ಹರಿಯಾಣ ಸರಕಾರದಿಂದ ಗೋಹತ್ಯೆ ಮತ್ತು ಗೋ ಕಳ್ಳಸಾಗಣೆಯನ್ನು ತಡೆಗಟ್ಟಲು ವಿಶೇಷ ಗೋ ಸಂರಕ್ಷಣಾ ಕ್ರಿಯಾ ಪಡೆಯ ಸ್ಥಾಪನೆ

ಹರಿಯಾಣಾ ಸರಕಾರವು ಗೋ ಕಳ್ಳಸಾಗಣೆ, ಗೋಹತ್ಯೆ ಮತ್ತು ಬೀದಿ ಪ್ರಾಣಿಗಳ ಓಡಾಟಗಳನ್ನು ತಡೆಗಟ್ಟಲು ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ‘ಸ್ಪೆಶಲ್ ಕೌ ಪ್ರೊಟೆಕ್ಷನ್ ಟಾಸ್ಕ ಫೋರ್ಸ್’ಅನ್ನು (ವಿಶೇಷ ಗೋರಕ್ಷಣಾ ಕೃತಿ ಪಡೆ)ಸ್ಥಾಪಿಸಲಾಗಿದೆ.

ಜೈಪುರದಲ್ಲಿ ಹಸುವಿನ ಸೆಗಣಿಯಿಂದ ಬಣ್ಣ ನಿರ್ಮಿಸುವ ಪ್ರಕಲ್ಪದ ಉದ್ಘಾಟನೆ

ಸಗಣಿಯಿಂದ ನಿರ್ಮಿಸಿದ ಬಣ್ಣವು ವಿಷರಹಿತವಾಗಿದ್ದು ಹಾಗೂ ಇಕೋ ಫ್ರೆಂಡ್ಲಿ(ಪರಿಸರಕ್ಕೆ ಪೂರಕ)ವಾಗಿದೆ. ಈ ಬಣ್ಣದಲ್ಲಿ ಗಾಜು, ಪಾದರಸ, ಕ್ರೊಮೊಯಮ್, ಆರ್ಸೆನಿಕ್ ಮತ್ತು ಕಾಡಮಿಯಮ್‍ಅನ್ನು ಉಪಯೋಗಿಸಲಾಗಿದೆ. ಈ ಸಗಣಿಯಿಂದ ನಿರ್ಮಿಸಿದ ಬಣ್ಣಗಳ ಮಾರಾಟ ಹೆಚ್ಚಾದರೆ ರೈತರಲ್ಲಿನ ಸಗಣಿಯ ಖರೀದಿಯು ಹೆಚ್ಚಾಗುವುದು.

ಅತ್ಯಾಚಾರದ ಆರೋಪಿಯು ಪರಾರಿಯಾಗುತ್ತಿರುವಾಗ ಪೊಲೀಸರು ಗುಂಡುಹಾರಾಟ ಮಾಡಲೇ ಬೇಕಾಗುತ್ತದೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು.

ಮೈನ್‍ಪುರಿ (ಉತ್ತರಪ್ರದೇಶ)ಯಲ್ಲಿ ೨ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ೧ ಕ್ವಿಂಟಾಲ್ ಗೋಮಾಂಸ ಜಪ್ತಿ

ಇಲ್ಲಿನ ಗ್ರಾಮಸ್ಥರು ಕುರಿ ಕಳ್ಳರನ್ನು ಹುಡುಕುತ್ತಿರುವಾಗ ೨ ದ್ವಿಚಕ್ರವಾಹನದಲ್ಲಿ ಬರುತ್ತಿರುವವರನ್ನು ತಡೆದರು ಆಗ ವಾಹನ ಚಾಲಕರು ವಾಹನವನ್ನು ಬಿಟ್ಟು ಪರಾರಿಯಾದರು. ಈ ದ್ವಿಚಕ್ರವಾಹನದಲ್ಲಿದ್ದ ಗೋಣಿ ಚೀಲದಲ್ಲಿ ಗೋಮಾಂಸ ಇರುವುದು ಕಂಡುಬಂತು.

ವಲಸಾಡ (ಗುಜರಾತ) ನಲ್ಲಿ, ಕಟುಕರಿಂದ ಗೋರಕ್ಷಕನ ಮೇಲೆ ವಾಹನ ಓಡಿಸಿ ಹತ್ಯೆ !

ಧರ್ಮಪುರ-ವಲಸಾಡ ರಸ್ತೆಯಲ್ಲಿ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಟುಕರು ೨೯ ವರ್ಷದ ಹಾರ್ದಿಕ ಕಂಸಾರಾ ಇವರ ಮೇಲೆ ವಾಹನ ಓಡಿಸಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ೧೦ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ ಕಂಸಾರಾ ಇವರು ಅಕ್ರಮವಾಗಿ ಗೋಸಾಗಾಟವನ್ನು ತಡೆಯಲು ಯತ್ನಿಸುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಯಿತು.

ಗುಜರಾತ್‍ನಲ್ಲಿ ‘ಗೋ ಸಂಶೋಧನಾ ಕೇಂದ್ರ’ದ ಸ್ಥಾಪನೆ !

‘ಗುಜರಾತ ಟೆಕ್ನೊಲೊಜಿಕಲ ಯುನಿವರ್ಸಿಟಿ’ (‘ಜಿ.ಟಿ.ಯು.’ವು) `ಗೋ ಸಂಶೋಧನಾ ಕೇಂದ್ರ’ವನ್ನು ಪ್ರಾರಂಭಿಸಿದೆ. ಹಸುವಿನ ಹಾಲು, ಗೋಮೂತ್ರ ಮತ್ತು ಸಗಣಿ ಸಾಂಪ್ರದಾಯಿಕ ಬಳಕೆಯನ್ನು ಉತ್ತೇಜಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಕಾಮಧೇನು ಆಯೋಗದಡಿಯಲ್ಲಿ ಸ್ಥಾಪಿಸಲಾದ ‘ಕಾಮಧೇನು ಸಂಸ್ಥೆ’ ಈ ಕೇಂದ್ರದ ಮುಂದಾಳತ್ವವನ್ನು ವಹಿಸಿಕೊಂಡಿದೆ.