ಶೇ. ೬೩ ಆಧ್ಯಾತ್ಮಿಕ ಮಟ್ಟವಿರುವ ಕು. ಮಧುರಾ ಭೋಸಲೆಯವರ ಕನಸಿನಲ್ಲಿ ಅನೇಕ ಸಂತರು ಬಾಲರೂಪದಲ್ಲಿ ದರ್ಶನವನ್ನು ನೀಡಿ ಅವರಿಗೆ ತಿಂಡಿಯನ್ನು ತಿನ್ನಿಸಲು ಒತ್ತಾಯ ಮಾಡುವುದು ಮತ್ತು ಕು. ಮಧುರಾ ಭೋಸಲೆಯವರು ಅವರು ಹೇಳಿದಂತೆ ಮಾಡುವುದು !

ಕು. ಮಧುರಾ ಭೋಸಲೆ
ಇಂತಹ ಅನುಭೂತಿ ಯಾರಿಗಾದರು ಬರಬಹುದು, ಎಂಬ ಕಲ್ಪನೆಯನ್ನೂ ನಮಗೆ ಮಾಡಲು ಆಗುವುದಿಲ್ಲ. ಸೂಕ್ಷ್ಮಜ್ಞಾನ ಪಡೆಯುವ ಕು. ಮಧುರಾ ಇವರಿಗೆ ಬಂದ ಈ ಅನುಭೂತಿಯು ಸಂಗ್ರಹಿಸಿಡುವಂತಹದ್ದಾಗಿದೆ. ಇಂತಹ ಅನುಭೂತಿಯನ್ನು ಅನುಭವಿಸಿದ ಬಗ್ಗೆ ಕು. ಮಧುರಾ ಇವರಿಗೆ ಅಭಿನಂದನೆಗಳು ! – (ಪರಾತ್ಪರ ಗುರು) ಡಾ. ಆಠವಲೆ

