ರಾಷ್ಟ್ರಗುರು ಸಮರ್ಥ ರಾಮದಾಸಸ್ವಾಮಿ ಮತ್ತು ಅವರು ಬರೆದ ಅದ್ವಿತೀಯ ಗ್ರಂಥರಾಜ ದಾಸಬೋಧದ ಮಹಾತ್ಮೆ !

೧೦ ಏಪ್ರಿಲ್ ೨೦೨೨ ಚೈತ್ರ ಶುಕ್ಲ ಪಕ್ಷ ನವಮಿಗೆ ಸಮರ್ಥ ರಾಮದಾಸ ಸ್ವಾಮಿ ಜಯಂತಿ ಇದೆ ಈ ನಿಮಿತ್ತ

೧೦.೨.೨೦೨೨ ರಂದು ದಾಸಬೋಧ ಜಯಂತಿಯ ಸಂದರ್ಭ ದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ರಾಷ್ಟ್ರಗುರು ಸಮರ್ಥ ರಾಮದಾಸಸ್ವಾಮಿ ಅವರು ಬರೆದ ‘ದಾಸಬೋಧ ಮಾಹಾತ್ಮೆ’ ವಿಷಯವನ್ನು ಭಕ್ತಿಸತ್ಸಂಗದಲ್ಲಿ ತೆಗೆದುಕೊಂಡರು. ೧೦ ಏಪ್ರಿಲ್ ೨೦೨೨ ಚೈತ್ರ ಶುಕ್ಲ ಪಕ್ಷ ನವಮಿ ಅಂದರೆ ಸಮರ್ಥ ರಾಮದಾಸ ಜಯಂತಿ ಸಂದರ್ಭದಲ್ಲಿ, ನಾವು ಸಮರ್ಥ ರಾಮದಾಸಸ್ವಾಮಿಗಳ ಪವಿತ್ರ ಚರಣಗಳನ್ನು ಸ್ಮರಿಸಿ ಲೇಖನ ರೂಪದಲ್ಲಿ ಆ ಅಂಶಗಳ ಅವಲೋಕನ ಮಾಡೋಣ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಸಮರ್ಥರ ಜೀವನಚರಿತ್ರೆ

೧ ಅ. ಆ ಕಾಲದ ಸಾಮಾಜಿಕ ಸ್ಥಿತಿ

‘ಆ ಸಮಯದಲ್ಲಿ, ಬಹಾಮನಿ (ಈಗಿನ ಕರ್ನಾಟಕ) ರಾಜ್ಯದಲ್ಲಿ ರೂಪುಗೊಂಡ ಐದೂ ಬಾದಶಾಹರು ತಮ್ಮ ತಮ್ಮ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಅತೀವ ದೌರ್ಜನ್ಯವೆಸಗುತ್ತಿದ್ದರು. ಮೊಘಲರು ಉತ್ತರದಲ್ಲಿ ಮತ್ತು ಪೋರ್ಚುಗೀಸರು ದಕ್ಷಿಣದಲ್ಲಿ ಕೋಲಾಹಲ ವೆಬ್ಬಿಸುತ್ತಿದ್ದರು. ಸಮಾಜ ಆಕ್ರಮಣಕಾರರಿಗೆ ಬಲಿಯಾಗುತ್ತಿತ್ತು. ಈ ಭಯಾನಕ ಪರಿಸ್ಥಿತಿಯು ಯಾವಾಗ ಬದಲಾಗುತ್ತದೆ ಎಂದು ಅವರಿಗೆ ತಿಳಿಯುತ್ತಿರಲಿಲ್ಲ.

