ಹರಿಯಾಣ ಸರಕಾರದಿಂದ ಗೋಹತ್ಯೆ ಮತ್ತು ಗೋ ಕಳ್ಳಸಾಗಣೆಯನ್ನು ತಡೆಗಟ್ಟಲು ವಿಶೇಷ ಗೋ ಸಂರಕ್ಷಣಾ ಕ್ರಿಯಾ ಪಡೆಯ ಸ್ಥಾಪನೆ

ವಿಶೇಷ ಗೋ ರಕ್ಷಣಾ ಪಡೆಯನ್ನು ಸ್ಥಾಪಿಸುವುದು ಉತ್ತಮ ನಿರ್ಧಾರವಾಗಿದೆ; ಆದರೆ, ಪಡೆಯಿಂದ ಪ್ರಾಮಾಣಿಕವಾಗಿ ಕೆಲಸವೂ ಆಗಬೇಕು ಈ ಕಡೆಯೂ ಸರಕಾರವು ಗಮನ ಹರಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಚಂಡಿಗಡ : ಹರಿಯಾಣಾ ಸರಕಾರವು ಗೋ ಕಳ್ಳಸಾಗಣೆ, ಗೋಹತ್ಯೆ ಮತ್ತು ಬೀದಿ ಪ್ರಾಣಿಗಳ ಓಡಾಟಗಳನ್ನು ತಡೆಗಟ್ಟಲು ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ‘ಸ್ಪೆಶಲ್ ಕೌ ಪ್ರೊಟೆಕ್ಷನ್ ಟಾಸ್ಕ ಫೋರ್ಸ್’ಅನ್ನು (ವಿಶೇಷ ಗೋರಕ್ಷಣಾ ಕೃತಿ ಪಡೆ)ಸ್ಥಾಪಿಸಲಾಗಿದೆ. ಇದರಲ್ಲಿ ಆಡಳಿತ ಅಧಿಕಾರಿಗಳು, ಪೊಲೀಸರೊಂದಿಗೆ ಗೋ ರಕ್ಷಕರು ಮತ್ತು ಗೋಸೇವಕರನ್ನು ಸೇರಿಸಲಾಗುವುದು. ಈ ಸಂಬಂಧದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈ ಪಡೆಯಲ್ಲಿ ರಾಜ್ಯ ಮಟ್ಟದಲ್ಲಿ ೬ ಮತ್ತು ಜಿಲ್ಲಾ ಮಟ್ಟದಲ್ಲಿ ೧೧ ಸದಸ್ಯರು ಇರಲಿದ್ದಾರೆ.

ಕಾಂಗ್ರೆಸ್ ಪಕ್ಷವು ಗೋರಕ್ಷಕ ಮತ್ತು ಗೋಸೇವಕರನ್ನು ಈ ಪಡೆಯಲ್ಲಿ ಸೇರಿಸಿದ್ದಕ್ಕೆ ಟೀಕಿಸಿದೆ. ಕಾಂಗ್ರೆಸ್ ವಕ್ತಾರ ರಂಜಿತಾ ಮೆಹ್ತಾ ಇವರು, ‘ಗೋರಕ್ಷಕರು ಗೋ ಕಳ್ಳ ಸಾಗಾಟಗಾರರಿಂದ ಸುಲಿಗೆಯನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ, ಆದ್ದರಿಂದ, ಸರಕಾರಿ ಪಡೆಗಳಲ್ಲಿ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳನ್ನು ಮಾತ್ರ ಸೇರಿಸಿಕೊಳ್ಳಬೇಕು. ಗೋರಕ್ಷಕರಿಗೆ ಇದರಲ್ಲಿ ಸ್ಥಾನ ನೀಡಬಾರದು. ಒಳ್ಳೆಯ ಚಾರಿತ್ರ್ಯವನ್ನು ಹೊಂದಿರುವವರನ್ನು ಮಾತ್ರ ಅದರಲ್ಲಿ ಸೇರಿಸಬೇಕು ಎಂದು ಹೇಳಿದರು.