‘ಪ್ರಸ್ತುತ ಕೊರೊನಾ ಮತ್ತು ಓಮಿಕ್ರಾನ್ ಪ್ರಕಾರದ ವಿಷಾಣುವಿನ ಸೋಂಕು ರಭಸದಿಂದ ಹರಡುತ್ತಿದೆ. ಆ ದೃಷ್ಟಿಯಿಂದ ಕೊರೊನಾದ ಸೋಂಕು ಹರಡಬಾರದು ಹಾಗೂ ಅದರಿಂದ ನಾಗರಿಕರ ಜೀವನದ ರಕ್ಷಣೆಯಾಗಬೇಕು, ಎಂಬುದಕ್ಕಾಗಿ ಸರಕಾರ-ಆಡಳಿತಗಳು ವಿವಿಧ ಮಾಧ್ಯಮಗಳಿಂದ ಆಗಾಗ ಪ್ರಬೋಧನೆ ಮಾಡುತ್ತಿವೆ; ಆದರೆ ನಾಗರಿಕರು ಈ ಸೂಚನೆಗಳನ್ನು ಪಾಲಿಸಲು ದುರ್ಲಕ್ಷಿಸುತ್ತಾರೆ. ಕೊರೊನಾ ಮತ್ತು ಓಮಿಕ್ರಾನ್ ವಿಧದ ವಿಷಾಣುವಿನ ಸೋಂಕಿನ ಭೀಕರ ಸ್ಥಿತಿಯನ್ನು ಗಮನದಲ್ಲಿಟ್ಟು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಇನ್ನಷ್ಟು ಮಹತ್ವದ್ದಾಗುತ್ತದೆ.
ಆರೋಗ್ಯದ ಬಗ್ಗೆ ಏನೆಲ್ಲ ಜಾಗರೂಕತೆ ವಹಿಸಬೇಕು ? ಎಂದು ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಈ ವೈದ್ಯಕೀಯ ಶಾಖೆಗನುಸಾರ ಆವಶ್ಯಕವಿರುವ ಆ ಸೂಚನೆಗಳನ್ನು ಈ ಹಿಂದೆಯೂ ‘ಸನಾತನ ಪ್ರಭಾತ’ ನಿಯತಕಾಲಿಕೆಗಳಲ್ಲಿಯೂ ಪ್ರಕಟಿಸಲಾಗಿದೆ. ಅದಕ್ಕನುಸಾರ ಕೊರೊನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ವೈದ್ಯಕೀಯ ಸೂಚನೆಗಳನ್ನು ಉದಾ. ಮುಖಪಟ್ಟಿ (ಮಾಸ್ಕ್) ಉಪಯೋಗಿಸುವುದು, ಎರಡು ವ್ಯಕ್ತಿಗಳ ನಡುವೆ ೬ ಅಡಿ ಅಂತರವಿಡುವುದು, ಆಗಾಗ ಸಾಬೂನಿನಿಂದ ಕೈತೊಳೆಯುವುದು ಅಥವಾ ಸ್ಯಾನಿಟೈಸರ್ ನಿಂದ ನಿರ್ಜಂತು ಮಾಡುವುದು, ಅತ್ಯಾವಶ್ಯಕವಿದ್ದರೆ ಮಾತ್ರ ಮನೆಯ ಹೊರಗೆ ಹೋಗುವುದು, ಅನಾವಶ್ಯಕ ಜನಸಂದಣಿ ಮಾಡದಿರುವುದು, ಇತ್ಯಾದಿಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.