೧ ಆ. ಧಾರ್ಮಿಕ ವೃತ್ತಿಯ ತಂದೆ-ತಾಯಿಯರಿಗೆ ಜನಿಸಿದರು

ಇಂತಹ ಪರಿಸ್ಥಿತಿಯಲ್ಲಿ ಮರಾಠವಾಡದ(ಮಹಾರಾಷ್ಟ್ರ) ಜಾಂಬ್ ಗ್ರಾಮದ ನಿವಾಸಿಗಳಾದ ಸೂರ್ಯಾಜಿಪಂತ್ ಠೋಸರ್ ಇವರು ಪರಂಪರೆಯಿಂದ ಕುಲಕರ್ಣಿ ಹುದ್ದೆ ಪಡೆದಿದ್ದರು. ಅವರ ಮನೆತನದಲ್ಲಿ ಶ್ರೀರಾಮ ಮತ್ತು ಸೂರ್ಯನಾರಾಯಣನ ಆರಾಧನೆಯು ಹಲವಾರು ತಲೆಮಾರುಗಳವರೆಗೆ ಅಡೆತಡೆಯಿಲ್ಲದೆ ಮುಂದುವರೆದಿತ್ತು. ಈ ಎಲ್ಲಾ ಸಂಸ್ಕಾರಗಳನ್ನು ಹೊಂದಿರುವ ಸಮರ್ಥ ರಾಮದಾಸಸ್ವಾಮಿಯವರು ೧೬೦೮ ರ ಚೈತ್ರ ಶುಕ್ಲ ಪಕ್ಷ ನವಮಿಯ ದಿನ ಅಂದರೆ ಶ್ರೀರಾಮ ನವಮಿಯ ದಿನದಂದು ಮಧ್ಯಾಹ್ನ ಸೂರ್ಯಾಜಿಪಂತ್ ಮತ್ತು ಅವರ ಪತ್ನಿ ರಾಣುಬಾಯಿ ಅವರ ಉದರದಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು ನಾರಾಯಣ ಎಂದಾಗಿತ್ತು. ನಾರಾಯಣನು ರೂಪದಲ್ಲಿ ಸುಂದರ, ದೈಹಿಕವಾಗಿ ಸುದೃಢ, ಚಾಣಾಕ್ಷ ಮತ್ತು ತೀಕ್ಷ್ಣ ಬುದ್ಧಿ ಹೊಂದಿದ್ದನು. ನಾರಾಯಣನು ಬಾಲ್ಯದಲ್ಲಿ ತನ್ನ ಸುತ್ತಲಿನ ಶೋಷಿತ ಸಮುದಾಯದ ಸ್ಥಿತಿಯನ್ನು ಗಮನಿಸಿದ್ದನು. ಅದರಿಂದ ಅವನು ತುಂಬಾ ಸಂಕಟಪಡುತ್ತಿದ್ದನು.

೧ ಇ. ಚಿಕ್ಕವಯಸ್ಸಿನಲ್ಲಿಯೇ ಬ್ರಹ್ಮಾಂಡದ ಬಗ್ಗೆ ಚಿಂತಿಸುವ ನಾರಾಯಣ !

ನಾರಾಯಣನ ಇನ್ನೊಂದು ವೈಶಿಷ್ಟ್ಯವೆಂದರೆ ದೂರದೃಷ್ಟಿ ! ಬಾಲ್ಯದಲ್ಲಿ ನಾರಾಯಣನು ಚಿಂತಾಕ್ರಾಂತನಾದುದನ್ನು ಕಂಡು ಅವನ ತಾಯಿಗೆ ‘ತಂದೆಯ ನಿಧನದಿಂದ ಸಂಸಾರವನ್ನು ನೋಡಿಕೊಳ್ಳುವ ಚಿಂತೆ ನಾರಾಯಣನಿಗಿದೆ’ ಎಂದೆನಿಸುತ್ತಿತ್ತು. ತಾಯಿಯು ನಾರಾಯಣನಿಗೆ. ‘ಮಗು ಏನು ಚಿಂತೆ ಮಾಡುತ್ತಿರುವೆ ?’, ಎಂದು ಕೇಳಿದಳು. ಅದಕ್ಕೆ ನಾರಾಯಣನು, “ತಾಯಿ ವಿಶ್ವದ ಬಗ್ಗೆ ಚಿಂತೆ ಮಾಡುತ್ತಿದ್ದೇನೆ !” ಎಂದನು. ಅಷ್ಟು ಚಿಕ್ಕ ವಯಸ್ಸಿನಲ್ಲೇ ನಾರಾಯಣನು ‘ಭಗವಂತನ ಕೃಪೆ ಸಿಕ್ಕರೆ ಮಾತ್ರ ನಮ್ಮ ಸುತ್ತಲಿನ ಆಪ್ತ ಬಂಧುಗಳು, ಈ ಸಮಾಜವನ್ನು ಉದ್ಧಾರ ಮಾಡಲು ಸಾಧ್ಯವಿದೆ’ ಎಂದು ತಿಳಿದುಕೊಂಡಿದ್ದನು.

೧ ಈ. ಸಾಧನೆಯನ್ನು ಮಾಡಿ ರಾಮನ ದಾಸನಾದ ರಾಮದಾಸಸ್ವಾಮಿ !

