ಸರಕಾರಿಕರಣವಾಗಿರುವ ದೇವಸ್ಥಾನಗಳಲ್ಲಿ ದೀಪಾವಳಿಯಂದು ಗೋಪೂಜೆ ಮಾಡಲು ಕರ್ನಾಟಕ ಸರಕಾರದ ಆದೇಶ !

ಕರ್ನಾಟಕದ ಭಾಜಪ ಸರಕಾರದ ಶ್ಲಾಘನೀಯ ನಿರ್ಧಾರ ! ಈಗ ಸರಕಾರವು ಎಲ್ಲಾ ದೇವಸ್ಥಾನಗಳ ಸರಕಾರಿಕರಣವನ್ನು ರದ್ದುಪಡಿಸಿ ಅದನ್ನು ಭಕ್ತರ ನಿಯಂತ್ರಣಕ್ಕೊಪ್ಪಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ಬೆಂಗಳೂರು – ದೀಪಾವಳಿಯ ಸಮಯದಲ್ಲಿ ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿರುವ ಧಾರ್ಮಿಕದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಗೋಪೂಜೆ ನೆರವೇರಿಸಲು ಸರಕಾರ ಆದೇಶಿಸಿದೆ. ಈ ಕುರಿತು ದತ್ತಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಈ ಎಲ್ಲ ದೇವಸ್ಥಾನಗಳಲ್ಲಿ ನವೆಂಬರ 5 ರಂದು ಬಲಿ ಪಾಡ್ಯದಂದು ಸಂಜೆ 5.30 ರಿಂದ 6.30 ವರೆಗೆ ಗೋಪೂಜೆ ಮಾಡಲು ಆದೇಶ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗೋಪೂಜೆಯು ಒಂದು ಪ್ರಮುಖ ಹಬ್ಬವಾಗಿದೆ. ಮನೆಯಲ್ಲಿರುವ ಎಲ್ಲಾ ಹಸುಗಳು ಮತ್ತು ಅವುಗಳ ಕರುಗಳನ್ನು ಅಲಂಕರಿಸಿ ಅವುಗಳನ್ನು ಪೂಜಿಸಿ ಅವುಗಳಿಗೆ ತಿನಿಸುಗಳನ್ನು ಕೊಡುವ ವಾಡಿಕೆ ಇನ್ನೂ ಆಚರಣೆಯಲ್ಲಿದೆ. ಕಾರ್ತಿಕ ಶುಕ್ಲ ಪಕ್ಷ ಪಾಡ್ಯದಂದು ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿ ಗೋಪಾಲರನ್ನು ರಕ್ಷಿಸಿದನೆಂದು ಹೇಳಲಾಗುತ್ತದೆ. ಈ ದಿನ ಗೋವರ್ಧನ ಮತ್ತು ಗೋಮಾತೆಯನ್ನು ಪೂಜಿಸುವ ವಾಡಿಕೆ ಇದೆ.’ ಎಂದು ಹೇಳಿದರು.