ಗೋಮೂತ್ರದ ಸಹಾಯದಿಂದ ಜಲಮಾಲಿನ್ಯದ ಮೇಲೆ ಪರಿಣಾಮಕಾರಿ ಉಪಾಯ!

ಕೊಲ್ಹಾಪುರದ ಯುವ ವಿಜ್ಞಾನಿಗಳು ಮಾಡಿರುವ ವೈಶಿಷ್ಟ್ಯಪೂರ್ಣ ಸಂಶೋಧನೆಯು ಅಂತರಾಷ್ಟ್ರೀಯ ಖ್ಯಾತಿಯ ‘ನೇಚರ್’ ನಿಯತಕಾಲಿಕೆಯಲ್ಲಿ ಪ್ರಕಾಶಿತವಾಗಿದೆ!

ಪುರೋ(ಅಧೋ)ಗಾಮಿ, ನಾಸ್ತಿಕವಾದಿಗಳು ಎಷ್ಟೇ ಅಲ್ಲಗಳೆದರು ಗೋಮಾತೆಯ ಮಹತ್ವವು ಪುನಃ ಪುನಃ ಎದ್ದು ಕಾಣಿಸುತ್ತಲೆ ಇರುವುದು ! ಹೀಗಿರುವಾಗಲೂ ವಿಜ್ಞಾನದ ಮೂಲಕ ಗೋಮೂತ್ರದ ಉಪಯುಕ್ತತೆಯು ಸಾಬೀತಾಗಿದ್ದರೂ ತಮ್ಮನ್ನು ಬುದ್ಧಿವಾದಿಗಳೆಂದು ಹೇಳುವ ಈ ಗುಂಪು ಗೋಮಾತೆಯ ಮಹತ್ವವನ್ನು ಎಂದಿಗೂ ಸ್ವೀಕರಿಸುವುದಿಲ್ಲ, ಬದಲಾಗಿ ನೇಚರ್ ಅಂತರಾಷ್ಟ್ರೀಯ ನಿಯತಕಾಲಿಕೆಯ ಕೇಸರಿಕರಣವಾಗಿದೆ ಎಂದು ಹೇಳಲು ಅವರು ಹಿಂಜರಿಯುವುದಿಲ್ಲ ! – ಸಂಪಾದಕರು

ಕೊಲ್ಹಾಪುರ (ಮಹಾರಾಷ್ಟ್ರ) – ಶಿವಾಜಿ ವಿದ್ಯಾಪೀಠದ ವಿದ್ಯಾರ್ಥಿ ಪ್ರಶಾಂತ ಸಾವಳಕರ ಮತ್ತು ಋತುಜಾ ಮಾಂಡವಕರ ಈ ಇಬ್ಬರು ಯುವ ವಿಜ್ಞಾನಿಗಳು ದೇಸಿ ಹಸುವಿನ ಮೂತ್ರದ (ಗೋಮೂತ್ರದ) ಸಹಾಯದಿಂದ ಬೆಳ್ಳಿಯನ್ನು ವಿಘಟಿಸಿ ಅದರಿಂದ ಹೊಳೆಯುವ ಸೂಕ್ಷ್ಮ ಕಣವನ್ನು (ನೋ ಪಾರ್ಟಿಕಲ್ಸ್) ಸಿದ್ಧಪಡಿಸಿದರು. ಬೆಳ್ಳಿಯ ಈ ಅಬ್ಜಾಂಶವನ್ನು ಅಂದರೆ ನ್ಯಾನೊಪಾರ್ಟಿಕಲ್ಸ್ ನ್ನು ಬಟ್ಟೆಗಳ ಕಾರ್ಖಾನೆಯಿಂದ ಹೊರಬಿಡಲಾಗುವ ಅತ್ಯಂತ ವಿಷಕಾರಿ ನೀರಿನ ಶುದ್ಧೀಕರಣಕ್ಕಾಗಿ ಬಳಸಬಹುದು’ ಎಂಬುದು ಈ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ‘ಸಿಲ್ವರ್ ನ್ಯಾನೊಪಾರ್ಟಿಕಲ್ಸ್’ ಮತ್ತು ಇನ್ಫ್ರಾರೆಡ್ ಕಿರಣಗಳ ಜೈವರಸಾಯನಿಕ ಕ್ರಿಯೆಯನ್ನು ಬಳಸಿ ವಸ್ತ್ರ ಉದ್ಯೋಗದಲ್ಲಿನ ಅಪಾಯಕಾರಿ ಬಣ್ಣಗಳು ಮತ್ತು ರಾಸಾಯನಿಕ ಪದಾರ್ಥ ( ಮಿಥಿಲಿನ್ ಮತ್ತು ಕ್ರಿಸ್ಟಲ್) ಎಂಬ ಜಲಮಾಲಿನ್ಯ ಮಾಡುವ ಮಹತ್ವಪೂರ್ಣ ಘಟಕಗಳನ್ನು ಸಹಜವಾಗಿ ವಿಘಟನೆ ಮಾಡಬಹುದು. ‘ಒಂದು ಲೀಟರ್ ದೂಷಿತ ನೀರನ್ನು ಶುದ್ಧಗೊಳಿಸಲು 0.1 ಗ್ರಾಂ ದ್ರವ ಪದಾರ್ಥವು ಸಾಕಾಗುತ್ತದೆ, ಎಂಬುದು ಈ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಈ ಸಂಶೋಧನೆಯಿಂದ ಈಗ ವಸ್ತ್ರ ಉದ್ಯೋಗದಿಂದ ನದಿ, ಸರೋವರ ಇತ್ಯಾದಿಗಳಲ್ಲಿ ದೊಡ್ಡಪ್ರಮಾಣದಲ್ಲಿ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಬಹುದು.