ಲೌಕಿಕ ಬಂಧನದಲ್ಲಿ ಸಿಲುಕಿಕೊಳ್ಳುವುದು ಬೇಡವೆಂದು ನಾರಾಯಣನು ನಿಶ್ಚಯಿಸಿದ್ದನು. ಕೇವಲ ಹನ್ನೆರಡನೆಯ ವಯಸ್ಸಿನಲ್ಲಿ, ನಾರಾಯಣನು ಮದುವೆಯ ಮಂಟಪದಿಂದ ತಪ್ಪಿಸಿಕೊಂಡು ಶ್ರೀರಾಮನ ದರ್ಶನಕ್ಕಾಗಿ ನಾಶಿಕಕ್ಕೆ ತಲುಪಿದನು. ರಾಮನ ದರ್ಶನದಿಂದ ನಾರಾಯಣನು ಶಾಂತನಾದನು. ನಂತರ ಅವನು ಮುಂದಿನ ಸಾಧನೆಗಾಗಿ ಗೋದಾವರಿ ನದಿಯ ತೀರದಲ್ಲಿರುವ ಟಾಕಳಿ ಗ್ರಾಮದ ಶಾಂತ ಪ್ರದೇಶವನ್ನು ಆಯ್ಕೆ ಮಾಡಿದನು. ಶ್ರೀರಾಮನ ಸೇವೆಗೆ ತನ್ನನ್ನು ತಾನು ಸಂಪೂರ್ಣವಾಗಿ ಸಿದ್ಧಪಡಿಸಿಕೊಂಡ ನಾರಾಯಣನು ಶ್ರೀ ಹನುಮಂತನಂತೆ ‘ರಾಮದಾಸ’ನಾದನು.

೨. ‘ಸಮರ್ಥ’ ಎಂಬುದು ರಘುವೀರ ಶ್ರೀರಾಮನ ವೈಶಿಷ್ಟ್ಯವನ್ನು ವಿವರಿಸಲು ಬಳಸಿದ ವಿಶೇಷಣದಿಂದ ಜನರು ರಾಮದಾಸನಿಗೆ ಉಲ್ಲೇಖಿಸುವುದು

ವಾಸ್ತವದಲ್ಲಿ, ಸಮರ್ಥರು ಭಗವಾನ ಶ್ರೀ ರಾಮಚಂದ್ರನನ್ನು ‘ಸಮರ್ಥ’ ಎಂದು ಕರೆದಿದ್ದಾರೆ. ತನ್ನ ಸ್ವಂತ ಶಕ್ತಿಯಿಂದ ಎಲ್ಲವನ್ನೂ ಮಾಡಬಲ್ಲವನು ಸಮರ್ಥ ! ರಾಮದಾಸ ಸ್ವಾಮಿಯವರು ಯಾವಾಗಲೂ ‘ಜಯ ಜಯ ರಘುವೀರ ಸಮರ್ಥ !’ ಎಂದು ಪ್ರಭು ಶ್ರೀರಾಮನ ಸ್ತುತಿ ಮಾಡುತ್ತಿದ್ದರು. ‘ಸರ್ವಶಕ್ತನಾದ ರಘುವೀರ ಶ್ರೀರಾಮನಿಗೆ ಜಯವಾಗಲಿ !’ ಎಂಬುದು ಇದರ ಅರ್ಥ. ಈ ವಿಶ್ವದಲ್ಲಿ ಭಗವಂತನನ್ನು ಬಿಟ್ಟು ಬೇರೆ ಯಾರೂ ಸಮರ್ಥರಿಲ್ಲ. ಆದುದರಿಂದ ರಘುವೀರ ಶ್ರೀರಾಮನ ಲಕ್ಷಣವನ್ನು ವಿವರಿಸಲು ರಾಮದಾಸಸ್ವಾಮಿಯವರು ಬಳಸಿದ ವಿಶೇಷಣವೇ ‘ಸಮರ್ಥ’. ರಾಮದಾಸಸ್ವಾಮಿಯವರ ನಾಲಗೆಯಲ್ಲಿ ಯಾವಾಗಲೂ ರಘುವೀರರ ಹೊಗಳಿಕೆಯನ್ನು ಕೇಳುತ್ತಿದ್ದ ಜನರು ಶ್ರೀರಾಮನ ಈ ವಿಶೇಷಣದಿಂದ ರಾಮದಾಸಸ್ವಾಮಿಯವರಿಗೆ ಉಲ್ಲೇಖಿಸಿದರು ಮತ್ತು ನಂತರ ಎಲ್ಲೆಡೆಗೂ ರೂಢಿಯಾಯಿತು.

