಅವರು ಅದರ ಬಗ್ಗೆ ಮಾತನಾಡುತ್ತಿದ್ದರು.
लखनऊ। लाउड स्पीकर उतरवाने के मामले पर मौलाना खालिद रशीद फिरंगी महली का बयान pic.twitter.com/VJN289w00y
— Vidrohi ANAND (@VidrohiANAND) April 28, 2022
ಸಂಪಾದಕೀಯ ನಿಲುವುಜನರಿಗೆ ಹೀಗೆ ಅನಿಸದಿರುವುದರಿಂದ ಅವರಿಗೆ ಪುನಃ ಪುನಃ ನ್ಯಾಯಾಲಯಕ್ಕೆ ಹೋಗಬೇಕಾಗುತ್ತಿದೆ, ಮೌಲಾನಾ (ಇಸ್ಲಾಮಿ ಪಂಡಿತರು) ಈ ಬಗ್ಗೆ ಏಕೆ ಯೋಚಿಸುವುದಿಲ್ಲ ? ಸರ್ವೋಚ್ಚ ನ್ಯಾಯಾಲಯವು ೨೦೦೫ ರಲ್ಲಿಯೇ ನೀಡಿರುವ ಆದೇಶವನ್ನು ಎಷ್ಟು ಮಸೀದಿಗಳು ಪಾಲಿಸಿವೆ ? ಈಗ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರವರು ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ನಂತರ ಧ್ವನಿವರ್ಧಕಗಳನ್ನು ಕೆಳಗಿಳಿಸಲಾಗುತ್ತಿದೆ, ಈ ಬಗ್ಗೆ ಮೌಲಾನಾ ಏಕೆ ಮಾತನಾಡುತ್ತಿಲ್ಲ ? |