1. ಈ ಸಂಶೋಧನೆಯು ಆಗಸ್ಟ್ 20, 2021 ರಂದು ಲಂಡನ್ ನ ಜಗತ್ಪ್ರಸಿದ್ಧ ‘ನೇಚರ್’ ಈ ನಿಯತಕಾಲಿಕೆಯಲ್ಲಿ ಪ್ರಕಾಶಿತವಾಗಿದೆ.

2. ಸಿಲ್ವರ್ ನಾನೋ ಪಾರ್ಟಿಕಲ್ಸ್ ನ್ನು ಭಾರತೀಯ ಪ್ರಾಚೀನ ಪರಂಪರೆಯಲ್ಲಿ ಲಭಿಸಿದ ಆಯುರ್ವೇದದಲ್ಲಿ ಅತ್ಯಂತ ಪ್ರಭಾವಿ ರೀತಿಯಲ್ಲಿ ಬಳಸಲಾಗಿದೆ. ಆಯುರ್ವೇದದಲ್ಲಿ ಬೆಳ್ಳಿಯ ಸೂಕ್ಷ್ಮ ಕಣವನ್ನು ‘ರೌಪ್ಯ ಭಸ್ಮ’ ಎಂದು ಗುರುತಿಸಲಾಗುತ್ತದೆ.

3. ಈ ಸಂಶೋಧನೆಗಾಗಿ ಶಿವಾಜಿ ವಿದ್ಯಾಪೀಠದ ಕುಲಗುರುಗಳಾದ ಡಾ. ಪಿ. ಎಸ್. ಪಾಟೀಲ, ಡಾ. ನೀರಜ ಪ್ರಸಾದ, ಡಾ. ಗಣೇಶ ಕಾಂಬಳೆ ಮತ್ತು ನ್ಯಾನೋ ಸೈನ್ಸ್ ವಿಭಾಗದ ಪ್ರಮುಖರಾದ ಡಾ. ಕಿರಣಕುಮಾರ ಶರ್ಮ ಇವರ ಮಾರ್ಗದರ್ಶನ ಲಭಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

4. ಈ ಸಂಶೋಧನೆಯ ಬಗ್ಗೆ ‘ನೇಚರ್’ ಈ ನಿಯತಕಾಲಿಕೆಯ ಜಾಲತಾಣದ ಮುಂದಿನ ಕೊಂಡಿಯಲ್ಲಿ ಓದಬಹುದು: https://www.nature.com/articles/s41598-021-96335-2

5. ಗಿರ್ ಹಸುವಿನಂತಹ ಭಾರತೀಯ ದೇಶಿ ಹಸುಗಳ ಮೂತ್ರದಲ್ಲಿಯೇ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹಾಗೆಯೇ ಮಾಲಿನ್ಯದ ಮೇಲೆ ನಿಯಂತ್ರಣ ಸಾಧಿಸುವ ಕ್ಷಮತೆಯಿದೆ. ಮಿಶ್ರತಳಿ ಹಸುಗಳ ಮೂತ್ರದಲ್ಲಿಯೂ ಈ ಕ್ಷಮತೆಯಿಲ್ಲ ಎಂದೂ ಈ ಸಂಶೋಧಕರು ತಮ್ಮ ಶೋಧ ಪ್ರಬಂಧದ ಮೂಲಕ ಸ್ಪಷ್ಟಪಡಿಸಿದ್ದಾರೆ. (ಇದರಿಂದ ಭಾರತೀಯ ಗೋಮಾತೆಯ ವೈಜ್ಞಾನಿಕ ಮಹತ್ವವು ಸ್ಪಷ್ಟವಾಗುತ್ತದೆ. ಈಗಲಾದರೂ ಇದನ್ನು ನೋಡಿ ಕೇಂದ್ರ ಸರಕಾರವು ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು, ಹಾಗೆಯೇ ಹಸುವಿನ ರಕ್ಷಣೆಗಾಗಿ ದೇಶವ್ಯಾಪಿ ಗೋಹತ್ಯೆ ನಿಷೇಧ ಕಾನೂನನ್ನು ತರಬೇಕು ಮತ್ತು ಇದಕ್ಕಾಗಿ ಕಠೋರ ಕಾರ್ಯಾಚರಣೆಯನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)