ಇಸ್ಲಾಂನಲ್ಲಿ 786 ಸಂಖ್ಯೆ ಪವಿತ್ರವೆಂದು ತಿಳಿಯಲಾಗಿದೆ. ಮುಸಲ್ಮಾನರು ಅಲ್ಲಾನ ಹೆಸರಿನಲ್ಲಿ ಜಾಗದಲ್ಲಿ `786′ ಈ ಸಂಖ್ಯೆ ಬರೆಯುತ್ತಾರೆ.
ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕ ಪ್ರಚೋದಿಸಲು ಮತಾಂಧರಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಈ ವಿಷಯವಾಗಿ ಜಾತ್ಯಾತೀತರು ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು
ಬಾಗಪತ (ಉತ್ತರಪ್ರದೇಶ) – ಇಲ್ಲಿಯ ಅಂಗದಪೂರ – ಜಹೌರಿ ಗ್ರಾಮದಲ್ಲಿ ಹಸುವಿನ ಮೇಲೆ ‘786′ ಈ ಸಂಖ್ಯೆ ಬರೆದಿರುವುದು ಬೆಳಕಿಗೆ ಬಂದ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೆಲವು ಮತಾಂಧರು 2- 3 ಬೀದಿ ಹಸುಗಳನ್ನು ಹಿಡಿದು ಅದರ ಮೇಲೆ ಮೆಹಂದಿಯಿಂದ ‘786′ ಸಂಖ್ಯೆ ಬರೆದು ಬಿಟ್ಟರು ಎಂದು ಸ್ಥಳಿಯ ನಾಗರಿಕರು ಆರೋಪಿಸಿದ್ದಾರೆ.
Uttar Pradesh: Hindus protest after stray cows spotted with 786 stamped on them (@vijaydeojha reports) https://t.co/dNxDNsSmVP
— OpIndia.com (@OpIndia_com) October 10, 2021
ಈ ಘಟನೆಯಿಂದ ಹಿಂದೂಗಳಲ್ಲಿ ಆಕ್ರೋಶ ನಿರ್ಮಾಣವಾಯಿತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಲು ಉದ್ದೇಶಪೂರ್ವಕ ಮಾಡಿರುವ ಕೃತ್ಯವಿದು ಎಂದು ಹಿಂದೂಗಳು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು, ಹಸುವಿನ ಶರೀರದ ಮೇಲೆ ಬರೆದಿರುವ ಸಂಖ್ಯೆಯನ್ನು ಈಗ ಅಳಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೂ ಯಾರ ಮೇಲೆ ಅಪರಾಧ ದಾಖಲು ಮಾಡಿಲ್ಲ; ಆದರೆ ಸಂಬಂಧಪಟ್ಟವರ ಶೋಧಕಾರ್ಯ ನಡೆಯುತ್ತಿದೆ ಎಂದು ಹೇಳಿದರು.