ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ ! – ನ್ಯಾಯಾಲಯದ ಅಭಿಪ್ರಾಯ
|
ಪ್ರಯಾಗರಾಜ (ಉತ್ತರ ಪ್ರದೇಶ) – ಹಸು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು. ಹಸುವಿಗೆ ಮೂಲಭೂತ ಹಕ್ಕು ನೀಡುವುದಕ್ಕಾಗಿ ಮತ್ತು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಿದಲು ಸರಕಾರ ಸಂಸತ್ತಿನಲ್ಲಿ ವಿಧೇಯಕ ಮಂಡಿಸಬೇಕು. ಹಸುವಿಗೆ ಹಾನಿ ಮಾಡುವವರಿಗೆ ಶಿಕ್ಷೆ ಕೊಡಲು ಕಠಿಣ ಕಾನೂನ ಮಾಡಬೇಕು. ಯಾವಾಗ ಹಸುವಿನ ಕಲ್ಯಾಣವಾಗುವುದೋ, ಆಗಲೇ ದೇಶದ ಕಲ್ಯಾಣವಾಗುವುದು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಉತ್ತರ ಪ್ರದೇಶದಲ್ಲಿನ ‘ಗೋಹತ್ಯೆ ನಿಷೇಧ ಅಧಿನಿಯಮ ಕಾನೂನಿ’ನ ಅಡಿಯಲ್ಲಿ ಅಪರಾಧ ಮಾಡಿದ ಆರೋಪಿ ಜಾವೇದ್ ಇವನ ಜಾಮೀನು ಅರ್ಜಿಯನ್ನು ನಿರಾಕರಿಸಿ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು (ಗೋಹತ್ಯಾ ನಿಷೇಧ ಕಾನೂನು ಇರುವಾಗ ಅದರ ಉಲ್ಲಂಘನೆ ಮಾಡುವರಿಗೆ ಜಾಮೀನು ನಿರಾಕರಿಸಬೇಕು; ಅಷ್ಟೇ ಅಲ್ಲ ಅಂಥವರಿಗೆ ಮುಂದೆ ಗಲ್ಲು ಶಿಕ್ಷೆ ಕೊಡಿಸುವ ವ್ಯವಸ್ಥೆ ಮಾಡಬೇಕು ! – ಸಂಪಾದಕೀಯ)
Cow Should Be Declared National Animal; Cow Protection Be Made Fundamental Right Of Hindus : Allahabad High Court https://t.co/Qm5Yco9Xq8
— Live Law (@LiveLawIndia) September 1, 2021
ಉಚ್ಚ ನ್ಯಾಯಾಲಯವು,
೧. ಹಸುಗಳ ರಕ್ಷಣೆಯ ಕಾರ್ಯ ಕೇವಲ ಒಂದು ಧರ್ಮ ಅಥವಾ ಪಂಥಕ್ಕೆ ಸೀಮಿತವಲ್ಲ, ಹಸು ಇದು ಭಾರತೀಯ ಸಂಸ್ಕೃತಿಯಾಗಿದೆ. ಈ ಸಂಸ್ಕೃತಿಯನ್ನು ಉಳಿಸುವ ಕಾರ್ಯ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕರದ್ದಾಗಿದೆ ಅವರು ಯಾವುದೇ ಧರ್ಮಕ್ಕಕ್ಕೆ ಸೇರಿರಲಿ, ಅದನ್ನು ಮಾಡಬೇಕು.
೨. ವಿವಿಧ ಧರ್ಮದ ಜನರು ಒಟ್ಟಿಗೆ ವಾಸಿಸುವ ದೇಶವೆಂದರೆ ಸಂಪೂರ್ಣ ಜಗತ್ತಿನಲ್ಲಿ ಭಾರತವೊಂದೇ. ಅವರು ಬೇರೆ ಬೇರೆ ಪೂಜೆಗಳನ್ನು ಮಾಡುತ್ತಾರೆ; ಆದರೆ ದೇಶಕ್ಕಾಗಿ ಪ್ರತಿಯೊಬ್ಬರ ವಿಚಾರವು ಒಂದೇ ಸಮಾನವಾಗಿದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯನು ದೇಶದ ಐಕ್ಯತೆಗೆ ಹಾಗೂ ವಿಶ್ವಾಸವನ್ನು ಪಡೆಯಲು ಒಂದು ಹೆಜ್ಜೆ ಮುಂದೆ ಇಡುತ್ತಿದ್ದರೆ, ಕೆಲವರು (ಯಾರಿಗೆ ರಾಷ್ಟ್ರ ಹಿತದತ್ತ ಶ್ರದ್ಧೆ ಹಾಗೂ ವಿಶ್ವಾಸ ಇಲ್ಲವೋ ಅವರು) ಈ ರೀತಿಯ ಚರ್ಚೆಯನ್ನು ಮಾಡಿ ದೇಶದ ಹಿರಿಮೆಯನ್ನು ಕುಗ್ಗಿಸುವಂತೆ ಮಾಡುತ್ತಾರೆ.
೩. ಜಾವೇದ್ ನ ಅಪರಾಧದ ವರದಿಯನ್ನು ನೋಡಿದರೆ, ಮೇಲ್ನೋಟಕ್ಕೆ ಅವನ ಮೇಲಿರುವ ಆರೋಪ ಸಿದ್ಧವಾಗುತ್ತದೆ. ಜಾವೆದ್‌ಗೆ ಜಾಮೀನು ನೀಡಿದರೆ, ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ದ್ವೇಷ ನಿರ್ಮಾಣವಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು.