ಹಸುವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವ ಉಚ್ಚ ನ್ಯಾಯಾಲಯದ ಅಭಿಪ್ರಾಯ ಸ್ವಾಗತಾರ್ಹ – ಮೌಲಾನಾ ಖಾಲಿದ ರಶೀದ ಫಿರಂಗೀ ಮಹಲೀ, ಸದಸ್ಯರು, ಆಲ್ ಇಂಡಿಯಾ ಮುಸ್ಲಿಮ ಪರ್ಸನಲ ಲಾ ಬೋರ್ಡ್

ಕೇವಲ ಸ್ವಾಗತಿಸುವುದು ಮಾತ್ರ ಅಪೇಕ್ಷಿತವಿಲ್ಲ, ಪ್ರತ್ಯಕ್ಷವಾಗಿ ಗೋಹತ್ಯೆ ಆಗದಂತೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ ಲಾ ಬೋರ್ಡ್ ಪ್ರಯತ್ನಿಸಬೇಕು ! – ಸಂಪಾದಕರು 

ಮೌಲಾನಾ ಖಾಲಿದ್ ರಶೀದ ಫಿರಂಗೀ ಮಹಲೀ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಲಾಹಾಬಾದ ಉಚ್ಚ ನ್ಯಾಯಾಲಯವು ಹಸುವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವಂತೆ ವ್ಯಕ್ತ ಪಡಿಸಿದ ಅಭಿಪ್ರಾಯವನ್ನು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ಸದಸ್ಯ ಮೌಲಾನಾ (ಇಸ್ಲಾಮಿ ಅಭ್ಯಾಸಕರು) ಖಾಲಿದ್ ರಶೀದ ಫಿರಂಗೀ ಮಹಲೀಯವರು ಸ್ವಾಗತಿಸಿದ್ದಾರೆ.

ಅದರ ಬಗ್ಗೆ ಮೌಲಾನಾ ಮಹಲೀಯವರು ಹೀಗೆಂದರು, ಹಿಂದೂ ಬಾಂಧವರ ಭಾವನೆಗಳನ್ನು ಗೌರವಿಸಬೇಕು. ಅದರಿಂದ ದೇಶದಲ್ಲಿ ಐಕ್ಯತೆ ಹಾಗೂ ಶಾಂತತೆ ಖಾಯಂ ಆಗಿ ಉಳಿಯುವುದು. ನ್ಯಾಯಾಲಯವು ‘ಮೊಗಲರ ಕಾಲದಲ್ಲಿ ಕೂಡ ಗೋಹತ್ಯೆಯ ಮೇಲೆ ನಿರ್ಬಂಧವಿತ್ತು.’ ಬಾಬರನು ತನ್ನ ಮಗ ಹುಮಾಯೂನನಿಗೆ ‘ಹಿಂದೂಗಳ ಭಾವನೆಗಳನ್ನು ಗೌರವಿಸು ಹಾಗೂ ಗೋಹತ್ಯೆಗೆ ಎಂದಿಗೂ ಅನುಮತಿ ನೀಡ ಬೇಡ ಎಂದು ಸಲಹೆ ನೀಡಿದ್ದನು.” ಹುಮಾಯೂನನ ಬಳಿಕ ಪ್ರತಿಯೊಬ್ಬ ಮೊಗಲ ಶಾಸಕನು ಕೂಡ ಅದನ್ನು ಪಾಲಿಸಿದನು. ಮೊಗಲರು ಎಲ್ಲಾ ಮತದವರ ಹಾಗೂ ಅವರ ವಿಧಿಗಳನ್ನು ಗೌರವಿಸಿದ್ದರು. ಆದ್ದರಿಂದಲೇ ಆ ಕಾಲದಲ್ಲಿ ಧಾರ್ಮಿಕ ಹೋರಾಟಗಳು ನಡೆದಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಲಕ್ಷ್ಮಣಪುರಿಯಲ್ಲಿ ಮೌಲಾನಾ ಬಾರಿಯವರು ಬಕ್ರೀದ್ ನ ಸಮಯದಲ್ಲಿ ಗೋಹತ್ಯೆಯ ಮೇಲೆ ನಿರ್ಬಂಧ ಹೇರುವ ಫತವಾ ತೆಗೆದಿದ್ದರು. ಈಗಲೂ ಕೂಡ ದೇಶದಲ್ಲಿ ಯಾವುದೇ ಮೌಲವೀಯು ಗೋಹತ್ಯೆಯ ಪರ ವಹಿಸುವುದಿಲ್ಲ. (ಹಾಗಾದರೆ, ದೇಶದಲ್ಲಿ ಗೋಹತ್ಯೆ ಏಕೆ ನಡೆಯುತ್ತಿದೆ? ಅದನ್ನು ಖಾಯಂ ಸ್ವರೂಪವನ್ನು ನಿಲ್ಲಿಸಲು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಏಕೆ ಪ್ರಯತ್ನಿಸುವುದಿಲ್ಲ ಅಥವಾ ಮೌಲಾನಾ ಏಕೆ ಪ್ರಯತ್ನಿಸುತ್ತಿಲ್ಲ) ಅದಕ್ಕಾಗಿ ಇಡೀ ದೇಶದಲ್ಲಿ ಈ ಕಾನೂನು ತರಬೇಕೆಂದು ಏಕೆ ಬೇಡಿಕೆ ಮಾಡಬೇಕಾಗುತ್ತಿದೆ? ಮುಸಲ್ಮಾನರಿಗೆ ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿರ್ಬಂಧ ಕಾಯಿದೆಯನ್ನು ಪಾಲಿಸಲು ಏಕೆ ಕರೆ ನೀಡುತ್ತಿಲ್ಲ? – ಸಂಪಾದಕರು)