ಒಂದು ಹಸುವಿನ ಸಗಣಿಯಿಂದ 3 ಮನೆಗಳಿಗೆ ವರ್ಷವಿಡೀ ವಿದ್ಯುತ್ ಸಿಗಬಲ್ಲದು !- ಸಂಪಾದಕರು
ಲಂಡನ್ (ಬ್ರಿಟನ್) – ಈಗ ವಿದ್ಯುತ್ ಉತ್ಪಾದಿಸಲು ಹಸುವಿನ ಸಗಣಿ ಬಳಸಲಾಗುತ್ತಿದೆ. ಬ್ರಿಟನ್‍ನ ರೈತರು ಹಸುವಿನ ಸಗಣಿಯಿಂದ ವಿದ್ಯುತ್ ಉತ್ಪಾದಿಸುವ ಪರ್ಯಾಯವನ್ನು ಕಂಡುಕೊಂಡಿದ್ದಾರೆ. ಬ್ರಿಟಿಷ್ ರೈತರು ಹಸುವಿನ ಸಗಣಿಯಿಂದ ಒಂದು ಪುಡಿಯನ್ನು ಸಿದ್ಧಪಡಿಸಿದ್ದಾರೆ. ಆ ಪೌಡರ್‍ಅನ್ನು ಬಳಸಿ `ಬ್ಯಾಟರಿ’ ತಯಾರಿಸಲಾಗುತ್ತಿದೆ ಎಂದು ರೈತರ ಗುಂಪೊಂದು ತಿಳಿಸಿದೆ. ಬ್ರಿಟಿಷ್ ರೈತರು ನಡೆಸಿದ ಪ್ರಯೋಗದಲ್ಲಿ, 1 ಕೆಜಿ ಹಸುವಿನ ಸೆಗಣಿಯಿಂದ 5 ಗಂಟೆಗಳ ಕಾಲ `ವ್ಯಾಕ್ಯೂಮ್ ಕ್ಲೀನರ್’ಅನ್ನು ನಡೆಸುವಷ್ಟು ವಿದ್ಯುತ್ ಅನ್ನು ಉತ್ಪಾದಿಸಬಹುದು.
How a group of British farmers are turning cow poo into power https://t.co/vXHled8O81
— The Independent (@Independent) November 19, 2021
1. ಬ್ರಿಟನ್‍ನ ‘ಅರ್ಲಾ ಡೈರಿ ಕೋ-ಆಪರೇಟಿವ್’ ಇದು ಸೆಗಣಿಯ ಪುಡಿಯಿಂದ ಬ್ಯಾಟರಿಗಳನ್ನು ತಯಾರಿಸಿದೆ. ಇದನ್ನು `ಕೌ ಬ್ಯಾಟರಿ’ ಎಂದು ಕರೆಯಲಾಗುತ್ತದೆ. ಈ ಬ್ಯಾಟರಿಯ ಸಹಾಯದಿಂದ ಮೂರೂವರೆ ಗಂಟೆಗಳವರೆಗೆ ಬಟ್ಟೆಗಳನ್ನು ಇಸ್ತ್ರಿ ಮಾಡಲು ಸಹ ಸಾಧ್ಯವಿದೆ.
2. `ಒಂದು ಹಸುವಿನ ಸೆಗಣಿಯಿಂದ ವರ್ಷವಿಡೀ 3 ಮನೆಗಳಿಗೆ ವಿದ್ಯುತ್ ನೀಡಬಹುದು’, ಎಂದು ಬ್ಯಾಟರಿ ತಜ್ಞ ‘ಜಿ.ಪಿ. ಬ್ಯಾಟರಿಜ’ ಹೇಳಿದ್ದಾರೆ. 1 ಕೆಜಿ ಸೆಗಣಿಯಿಂದ 3.75 ಕಿಲೊ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಇಂತಹ ಪರಿಸ್ಥಿತಿಯಲ್ಲಿ 4 ಲಕ್ಷ 60 ಸಾವಿರ ಹಸುಗಳ ಸೆಗಣಿಯಿಂದ ವಿದ್ಯುತ್ ಉತ್ಪಾದಿಸಿದರೆ 12 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಸಬಹುದು. ‘ಅರ್ಲಾ ಡೈರಿ’ ವರ್ಷಕ್ಕೆ 10 ಲಕ್ಷ ಟನ್ ಸೆಗಣಿ ಉತ್ಪಾದಿಸುತ್ತಿದೆ.