೩. ಸಮರ್ಥರ ಅದ್ವಿತೀಯವಾದ ಗ್ರಂಥರಾಜ ದಾಸಬೋಧದ ಮಹಾತ್ಮೆ

೩ ಅ. ಪ್ರಭು ಶ್ರೀರಾಮನ ಇಚ್ಚೆಯಂತೆ ಸಮರ್ಥರು ಹೇಳಿರುವ ಮತ್ತು ಗುರು-ಶಿಷ್ಯ ಇವರ ಆತ್ಮ ಸಂವಾದದಿಂದ ರಚಿಸಲ್ಪಟ್ಟ ಉಪದೇಶ ಮತ್ತು ಬೋಧನೆ ಇವುಗಳ ಅಮೃತಪಾನ ಎಂದರೆ ‘ಗ್ರಂಥರಾಜ ದಾಸಬೋಧ’ವಾಗಿದೆ !

ಸಮರ್ಥರು ಅದ್ವಿತೀಯ ಧರ್ಮಾಚಾರ್ಯರಾಗಿದ್ದರು. ಅವರು ಕಾಲಕಾಲಕ್ಕೆ ವಿಪುಲವಾಗಿ ಲೇಖನ ಮಾಡಿದ್ದಾರೆ. ಅವರು ಮಾಡಿದ ವಿಪುಲವಾದ ಗ್ರಂಥರಚನೆಗಳಲ್ಲಿ ‘ದಾಸಬೋಧ’ ಇದನ್ನು ಪ್ರಮುಖ ಗ್ರಂಥವೆಂದು ಪರಿಗಣಿಸಲಾಗಿದೆ. ಶಕೆ ೧೫೮೧ ರಲ್ಲಿ  ಸಮರ್ಥರು ಬೋಧಿಸಿದ್ದನ್ನು ಅವರ ಅತ್ಯುತ್ತಮ ಶಿಷ್ಯನಾದ ಕಲ್ಯಾಣಸ್ವಾಮಿಯವರು ಬರೆದಿಟ್ಟರು. ಗುರು-ಶಿಷ್ಯರ ಆತ್ಮಾವಲೋಕನದಿಂದ ಹುಟ್ಟುವ ‘ಗ್ರಂಥರಾಜ ದಾಸ ಬೋಧ’ವು ಧರ್ಮೋಪದೇಶ ಮತ್ತು ಜ್ಞಾನೋದಯದ ಅಮೃತಪಾನವಾಗಿದೆ.

೩ ಆ. ಗ್ರಂಥದ ವಿಷಯ ‘ಭಗವದ್ಭಕ್ತಿ’ಯಾಗಿರುವುದು

ಸಮರ್ಥ ರಾಮದಾಸ ಸ್ವಾಮಿಯವರ ‘ದಾಸ್ಯಭಕ್ತಿ’ ಇದು ಸ್ಥಾಯೀ ಭಾವವಾಗಿದೆ. ಆದುದರಿಂದ, ದಾಸಬೋಧದ ಆರಂಭದಿಂದಲೂ ಸಮರ್ಥರು ಸ್ಪಷ್ಟವಾಗಿ ಈ ಗ್ರಂಥದ ವಿಷಯ ‘ಭಗವದ್ಭಕ್ತಿ’ಯೇ ಇರುತ್ತದೆ, ಎಂದು ಹೇಳಿದ್ದಾರೆ.

೩ ಇ. ‘ದಾಸಬೋಧ’ ಪದದ ಭಾವಾರ್ಥ !

ಈಗ ನಾವು ‘ದಾಸಬೋಧ’ ಪದದ ಅರ್ಥವನ್ನು ತಿಳಿದುಕೊಳ್ಳೋಣ. ‘ದಾಸಬೋಧ’ ಎಂದರೆ ಭಗವಾನ್ ರಾಮಚಂದ್ರನ ಸೇವಕನು ಅಂದರೆ ರಾಮದಾಸಸ್ವಾಮಿಯವರು ಶಿಷ್ಯರಿಗೆ ನೀಡಿದ ಬೋಧನೆ (ಉಪದೇಶ). ಪ್ರಭು ಶ್ರೀರಾಮಚಂದ್ರನ ದಾಸ್ಯಭಾವದಿಂದ ಭಕ್ತಿ ಮಾಡುವ ಭಕ್ತರಿಗೆ ಮಾಡಿದ ಉಪದೇಶವೆಂದೂ ‘ದಾಸಬೋಧ’ ಎಂಬ ಪದದ ಅರ್ಥವಿದೆ.

