ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೆಲವೊಮ್ಮೆ ಮೈಮೇಲೆ ನೀರಿನ ಹನಿಗಳು ಬಿದ್ದಂತೆ ಅಥವಾ ಯಾರಾದರೂ ಸ್ಪರ್ಶ ಮಾಡಿದಂತೆ ಅರಿವಾಗುತ್ತದೆ, ಅದರ ಹಿಂದಿನ ಶಾಸ್ತ್ರ !

ಪರಾತ್ಪರ ಗುರು ಡಾ. ಆಠವಲೆ

(ಪರಾತ್ಪರ ಗುರು) ಡಾ. ಆಠವಲೆ : ಕೆಲವೊಮ್ಮೆ ನನ್ನ ಮೈಮೇಲೆ ನೀರಿನ ಹನಿಗಳು ಬಿದ್ದಂತೆ  ಅಥವಾ ಯಾರಾದರೂ ಸ್ಪರ್ಶ ಮಾಡಿದಂತೆ ಅರಿವಾಗುತ್ತದೆ; ಆದರೆ ಸ್ಥೂಲದಲ್ಲಿ ಹಾಗೆ ಏನೂ ಇರುವುದಿಲ್ಲ. ಇದರ ಹಿಂದಿನ ಕಾರಣವೇನು ?

ನಾಡಿವಾಚಕ ಪೂ. ಡಾ. ಓಂ ಉಲಗನಾಥ

ಸಪ್ತರ್ಷಿಗಳು : ಪರಾತ್ಪರ ಗುರು ಡಾ. ಆಠವಲೆಯವರು ಅವತಾರವಾಗಿದ್ದಾರೆ. ಅವತಾರಗಳ ಸುತ್ತಮುತ್ತಲು ಸತತವಾಗಿ ಸೂಕ್ಷ್ಮದಿಂದ ದೇವಲೋಕದಲ್ಲಿನ ದೇವತೆಗಳಿರುತ್ತಾರೆ. ಗುರುದೇವರಿಗೆ ‘ತಮ್ಮ ಮೈಮೇಲೆ ನೀರಿನ ಹನಿಗಳು ಬೀಳುವುದು ಅರಿವಾಗುವುದು’ ಅಂದರೆ ‘ಅವರ ಮೇಲೆ ದೇವಲೋಕದಿಂದ ದೇವತೆಗಳು ಮಾಡಿದ ಸಂಪ್ರೋಕ್ಷಣೆಯಾಗಿದೆ !’

ಈ ಮೊದಲೂ ಹೀಗೆ ಆಗುತ್ತಿತ್ತು; ಆದರೆ ಈಗ ಅವರಿಗೆ ಅದರ ಪ್ರತ್ಯಕ್ಷ ಅರಿವಾಗುತ್ತಿದೆ. ಕನಸಿನಲ್ಲಿ ನಾವು ಯಾವುದಾದರೊಂದು ವಸ್ತುವನ್ನು ಸ್ಪರ್ಶಿಸುತ್ತೇವೆ; ಆದರೆ ಜಾಗೃತಾವಸ್ಥೆಗೆ ಬಂದ ನಂತರ ಪ್ರತ್ಯಕ್ಷದಲ್ಲಿ ಆ ವಸ್ತು ಇರುವುದಿಲ್ಲ. ಈ ಘಟನೆಯು ಸಹ ಅದೇ ರೀತಿಯಾದ್ದಾಗಿದೆ. ಈ ಘಟನೆಯು ಸೂಕ್ಷ್ಮದಿಂದ ಆಗಿದೆ; ಆದರೆ ಸ್ಥೂಲದಲ್ಲಿ ಹಾಗೇನು ಕಾಣಿಸುವುದಿಲ್ಲ. ಈಗ ಅವತಾರದ ಕೀರ್ತಿಯು ಇಡೀ ಜಗತ್ತಿನಲ್ಲಿ ಹರಡುವ ಕಾಲವು ಸನ್ನಿಹಿತವಾಗಿರುವುದರಿಂದ ಅವತಾರಿ ಆಗಿರುವ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅದರ ಅರಿವಾಗುತ್ತಿದೆ. ಇದೂ ಅವತಾರದ ಒಂದು ಲೀಲೆಯಾಗಿದೆ !

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೨೭.೫.೨೦೨೧, ಬೆಳಗ್ಗೆ ೮.೪೯)

ಪರಾತ್ಪರ ಗುರು ಡಾ. ಆಠವಲೆಯವರ ಮನಸ್ಸಿನಲ್ಲಿ ‘ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಇವರು ಭೇಟಿಯಾಗಲು ಬರಬೇಕು’, ಎಂಬ ವಿಚಾರ ಬರುವುದು ಮತ್ತು ಆ ದಿನವೇ ಅವರು ಭೇಟಿಯಾಗಲು ಬರುವುದು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

 