೧. ವಿವಿಧ ಸಂತರು ಬಾಲರೂಪದಲ್ಲಿ ದರ್ಶನ ನೀಡಿ ತಿಂಡಿಯನ್ನು ತಿನ್ನಿಸಲು ಹಠ ಮಾಡುವುದು

‘೧೫.೪.೨೦೨೦ ರಂದು ನನ್ನ ಕನಸಿನಲ್ಲಿ ಸನಾತನದ ಎಲ್ಲ ಸಂತರು ಬಂದರು. ಅವರು ನನ್ನ ಬಳಿ ಬರುತ್ತಲೇ, ಅವರ ಬಾಲರೂಪ ಪ್ರಕಟವಾಗಿ ಅವರು ನನ್ನ ಬಳಿ ಅವರಿಗೆ ತಿನ್ನುವುದಕ್ಕಾಗಿ ಇಷ್ಟವಾಗುವ ತಿಂಡಿಯನ್ನು ಕೇಳುತ್ತಿದ್ದರು. ಆಗ ಅನ್ನಪೂರ್ಣಾದೇವಿಯ ಕೃಪೆಯಿಂದ ನನ್ನಿಂದ ಪ್ರತಿಯೊಬ್ಬ ಸಂತರ ಇಷ್ಟವಾದ ಪದಾರ್ಥವನ್ನು ತಯಾರಿಸಲಾಯಿತು. ಆಗ ಸಂತರ ಬಾಲರೂಪಗಳು ನನಗೆ ಅವರ ತಿಂಡಿಯನ್ನು ತಿನಿಸಲು ಹೇಳಿದವು. ಆಗ ನನ್ನ ವಾತ್ಸಲ್ಯಭಾವ ಜಾಗೃತವಾಗಿ ನಾನು ಪ್ರತಿಯೊಬ್ಬ ಸಂತರ ಬಾಲರೂಪವನ್ನು ನನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅವರಿಗೆ ಅವರ ಇಷ್ಟವಾದ ತಿಂಡಿಯನ್ನು ಕೊಡುತ್ತಿದ್ದೆನು. ಅಷ್ಟರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರು ದೂರದಿಂದ ನನ್ನ ಬಳಿ ಬರುವುದು ಕಾಣಿಸಿತು. ಅವರು ಯಾವಾಗ ನನ್ನ ಹತ್ತಿರ ಬಂದರೋ, ಆಗ ಅವರ ರೂಪಾಂತರವು ೪-೫ ವರ್ಷದ ಬಾಲಕಿಯರಂತೆ ಆಯಿತು. ಅವರು ಸುಂದರ ರೇಶ್ಮೆಯ ಲಂಗ-ದಾವಣಿಯನ್ನು ತೊಟ್ಟಿದ್ದರು. ಬಾಲರೂಪದಲ್ಲಿನ ಅಂಜಲಿಅಕ್ಕ ಮತ್ತು ಬಿಂದಾಕ್ಕನವರು ತಕ್ಷಣ ಅನುಕ್ರಮವಾಗಿ ಅವರಲ್ಲಿನ ಶಿವಲಿಂಗ ಮತ್ತು ವಿಷ್ಣುವಿನ ಮೂರ್ತಿಯನ್ನು ತೆಗೆದು ಭಾವಪೂರ್ಣವಾಗಿ ಅವುಗಳ ಪೂಜೆಯನ್ನು ಮಾಡಲು ಪ್ರಾರಂಭಿಸಿದರು. ಅದರ ನಂತರ ಅವರು ನನಗೆ, ಶಿವನಿಗೆ ಮೊಸರನ್ನ ಮತ್ತು ವಿಷ್ಣುವಿಗೆ ರವೆಯ ಶಿರಾ ನೈವೇದ್ಯವನ್ನು ತಯಾರಿಸಿ ಅರ್ಪಿಸಲು ಹೇಳಿದರು. ನೈವೇದ್ಯವನ್ನು ಅರ್ಪಿಸಿದ ನಂತರ ಅವರ ಪೂಜೆ ಮುಗಿಯಿತು ಮತ್ತು ಅವರು ನನಗೆ ಅವರಿಗೆ ನೈವೇದ್ಯವನ್ನು ತಿನ್ನಿಸಲು ಹೇಳಿದರು. ಅದಕ್ಕನುಸಾರ ನಾನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರ ಬಾಲರೂಪವನ್ನು ನನ್ನ ಬಲಬದಿಯ ತೊಡೆಯ ಮೇಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಾಲರೂಪವನ್ನು ನನ್ನ ಎಡಬದಿಯ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅವರಿಬ್ಬರಿಗೂ ಪ್ರಸಾದವನ್ನು ತಿನಿಸಿದೆನು. ಆಗ ಅವರಿಬ್ಬರೂ ಶಿವ ಮತ್ತು ವಿಷ್ಣು ಇವರಲ್ಲಿ ಏಕರೂಪವಾಗಿದ್ದರಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರ ಬಾಲರೂಪದ ಕಾಂತಿಯು ವಿಷ್ಣುವಿನಂತೆ ನೀಲಿಬಣ್ಣ ಕಾಣಿಸಿ ಅವರ ಹಣೆಯ ಮೇಲೆ ಉದ್ದ ಗಂಧ ಇತ್ತು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಾಲರೂಪದ ಕಾಂತಿಯು ಸುಂದರ ಬಿಳಿಬಣ್ಣದ್ದಾಗಿ ಕಾಣಿಸುತ್ತಿತ್ತು ಮತ್ತು ಅವರ ಹಣೆಯ ಮೇಲೆ ವಿಭೂತಿಯ ಮೂರು ಅಡ್ಡ ಪಟ್ಟಿಗಳು (ತ್ರಿಪುಂಡ್ರ) ಇದ್ದವು. ಆಗ ನನಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರು ಮಹಾಲಕ್ಷ್ಮೀಯ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಮಹಾಕಾಳಿಯ ಬಾಲರೂಪ ಆಗಿರುವುದು ಅರಿವಾಗಿ ತುಂಬಾ ಆನಂದದ ಅರಿವಾಗುತ್ತಿತ್ತು. ಅನಂತರ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಇವರು ಬಾಲರೂಪದಲ್ಲಿನ ದತ್ತಾತ್ರೇಯ,