೩ ಈ. ಎಲ್ಲರಿಗೂ ಮಾರ್ಗದರ್ಶನ ನೀಡುವ ದೀಪಸ್ತಂಭ

ನಿಜವಾದ ಸಮೃದ್ಧ ಜೀವನವನ್ನು ಹೇಗೆ ಬದುಕಬೇಕು ? ಎಂದು ಕಲಿಸುವ ಈ ಗ್ರಂಥವು ಎಲ್ಲರಿಗೂ ಮಾರ್ಗದರ್ಶನ ನೀಡುವ ದಾರಿದೀಪವಾಗಿದೆ ಮತ್ತು ಅದರಲ್ಲಿ ಹೇಳಿರುವ ಪ್ರಕಾರ ನಡೆದುಕೊಂಡರೆ ನಿಜವಾಗಿಯೂ ಜೀವನ ಸಮೃದ್ಧವಾಗುತ್ತದೆ, ಎಂದು ಅನುಭವ ನೀಡುವಂತಹ ಗ್ರಂಥವಾಗಿದೆ.

೩ ಉ. ‘ದಾಸಬೋಧ’ ಈ ಗ್ರಂಥವು ಮನುಷ್ಯನಿಗೆ ಲೌಕಿಕ ವ್ಯವಹಾರಗಳ ಜ್ಞಾನ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ದಾಸ್ಯಭಕ್ತಿಯ ಆತ್ಮಜ್ಞಾನವನ್ನು ಸುಲಭವಾಗಿ  ವಿವರಿಸುವಂತಹ ‘ಗ್ರಂಥರಾಜ’ವಾಗಿದೆ.

೩ ಊ. ‘ಉತ್ಕಟ ಭಕ್ತಿಯಿಂದ ಪರಮಾರ್ಥವನ್ನು ಹೇಗೆ ಮಾಡುವುದು ?’, ಅದರ ಮಾರ್ಗದರ್ಶನ !

‘ಭಕ್ತಿಮಾರ್ಗವನ್ನು ಹೇಗೆ ಗುರುತಿಸುವುದು ಮತ್ತು ಅದನ್ನು ಹೃದಯದಲ್ಲಿ ಹೇಗೆ ಅಳವಡಿಸುವುದು?’, ಹಾಗೆಯೇ ‘ಉತ್ಕಟ ಭಕ್ತಿಯಿಂದ ಪರಮಾರ್ಥವನ್ನು ಹೇಗೆ ಮಾಡುವುದು ?’ ಎಂಬುದನ್ನು ಸಮರ್ಥರು ಅತ್ಯಂತ ಬೋಧಪ್ರದ ಮತ್ತು ಸುಂದರ ವಿವೇಚನೆಯ ಮಾರ್ಗದರ್ಶನವನ್ನು ಇದರಲ್ಲಿ ಮಾಡಿದ್ದಾರೆ.

೩ ಎ. ‘ಎಚ್ಚರಿಕೆಯಿಂದ ಸುಂದರವಾದ ಸಂಸಾರವನ್ನು ಹೇಗೆ ಮಾಡ ಬೇಕು ?’ ಎಂದೂ ಸಮರ್ಥರು ಹೇಳಿದ್ದಾರೆ.

೩ ಏ. ಮಹರ್ಷಿ ವೇದವ್ಯಾಸರಂತೆ ವಿವಿಧ ವಿಷಯಗಳ ಆಳವಾದ ಮತ್ತು ಪಾಂಡಿತ್ಯಪೂರ್ಣ ಉಲ್ಲೇಖ ಇರುವುದು

ಈ ಗ್ರಂಥದಲ್ಲಿ ವಿವಿಧ ವಿಷಯಗಳನ್ನು ಆಳವಾಗಿ ಮತ್ತು ವಿವರವಾಗಿ ಉಲ್ಲೇಖಿಸಲಾಗಿದೆ. ‘ಸಮರ್ಥರು ತಮ್ಮ ‘ದಾಸಬೋಧ’ ಗ್ರಂಥದ ಮೂಲಕ ವಿವಿಧ ವಿಷಯಗಳ ಕುರಿತು ಬರೆದಷ್ಟು ಮಹರ್ಷಿ ವೇದವ್ಯಾಸರನ್ನು ಬಿಟ್ಟು ಬೇರೆ ಯಾರೂ ಬರೆದಿಲ್ಲ ಎಂಬುದು ತಜ್ಞರ ಅಭಿಪ್ರಾಯವಿದೆ’.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೧.೨.೨೦೨೨)