ಧರ್ಮಸಂಸ್ಥಾಪನೆಗಾಗಿ ಸರ್ವಸ್ವದ ತ್ಯಾಗ ಮಾಡಿ !

ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮ ರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮ ರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ.

‘ಆಪತ್ಕಾಲದಲ್ಲಿ ಮಾರ್ಗ ತೋರಲು ಈಶ್ವರ ಸ್ವರೂಪ ಮೂವರು ಗುರುಗಳು ಲಭಿಸಿರುವುದು, ಸನಾತನದ ಸಾಧಕರ ಪರಮಭಾಗ್ಯ

ಸಾಧಕರು ಮೂವರೂ ಗುರುಗಳು ಏನು ಹೇಳುತ್ತಾರೆಯೋ, ಅದನ್ನು ಪಾಲಿಸುವುದು, ಎಲ್ಲ ಕಾರ್ಯಪದ್ಧತಿಯ, ಜವಾಬ್ದಾರ ಸಾಧಕರಿಂದ ಮತ್ತು ‘ಸನಾತನ ಪ್ರಭಾತದಲ್ಲಿ ಬರುವ ಸೂಚನೆಗಳನ್ನು ಪಾಲಿಸಿದರೆ, ಮೂವರೂ ಗುರುಗಳು ಸಾಧಕರನ್ನು ಆಪತ್ಕಾಲದಿಂದ ಸುಖರೂಪವಾಗಿ ಪಾರು ಮಾಡುತ್ತಾರೆ.

ಸಾಧಕರೇ, ಪ್ರತಿಕ್ಷಣವನ್ನು ಸಾಧನೆಗಾಗಿಯೇ ಉಪಯೋಗಿಸಿ ಸಾಧನೆಯ ಫಲಶೃತಿಯನ್ನು ಹೆಚ್ಚಿಸಿ ಮತ್ತು ಆಧ್ಯಾತ್ಮಿಕ ಉನ್ನತಿಯ ಧ್ಯೇಯವನ್ನು ಶೀಘ್ರದಲ್ಲಿ ಸಾಧ್ಯಮಾಡಿಕೊಳ್ಳಿರಿ !

‘ಪರಾತ್ಪರ ಗುರು ಡಾ. ಆಠವಲೆ ಯವರ ಕೃಪೆಯಿಂದ ಎಲ್ಲ ಸಾಧಕರಿಗೆ ಸದ್ಯದ ಭೀಕರ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡಿ ಜೀವನ್ಮುಕ್ತ ವಾಗುವ ಅಮೂಲ್ಯ ಅವಕಾಶವು ಲಭಿಸಿದೆ. ಆಧ್ಯಾತ್ಮಿಕ ಉನ್ನತಿಯ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುವ ಧ್ಯೇಯವನ್ನು ಗಮನದಲ್ಲಿಟ್ಟು ‘ತಮ್ಮ ಪ್ರತಿಯೊಂದು ಕ್ಷಣವನ್ನು ವ್ಯಷ್ಟಿ-ಸಮಷ್ಟಿ ಸಾಧನೆಗಾಗಿ ಕೊಡುತ್ತಿದ್ದೇವಲ್ಲ,

ಈಶ್ವರನು ಮಾನವನ ಅಹಂಕಾರಕ್ಕೆ ಪೆಟ್ಟು ಕೊಟ್ಟ ಅನುಭವವನ್ನು ನೀಡುವ ಕೊರೊನದ ಎರಡೆನೆಯ ಅಲೆ !