ಈ ಆಪತ್ತನ್ನು ಎದುರಿಸಲು ಮನೋಬಲ ಹೆಚ್ಚಾಗಬೇಕೆಂದು ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸ್ವಯಂಸೂಚನಾ ಸತ್ರವನ್ನು ಹೇಗೆ ಮಾಡಬೇಕು ?, ಎಂಬುದರ ಉದಾಹರಣೆ ಸಹಿತ ಮಾಹಿತಿಯನ್ನು ಈ ಹಿಂದೆ ‘ಸನಾತನ ಪ್ರಭಾತ’ದಲ್ಲಿ ನೀಡಲಾಗಿದೆ. ಅದರಿಂದ ಸಾಧಕರ ಸಹಿತ ಹಿತಚಿಂತಕರಿಗೆ ಮತ್ತು ವಾಚಕರಿಗೆ ಲಾಭವಾಗಿರುವುದು ಗಮನಕ್ಕೆ ಬಂದಿದೆ. ಅದರೊಂದಿಗೆ ಆತ್ಮಬಲ ಹೆಚ್ಚಿಸಲು
‘ಶ್ರೀ ದುರ್ಗಾದೇವೈ ನಮಃ – ಶ್ರೀ ದುರ್ಗಾದೇವೈ ನಮಃ – ಶ್ರೀ ದುರ್ಗಾದೇವೈ ನಮಃ – ಶ್ರೀ ಗುರುದೇವದತ್ತ – ಶ್ರೀ ದುರ್ಗಾದೇವೈ ನಮಃ – ಶ್ರೀ ದುರ್ಗಾದೇವೈ ನಮಃ – ಶ್ರೀ ದುರ್ಗಾದೇವೈ ನಮಃ – ಓಂ ನಮಃ ಶಿವಾಯ |’
ಈ ನಾಮಜಪವನ್ನು ಮಾಡಬೇಕು. ಯಾವ ಕ್ಷೇತ್ರದಲ್ಲಿ ಓಮಿಕ್ರಾನ್ ವಿಷಾಣುವಿನ ರೋಗಿಗಳು ಸಿಕ್ಕಿದ್ದಾರೆಯೊ, ಆ ಕ್ಷೇತ್ರದ ಸಾಧಕರು ಓಮಿಕ್ರಾನ್‌ನಿಂದ ರಕ್ಷಿಸಿಕೊಳ್ಳಲು ಆಧ್ಯಾತ್ಮಿಕ ಸ್ತರದಲ್ಲಿ ಶಕ್ತಿಯನ್ನು ನೀಡುವ
‘ಓಂ ನಮೋ ಭಗವತೆ ವಾಸುದೇವಾಯ | ಶ್ರೀ ದುರ್ಗಾದೇವೈ ನಮಃ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |’
ಈ ನಾಮಜಪವನ್ನು ಈ ಹಿಂದೆ ನೀಡಿರುವ ಸೂಚನೆಗನುಸಾರ ಮಾಡಬೇಕು. ಇದರೊಂದಿಗೆ ಪರಾತ್ಪರ ಗುರು ಪಾಂಡೆ ಮಹಾರಾಜರು ಹೇಳಿರುವ ೩ ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ೨೧ ಸಲ ಹೇಳಬೇಕು. ತನ್ನ ಸುತ್ತಲೂ ರಕ್ಷಣಾ ಕವಚವು ನಿರ್ಮಾಣವಾಗಲು ಆಗಾಗ ಪ್ರಾರ್ಥನೆ ಮಾಡಬೇಕು.
ಜನ್ಮ-ಮೃತ್ಯು ಎಂಬುದು ಪ್ರಾರಬ್ಧಕ್ಕನುಸಾರ ನಿರ್ಧರಿತವಾಗಿರುತ್ತದೆ ಹಾಗೂ ಸಂತರು ಮತ್ತು ಭವಿಷ್ಯ ನುಡಿಯುವವರು ಹೇಳುವ ಭವಿಷ್ಯವಾಣಿಗನುಸಾರ ಆಪತ್ಕಾಲದಲ್ಲಿ ವಿವಿಧ ಆಪತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮನುಷ್ಯ ಹಾನಿಯಾಗಲಿಕ್ಕಿದೆ. ಹೀಗಿದ್ದರೂ ನಾವು ಯೋಗ್ಯ ಕ್ರಿಯಮಾಣವನ್ನು ಉಪಯೋಗಿಸಬೇಕೆಂಬುದು ಈಶ್ವರನಿಗೆ ಅಪೇಕ್ಷಿತವಿದೆ. ಆಪತ್ಕಾಲದ ತೀವ್ರತೆಯನ್ನು ಗಮನದಲ್ಲಿಟ್ಟು ಆಪತ್ತಿನ ವಿಷಯದಲ್ಲಿ ಆಗಾಗ ನೀಡಿರುವ ಸೂಚನೆಗಳನ್ನು ಪಾಲಿಸುವುದು ಸಾಧನೆಯೆ ಆಗಿದೆ. ಆಪತ್ಕಾಲದ ನಂತರ ಈಶ್ವರೀ ರಾಜ್ಯ ಅಂದರೆ ರಾಮರಾಜ್ಯ ಅವತರಿಸುವುದು ಎಂದು ಕೂಡ ಸಂತರು ಭರವಸೆ ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟು ಆಪತ್ಕಾಲದಿಂದ ಪಾರಾಗಿ ರಾಮರಾಜ್ಯದ ಪ್ರಜೆಗಳಾಗಲು ಪಾತ್ರರಾಗಲು ಸಾಧನೆಯೆಂದು ಈ ಮೇಲಿನ ಸೂಚನೆಗಳು ಪಾಲನೆಯಾಗಬೇಕೆಂದು ಈಶ್ವರನ ಚರಣಗಳಲ್ಲಿ ಶರಣಾಗಿ ಪ್ರಯತ್ನಿಸೋಣ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ, ಸನಾತನ ಆಶ್ರಮ ರಾಮನಾಥಿ ಗೋವಾ. (೬.೧.೨೦೨೨)