ಪರಾತ್ಪರ ಗುರು ಡಾ. ಆಠವಲೆಯವರ ‘ತೇಜಸ್ವೀ ವಿಚಾರ’ವನ್ನು ‘ಸನಾತನ ಪ್ರಭಾತ’ದಲ್ಲಿ ಓದಿ ನನಗೆ ‘ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸಬೇಕು’ ಎಂಬುವುದರ ಮಾರ್ಗದರ್ಶನ ಸಿಗುತ್ತದೆ ! – ಸೌ. ಸರಸ್ವತಿ ಶಂಖವಾಳಕರ, (ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ ಪರ್ರೀಕರ ಇವರ ಸಹೋದರಿ)

‘ಸನಾತನ ಪ್ರಭಾತ’ದ ವರ್ಧ್ಯಂತ್ಯುತ್ಸವ ನಿಮಿತ್ತ ಬಂದಿದ್ದ ಗಣ್ಯರು ‘ಸನಾತನ ಪ್ರಭಾತ’ ಮತ್ತು ‘ಸನಾತನ ಆಶ್ರಮ’ದ ಕುರಿತು ವ್ಯಕ್ತಪಡಿಸಿದ ವಿಚಾರ !

‘ದೈನಿಕ ‘ಸನಾತನ ಪ್ರಭಾತ’ ಇದು ನನಗೆ ಎಲ್ಲಕ್ಕಿಂತ ನೆಚ್ಚಿನ ದೈನಿಕವಾಗಿದೆ ಮತ್ತು ನಾನು ಪ್ರತಿದಿನ ಅದನ್ನು ಓದುತ್ತೇನೆ. ದೈನಿಕದ ಮೊದಲನೇ ಪುಟದಲ್ಲಿನ ಗುರುವರ್ಯರ (ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ) ‘ತೇಜಸ್ವೀ ವಿಚಾರ’ ಈ ಮಾಲಿಕೆಯನ್ನು ನಾನು ಮೊದಲು ಓದುತ್ತೇನೆ. ಇದರಿಂದ ನನಗೆ ‘ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸಬೇಕು’, ಎಂಬುವುದರ ಮಾರ್ಗದರ್ಶನ ಸಿಗುತ್ತದೆ. ಈ ಮೊದಲು ನನಗೆ ತುಂಬಾ ಕೋಪ ಬರುತ್ತಿತ್ತು. ಅದು ಈಗ ಕಡಿಮೆ ಆಗಿದೆ. ಈಗ ನಾನು ಯಾರ ಮೇಲೆಯೂ ಕೋಪ ಮಾಡಿಕೊಂಡರೆ ನಾನು ಅವರಲ್ಲಿ ಕ್ಷಮೆ ಕೇಳುತ್ತೇನೆ. ಈಗ ನನಗೆ ಅದು ಅಭ್ಯಾಸವಾಗಿಬಿಟ್ಟಿದೆ. ದೈನಿಕ ‘ಸನಾತನ ಪ್ರಭಾತ’ವನ್ನು ಓದುವುದರಿಂದ ನನಗೆ ಸಾಧನೆ ಮಾಡಲು ಸ್ಪೂರ್ತಿ ಸಿಗುತ್ತದೆ.

ಸೌ. ಸರಸ್ವತಿ ಶಂಖವಾಳಕರ

ನಾನು ‘ಶ್ರೀ ಗುರುದೇವ ದತ್ತ |’ ಈ ಜಪವನ್ನು ಪ್ರತಿದಿನ ೧ ಗಂಟೆ ಮಾಡಲು ಪ್ರಯತ್ನಿಸುತ್ತೇನೆ. ಇದರಿಂದ ನನಗೆ ತುಂಬಾ ಒಳ್ಳೆದೆನಿಸುತ್ತದೆ. ಆಶ್ರಮಕ್ಕೆ ಬಂದು ನನಗೆ ಎಲ್ಲಾ ಕಡೆಗಳಲ್ಲಿ ಸಕಾರಾತ್ಮಕ ಸ್ಪಂದನದ ಅರಿವಾಯಿತು. ಈ ರೀತಿಯ ಸ್ಪಂದನ ಬೇರೆ ಎಲ್ಲಿಯೂ ಸಿಗುವುದಿಲ್ಲ. ತುಂಬಾ ಆನಂದವಾಯಿತು. ಸಂಸಾರವೆಲ್ಲ ಮರೆತುಹೋಯಿತು.’

ಸೌ. ಶಂಖವಾಳಕರ ಇವರಿಗೆ ಅರಿವಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸೇವೆ ಸಲ್ಲಿಸುವ ಕೋಣೆಯಲ್ಲಿನ ಚೈತನ್ಯ !

ಸೌ. ಸರಸ್ವತಿ ಶಂಖವಾಲಕರ ಇವರು ಆಶ್ರಮ ದರ್ಶನಕ್ಕೆ ಬಂದವರಿಗೆ ಕುಳಿತುಕೊಳ್ಳಲು ನಿಯೋಜಿತ ಕೋಣೆಗೆ ಹೋಗುವಾಗ ಮೊದಲು ಕೋಣೆಗೆ ನಮಸ್ಕಾರ ಮಾಡಿದರು. ಆ ಸಮಯದಲ್ಲಿ ಸಾಧಕರು ಅವರಿಗೆ, ‘ನಿಮಗೆ ಇಲ್ಲಿ ಏನು ಅರಿವಾಯಿತು ಎಂದು ಕೇಳಿದರು, ಅವರು, “ಈ ಕೋಣೆಯಲ್ಲಿ ನನಗೆ ತುಂಬಾ ಬೇರೆನೇ ಅರಿವಾಯಿತು. ಇಲ್ಲಿಂದ ಹೋಗಲೇಬಾರದು, ಎಂದು ಅನಿಸಿತು.” ಎಂದು ಹೇಳಿದರು. ಆ ಕೋಣೆ ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸೇವೆ ಸಲ್ಲಿಸುವ ಕೋಣೆಯಾಗಿದೆ. ಅವರ ಚೈತನ್ಯದಿಂದ ಆ ಕೋಣೆಯಲ್ಲಿಯೂ ತುಂಬಾ ಚೈತನ್ಯ ನಿರ್ಮಾಣವಾಗಿದೆ. ಸೌ. ಶಂಖವಾಳಕರ ಇವರಿಗೆ ಈ ಬಗ್ಗೆ ಏನೂ ಗೊತ್ತಿರಲಿಲ್ಲದಿದ್ದರೂ ಅವರಿಗೆ ಆ ಕೋಣೆಯ ಬಗ್ಗೆ ಅನುಭೂತಿ ಬಂದಿತು, ಇದು ವಿಶೇಷವಾಗಿದೆ. – ಸೌ. ಸರಸ್ವತಿ ಶಂಖವಾಳಕರ, ಪಣಜಿ (ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ ಪರ್ರೀಕರ ಇವರ ಸಹೋದರಿ)