ಈಶ್ವರನು ಮನುಷ್ಯನಲ್ಲಿನ ಅಹಂಕಾರವನ್ನು ನಾಶ ಮಾಡಲು ನಿಸರ್ಗದ ಬೆತ್ತವನ್ನು ಹೇಗೆ ಉಪಯೋಗಿಸುತ್ತಾನೆ ಎಂದು ಗಮನದಲ್ಲಿಟ್ಟು ಮತ್ತು ಮುಂದೆ ಬರುವ ದೊಡ್ಡ ಆಪತ್ಕಾಲದ ಜಾಡನ್ನು ಗುರುತಿಸಿ ಮನುಷ್ಯನು ಇನ್ನಾದರೂ ಜಾಣನಾಗಿ ಸ್ವರಕ್ಷಣೆಗಾಗಿ ಧರ್ಮಾಚರಣೆ ಮಾಡಬೇಕು ಮತ್ತು ಸಾಧನೆಯನ್ನು ಮಾಡಬೇಕು.

ಸಪ್ತರ್ಷಿಗಳ ಆಜ್ಞೆಯಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತಗಳಿಂದ ಮಾಡಲಾದ ಧರ್ಮಧ್ವಜದ ಸ್ಥಾಪನೆಯ ವಿಧಿಯ ಛಾಯಾಚಿತ್ರಮಯ ಗಮನಾರ್ಹ ಅಂಶಗಳು !

ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಈ ಧ್ವಜದ ಮೇಲೆ ಒಂದು ಬದಿಗೆ ಪ್ರಭು ಶ್ರೀರಾಮನ ಚಿತ್ರ ಮತ್ತು ಇನ್ನೊಂದು ಬದಿಗೆ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮನ ರೂಪದಲ್ಲಿನ ಚಿತ್ರವನ್ನು ಹಾಕಲು ಆಜ್ಞೆಯನ್ನು ಮಾಡಿದ್ದರು. ಅದಕ್ಕನುಸಾರ ಈ ಬಟ್ಟೆಯ ಧ್ವಜವನ್ನು ತಯಾರಿಸಲಾಯಿತು.

ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಶಕ್ತಿ ಸಿಗಲು ‘ಶ್ರೀ ದುರ್ಗಾದೇವಿ, ಶ್ರೀ ದತ್ತ ಮತ್ತು ಶಿವ’ ಈ ದೇವತೆಗಳ ಒಟ್ಟಿಗಿನ ನಾಮಜಪವನ್ನು ಧ್ವನಿವರ್ಧಕದಲ್ಲಿ ಎಲ್ಲೆಡೆ ಹಾಕಲು ಆಯೋಜನೆ ಮಾಡಿ !

‘ನಾಮಜಪವು ಕೇವಲ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರದೇ ಅದು ವಿವಿಧ ರೋಗಗಳ ನಿರ್ಮೂಲನೆಗಾಗಿಯೂ ಲಾಭದಾಯಕವಾಗಿರುತ್ತದೆ, ಎಂಬುದು ಸಾಬೀತಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಸಮಾಜದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಪ್ರಯತ್ನಗಳು ಆಗುತ್ತಿವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರಿ ಕಾರ್ಯದೊಂದಿಗೆ ಸಂಬಂಧಿಸಿದ ಹೆಸರಿನ ಸಾಕ್ಷಿಯನ್ನು ನೀಡುವ ರಾಜಸ್ಥಾನದ ‘ಶ್ರೀಸತ್ ಚಿತ್ ದೇವಿ’ ದೇವಸ್ಥಾನ !

ರಾಜಸ್ಥಾನದ ಜೋಧಪುರದಲ್ಲಿ ಓಶಿಯಾ ಹೆಸರಿನ ಊರು ಇದೆ. ಇಲ್ಲಿ ಸತ್ಚಿಯಾದೇವಿಯ ದೇವಸ್ಥಾನವಿದೆ. ಈ ದೇವಿ ಎಂದರೆ ‘ಸತ್ಚಿತ್ ದೇವಿಯಾಗಿದ್ದಾಳೆ. ಸಾಧ್ಯವಾದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ದೇವಸ್ಥಾನದ ದರ್ಶನವನ್ನು ಪಡೆಯಬೇಕು. ಈ ದೇವಸ್ಥಾನಕ್ಕೆ ಹೋಗುವುದು ಬಹಳ ಮಹತ್ವದ್ದಾಗಿದೆ.

ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಸೂರ್ಯದೆಶೆಯಲ್ಲಿ ಸನಾತನದ ಮೂವರೂ ಗುರುಗಳ ಜನ್ಮವು ಆಗಿದೆ ಯುಗಾನು ಯುಗಗಳವರೆಗೆ ಸೂರ್ಯನ ಅಸ್ತಿತ್ವವಿದೆ. ಅವನು ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ನೋಡುತ್ತಾನೆ. ಮೂವರೂ ಗುರುಗಳು ಸೂರ್ಯನಂತೆ ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ಅರಿತಿದ್ದಾರೆ.

ಸಾಧಕರು ನಾಮಜಪಾದಿ ಉಪಾಯಗಳಿಗೆ ಕುಳಿತುಕೊಳ್ಳುವಾಗ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು

ಆಶ್ರಮ ಅಥವಾ ಸೇವಾಕೇಂದ್ರಗಳಲ್ಲಿ ಉನ್ನತರು ನಾಮಜಪಕ್ಕೆ ಕುಳಿತುಕೊಳ್ಳುವಾಗ ಕುಳಿತುಕೊಳ್ಳುವ ರಚನೆ ಪೂರ್ವ-ಪಶ್ಚಿಮವಾಗಿರಬೇಕು. ಇದರಲ್ಲಿ ಉನ್ನತರು ನಾಮಜಪಕ್ಕೆ ಕುಳಿತುಕೊಳ್ಳುವಾಗ ಆದಷ್ಟು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಇಂತಹ ಸಮಯದಲ್ಲಿ ಅವರ ಎದುರಿಗೆ ಉಪಾಯಕ್ಕಾಗಿ ನಾಮಜಪಕ್ಕೆ ಕುಳಿತುಕೊಳ್ಳುವ ಸಾಧಕರು ಉನ್ನತರ ಕಡೆಗೆ ಮುಖ ಮಾಡಿ (ಪೂರ್ವ ದಿಕ್ಕಿಗೆ ಮುಖ) ಕುಳಿತುಕೊಳ್ಳಬೇಕು.

ಪರಬ್ರಹ್ಮಸ್ವರೂಪರಾದ ಶ್ರೀಮನ್ನಾರಾಯಣನೇ ‘ಶ್ರೀ ಜಯಂತ  ರೂಪದಲ್ಲಿ ಸನಾತನದ ಸಾಧಕರಿಗೆ ಗುರುರೂಪದಲ್ಲಿ ದೊರಕಿದ್ದಾರೆ !

‘ಪ.ಪೂ. ಡಾಕ್ಟರರು ಸ್ವತಃ ಮಹಾವಿಷ್ಣುವಾಗಿದ್ದಾರೆ. ಅವರ ದೇಹವಲ್ಲ, ಅವರಲ್ಲಿನ ಸೂಕ್ಷ್ಮ ಆತ್ಮವೆಂದರೆ ಮಹಾವಿಷ್ಣು. ಪಂಚಮಹಾಭೂತಗಳಿಂದ ನಿರ್ಮಾಣವಾದ ದೇಹದಲ್ಲಿ ಮಹಾವಿಷ್ಣು ರೂಪಿ ತತ್ತ್ವವಿರುವುದರಿಂದ ಅವರಿಗೆ ತೊಂದರೆ ಖಂಡಿತವಾಗಿಯೂ ಆಗುತ್ತದೆ. ದೀಪದಲ್ಲಿ ಸ್ವಯಂಪ್ರಕಾಶಿ ಜ್ಯೋತಿಯೆಂದರೆ ಮಹಾವಿಷ್ಣು, ಅಂದರೆ ಪ.ಪೂ. ಡಾಕ್ಟರರಾಗಿದ್ದಾರೆ.