ನಿಪ್ಪಾಣಿಯಲ್ಲಾದ ಘಟನೆ !
ನಿಪ್ಪಾಣಿ – ಅಕ್ಟೋಬರ್ 22 ರಂದು ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ರಾಜಸ್ಥಾನದಿಂದ ಬಂದಿದ್ದ ವ್ಯಕ್ತಿಯೊಬ್ಬರು ಗೋಪಾಲಕನಂತೆ ನಟಿಸಿ ಕಟುಕನಿಗೆ ಹಸುವನ್ನು 9 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದು ವಿವಿಧ ಹಿಂದುತ್ವನಿಷ್ಠ ಸಂಘಟನೆಗಳಿಗೆ ತಿಳಿದು ಬಂದಿದೆ. ಕಾರ್ಯಕರ್ತರು ಶೋಧ ಕಾರ್ಯಾಚರಣೆ ನಡೆಸಿ ಹಸುವನ್ನು ಮರಳಿ ಪಡೆದರು. ಈ ಯಶಸ್ವಿ ಅಭಿಯಾನದಲ್ಲಿ ವಿರೂಪಾಕ್ಷಲಿಂಗ ಸಮಾಧಿ ಮಠದ ಭಕ್ತರು, ಶ್ರೀರಾಮ ಸೇನೆ ಕರ್ನಾಟಕ, ವಾರಕರಿ ಸಂಪ್ರದಾಯ, ಬಜರಂಗದಳ ನಿಪ್ಪಾಣಿ ಪ್ರದೇಶದ ಗೋರಕ್ಷಕರು ಭಕ್ತರು ಸಹಭಾಗಿಯಾಗಿದ್ದರು.
ಆರಂಭದಲ್ಲಿ ಗೋಪಾಲಕರಂತೆ ನಟಿಸುವ ವ್ಯಕ್ತಿಯು ಯಾವುದೇ ವಿಳಾಸವನ್ನು ನೀಡುತ್ತಿರಲಿಲ್ಲ. ಇದಾದ ಬಳಿಕ ಹಿಂದುತ್ವನಿಷ್ಠ ಸಂಘಟನೆಗಳು ‘ಹಸು ವಾಪಸಾಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’, ಎಂದು ಎಚ್ಚರಿಕೆ ನೀಡಿದ ಕೂಡಲೇ ಈ ವ್ಯಕ್ತಿ ಸಂಪರ್ಕಿಸಿ ಹಸುವನ್ನು ಮರಳಿ ಕರೆತಂದಿದ್ದಾರೆ. ಇದಾದ ಬಳಿಕ ಹಿಂದುತ್ವನಿಷ್ಠ ಸಂಘಟನೆಗಳು ಈ ಪ್ರಕರಣದಲ್ಲಿ ಭಾಗಿಯಾದ ಇತರ ಕಟುಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಮತ್ತು ಅವರಿಂದ ‘ಇನ್ನು ಮುಂದೆ ಗೋ ಕಳ್ಳ ಸಾಗಣೆ ಮಾಡುವುದಿಲ್ಲ’ ಎಂದು ಪತ್ರ ಬರೆಸಿಕೊಂಡರು. ಸುಮಾರು 4 ಗಂಟೆಗಳ ಕಾಲ ಹಸುವನ್ನು ಮರಳಿ ಪಡೆಯುವ ಉಪಯಕ್ರಮ ನಡೆಯುತ್ತಿತ್ತು. ಈ ವೇಳೆ ವ್ಯಯಿಸಿದ 9 ಸಾವಿರ ರೂಪಾಯಿಗಳನ್ನು ಹಿಂದುತ್ವನಿಷ್ಠರು ನಿಪ್ಪಾಣಿಯಲ್ಲಿರುವ ಸಮಾಧಿ ಮಠದ ಗೋಶಾಲೆಗೆ ಅರ್ಪಣೆ ನೀಡಿದರು.