ಗೋವು, ಗೋವಿನ ಸಗಣಿ ಮತ್ತು ಗೋಮುತ್ರ ಇವುಗಳಿಂದ ಅರ್ಥವ್ಯವಸ್ಥೆ ಸಕ್ಷಮ ಮಾಡಬಹುದು ! – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ

ಒಂದೊಂದು ರಾಜ್ಯವು ಇದಕ್ಕಾಗಿ ಪ್ರಯತ್ನಿಸುವುದ್ದಕ್ಕಿಂತ ಕೇಂದ್ರ ಸರಕಾರವೇ ಇದಕ್ಕಾಗಿ ಇಡೀ ದೇಶದಲ್ಲಿ ಪ್ರಯತ್ನಿಸಬೇಕು, ಎಂದು ಗೋಪ್ರೇಮಿಗಳಿಗೆ ಅನಿಸುತ್ತದೆ ! -ಸಂಪಾದಕರು 

ಭೋಪಾಲ (ಮಧ್ಯಪ್ರದೇಶ) – ಗೋವು, ಗೋವಿನ ಸಗಣಿ ಮತ್ತು ಗೋಮೂತ್ರ ಇವುಗಳಿಂದ ನಾವು ನಮ್ಮ ಅರ್ಥವ್ಯವಸ್ಥೆಯನ್ನು ಸಕ್ಷಮ ಮಾಡಬಹುದು. ನಮಗೆ ಅದನ್ನು ಮಾಡಲೇ ಬೇಕಾಗುತ್ತದೆ. ಇಂದಲ್ಲ ನಾಳೆ ನಮಗೆ ಅದರಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗುವುದು. ಗೋಮೂತ್ರದಿಂದ ಗೊಬ್ಬರ, ಕೀಟನಾಶಕ, ಔಷಧಿ ಮುಂತಾದವುಗಳನ್ನು ತಯಾರಿಸಬಹುದು. ಪ್ರಸ್ತುತ ನಾವು ಮಧ್ಯಪ್ರದೇಶದಲ್ಲಿ ಸ್ಮಶಾನಭೂಮಿಯಲ್ಲಿ ‘ಕಟ್ಟಿಗೆ ಉರಿಯಬಾರದೆಂದು’ ಪ್ರಯತ್ನಿಸುತ್ತಿದ್ದೇವೆ, ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಇವರು `ಇಂಡಿಯನ್ ವೆಟರ್ನರಿ ಅಸೋಸಿಯೇಷನ್’ನ ಮಹಿಳಾ ವಿಭಾಗದ ಸಮ್ಮೇಳನದಲ್ಲಿ ಮಾಹಿತಿ ನೀಡಿದರು.

ಶಿವರಾಜ ಸಿಂಹ ತಮ್ಮ ಮಾತನ್ನು ಮುಂದುವರೆಸುತ್ತಾ, `ಗೋವು ಮತ್ತು ಎತ್ತು ಇವುಗಳಿಲ್ಲದೆ ಕೆಲಸ ಆಗಲು ಸಾಧ್ಯವಿಲ್ಲ. ಸರಕಾರವು ಇದಕ್ಕಾಗಿ ಗೋಶಾಲೆಗಳು ಮತ್ತು ಅಭಯಾರಣ್ಯಗಳು ನಿರ್ಮಿಸಿದೆ. ಆದರೆ ಎಲ್ಲಿಯವರೆಗೆ ಜನರು ಇದರಲ್ಲಿ ಪಾಲ್ಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕೇವಲ ಗೋಶಾಲೆ ನಿರ್ಮಾಣ ಮಾಡಿ ಯಶಸ್ಸು ಸಿಗಲಾರದು. ನಾವು ಮಧ್ಯಪ್ರದೇಶದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.