ಅತ್ಯಾಚಾರದ ಆರೋಪಿಯು ಪರಾರಿಯಾಗುತ್ತಿರುವಾಗ ಪೊಲೀಸರು ಗುಂಡುಹಾರಾಟ ಮಾಡಲೇ ಬೇಕಾಗುತ್ತದೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು.

ಮೈನ್‍ಪುರಿ (ಉತ್ತರಪ್ರದೇಶ)ಯಲ್ಲಿ ೨ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ೧ ಕ್ವಿಂಟಾಲ್ ಗೋಮಾಂಸ ಜಪ್ತಿ

ಇಲ್ಲಿನ ಗ್ರಾಮಸ್ಥರು ಕುರಿ ಕಳ್ಳರನ್ನು ಹುಡುಕುತ್ತಿರುವಾಗ ೨ ದ್ವಿಚಕ್ರವಾಹನದಲ್ಲಿ ಬರುತ್ತಿರುವವರನ್ನು ತಡೆದರು ಆಗ ವಾಹನ ಚಾಲಕರು ವಾಹನವನ್ನು ಬಿಟ್ಟು ಪರಾರಿಯಾದರು. ಈ ದ್ವಿಚಕ್ರವಾಹನದಲ್ಲಿದ್ದ ಗೋಣಿ ಚೀಲದಲ್ಲಿ ಗೋಮಾಂಸ ಇರುವುದು ಕಂಡುಬಂತು.

ವಲಸಾಡ (ಗುಜರಾತ) ನಲ್ಲಿ, ಕಟುಕರಿಂದ ಗೋರಕ್ಷಕನ ಮೇಲೆ ವಾಹನ ಓಡಿಸಿ ಹತ್ಯೆ !

ಧರ್ಮಪುರ-ವಲಸಾಡ ರಸ್ತೆಯಲ್ಲಿ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಟುಕರು ೨೯ ವರ್ಷದ ಹಾರ್ದಿಕ ಕಂಸಾರಾ ಇವರ ಮೇಲೆ ವಾಹನ ಓಡಿಸಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ೧೦ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ ಕಂಸಾರಾ ಇವರು ಅಕ್ರಮವಾಗಿ ಗೋಸಾಗಾಟವನ್ನು ತಡೆಯಲು ಯತ್ನಿಸುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಯಿತು.

ಗುಜರಾತ್‍ನಲ್ಲಿ ‘ಗೋ ಸಂಶೋಧನಾ ಕೇಂದ್ರ’ದ ಸ್ಥಾಪನೆ !

‘ಗುಜರಾತ ಟೆಕ್ನೊಲೊಜಿಕಲ ಯುನಿವರ್ಸಿಟಿ’ (‘ಜಿ.ಟಿ.ಯು.’ವು) `ಗೋ ಸಂಶೋಧನಾ ಕೇಂದ್ರ’ವನ್ನು ಪ್ರಾರಂಭಿಸಿದೆ. ಹಸುವಿನ ಹಾಲು, ಗೋಮೂತ್ರ ಮತ್ತು ಸಗಣಿ ಸಾಂಪ್ರದಾಯಿಕ ಬಳಕೆಯನ್ನು ಉತ್ತೇಜಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಕಾಮಧೇನು ಆಯೋಗದಡಿಯಲ್ಲಿ ಸ್ಥಾಪಿಸಲಾದ ‘ಕಾಮಧೇನು ಸಂಸ್ಥೆ’ ಈ ಕೇಂದ್ರದ ಮುಂದಾಳತ್ವವನ್ನು ವಹಿಸಿಕೊಂಡಿದೆ.