ಶ್ರೀ. ವಿನಾಯಕ ಶಾನಭಾಗ

(ಪರಾತ್ಪರ ಗುರು) ಡಾ. ಆಠವಲೆ : ಒಂದು ದಿನ ನನ್ನ ಮನಸ್ಸಿನಲ್ಲಿ ‘ಇಂದು ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಇವರು ನನ್ನನ್ನು ಭೇಟಿಯಾಗಲು ಬಂದರೆ, ಒಳ್ಳೆಯದಿತ್ತು. ನನಗೆ ಅವರಿಗೆ  ಕೆಲವು ವಿಷಯಗಳನ್ನು ಹೇಳಬೇಕಾಗಿದೆ’, ಎಂಬ ವಿಚಾರ ಬಂದಿತು. ಅವರು ನನ್ನನ್ನು ಭೇಟಿಯಾಗಲು ಆ ದಿನವೇ ಬಂದರು. ದೇವರು ಅವರ ಮನಸ್ಸಿನಲ್ಲಿ ನನ್ನನ್ನು ಭೇಟಿಯಾಗುವ ವಿಚಾರವನ್ನು ಹಾಕಿದನು. ಇದರ ಹಿಂದಿನ ಶಾಸ್ತ್ರವೇನು ?

ಸಪ್ತರ್ಷಿ : ಪರಾತ್ಪರ ಗುರು ಡಾ. ಆಠವಲೆಯವರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವು ಈಶ್ವರನ ವಿಚಾರವೇ ಆಗಿರುತ್ತದೆ. ಅವರ ಮನಸ್ಸಿನಲ್ಲಿ ‘ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಇವರು ನನ್ನನ್ನು ಭೇಟಿಯಾಗಲು ಬಂದರೆ ಒಳ್ಳೆಯದಾಗುತ್ತದೆ’, ಎಂಬ ವಿಚಾರ ಬಂದ ತಕ್ಷಣವೇ ಈಶ್ವರನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮನಸ್ಸಿನಲ್ಲಿ ಗುರುದೇವರ ಬಳಿ ಹೋಗುವ ವಿಚಾರವನ್ನು ಹಾಕಿದನು. ಈ ಘಟನೆಯು ಸಾಮಾನ್ಯವಾಗಿರದೇ ‘ಇದು ಗುರು-ಶಿಷ್ಯರ ನಡುವಿನ ಏಕರೂಪತೆಯನ್ನು ತೋರಿಸುತ್ತದೆ’. ಇಷ್ಟೇ ಅಲ್ಲದೇ, ‘ಮುಂದೆ ಸಾಧಕರಿಗಾಗಿ ಗುರುದೇವರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವನ್ನು ಪೂರ್ಣಗೊಳಿಸುವ ಕ್ಷಮತೆಯು ಕೇವಲ ಮತ್ತು ಕೇವಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿಯೇ ಇದೆ’, ಎಂಬುದನ್ನೂ ತೋರಿಸುತ್ತದೆ. ಮುಂಬರುವ ಕಾಲದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಲೌಕಿಕ ಕಾರ್ಯವು ಇದೇ ರೀತಿ ನಡೆಯುವುದಿದೆ. ‘ಗುರುದೇವರ ಮನಸ್ಸಿನಲ್ಲಿ ಯಾವುದಾದರೊಂದು ವಿಚಾರ ಬಂದ ಮೇಲೆ ಅದರ ಪರಿಣಾಮವು ಶಿಷ್ಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ಮನಸ್ಸಿನಲ್ಲಿ ಮೂಡುವುದು ಮತ್ತು ಗುರುತತ್ತ್ವಕ್ಕೆ ಅಪೇಕ್ಷಿತ ಅಧ್ಯಾತ್ಮಪ್ರಸಾರದ ಕಾರ್ಯವು ಶಿಷ್ಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ಪ್ರತ್ಯಕ್ಷ ಕೃತಿಯ ಸ್ವರೂಪದಲ್ಲಿ ಘಟಿಸುವುದು’, ಈ ರೀತಿ ಕಾರ್ಯ ಆಗುವುದಿದೆ .

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೨೭.೫.೨೦೨೧, ಬೆಳಗ್ಗೆ ೮.೪೯)

‘ಗುರುದೇವರೇ, ಮಹರ್ಷಿಗಳು ಮೇಲಿನ ಎರಡೂ ಪ್ರಶ್ನೆಗಳ ಉತ್ತರಗಳನ್ನು ಕೇವಲ ಒಂದೇ ವಾಕ್ಯದಲ್ಲಿ ಕೊಟ್ಟಿದ್ದರು. ನಾನು ಇದನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಹೇಳಿದೆನು. ಆಗ ಅವರು, “ಅಣ್ಣ, ನೀವು ಉತ್ತರವನ್ನು ಬರೆಯಿರಿ” ಎಂದು ಹೇಳಿದರು. ಬೆರಳಚ್ಚು ಮಾಡಲು ಆರಂಭಿಸಿದ ನಂತರ ನನಗೆ ತಿಳಿಯದೇ ಮೇಲಿನಂತೆ ಬೇರೆ ಭಾಷೆಯಲ್ಲಿ ಉತ್ತರಗಳ ಬೆರಳಚ್ಚನ್ನು ಮಾಡಲಾಯಿತು. ಇಂತಹ ಅನುಭೂತಿಯು ನನಗೆ ಮೊದಲನೇ ಬಾರಿಯೇ ಬಂದಿತು.

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬), ಚೆನ್ನೈ (೨೭.೫.೨೦೨೧, ಮಧ್ಯಾಹ್ನ ೩)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.