ಪರಾತ್ಪರ ಗುರು ಪಾಂಡೆ ಮಹಾರಾಜರು ಬಾಲರೂಪದಲ್ಲಿನ ಗಣೇಶ, ಪ.ಪೂ. ಕಾಲಿದಾಸ ದೇಶಪಾಂಡೆಕಾಕಾರವರು ಬಾಲರೂಪದಲ್ಲಿನ ವಿಷ್ಣು, ಸದ್ಗುರು ಸತ್ಯವಾನ ಕದಮ ಇವರು ಬಾಲರೂಪದಲ್ಲಿನ ಶಿವ, ಸದ್ಗುರು ಪಿಂಗಳೆಕಾಕಾ ಇವರು ಮಾರಕ ರೂಪದಲ್ಲಿನ ಹನುಮಂತ ಮತ್ತು ಸದ್ಗುರು ರಾಜೇಂದ್ರ ಶಿಂದೆ ಮತ್ತು ಪ.ಪೂ. ದಾಸ ಮಹಾರಾಜರು ತಾರಕ ರೂಪದಲ್ಲಿನ ಹನುಮಂತ, ಸದ್ಗುರು (ಕು.) ಅನುರಾಧಾ ವಾಡೆಕರ ಇವರು ಬಾಲರೂಪದಲ್ಲಿನ ರಾಧಾ, ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಬಾಲರೂಪದಲ್ಲಿನ ದುರ್ಗಾದೇವಿ ಮತ್ತು ಇತರ ಸಂತರು ವಿವಿಧ ದೇವತೆಗಳ ಬಾಲರೂಪದಲ್ಲಿ ಕಾಣಿಸಿದರು.

೨. ಪರಾತ್ಪರ ಗುರು ಡಾಕ್ಟರ್ ಆಠವಲೆ ಇವರು ಮೊದಲು ವಿಷ್ಣು ಮತ್ತು ನಂತರ ಶಿವನ ಬಾಲರೂಪದಲ್ಲಿ ದರ್ಶನ ನೀಡಿ ತಿಂಡಿಯನ್ನು ತಿನ್ನಿಸಲು ಹಠ ಮಾಡುವುದು  

ಅಷ್ಟರಲ್ಲಿ ಪರಾತ್ಪರ ಗುರು ಡಾಕ್ಟರ ಆಠವಲೆಯವರು ಬಿಳಿಬಣ್ಣದ ಉಡುಪುಗಳಲ್ಲಿ ನನ್ನ ಕಡೆಗೆ ಬರುವುದು ಕಾಣಿಸಿತು. ಅವರು ನನ್ನ ಬಳಿ ಬಂದನಂತರ ಮೊದಲು ನನಗೆ ಅವರ ಜಾಗದಲ್ಲಿ ಚತುರ್ಭುಜ ವಿಷ್ಣುವಿನ ಬಾಲರೂಪ ಮತ್ತು ನಂತರ ಶಿವನ ಬಾಲರೂಪದ ದರ್ಶನವಾಯಿತು. ಅವರು ಸಹ ನನಗೆ ತಿಂಡಿಯನ್ನು ತಿನ್ನಿಸಲು ಹಠ ಮಾಡಿದರು. ಅನ್ನಪೂರ್ಣಾದೇವಿಯು ಮೊದಲೇ ಪರಾತ್ಪರ ಗುರು ಡಾಕ್ಟರ ಆಠವಲೆಯವರಿಗೆ ಗಜ್ಜರಿಯ ಹಲ್ವಾ ಇಷ್ಟವಾಗುತ್ತದೆ ಎಂದು ಹೇಳಿ ನನಗೆ ಅದನ್ನು ತಯಾರಿಸಲು ಹೇಳಿದ್ದಳು. ಅದರಂತೆ ನಾನು ಪರಾತ್ಪರ ಗುರು ಡಾಕ್ಟರ್ ಆಠವಲೆಯವರ ವಿಷ್ಣುರೂಪದಲ್ಲಿನ ಬಾಲರೂಪಕ್ಕೆ ಗಜ್ಜರಿ ಹಲ್ವಾ ತಿನ್ನಿಸಿದೆನು. ಅದರ ನಂತರ ಅವರು ಶಿವನ ರೂಪವನ್ನು ಧರಿಸಿದರು ಮತ್ತು ನಾನು ಅವರಿಗೆ ಮೊಸರನ್ನವನ್ನು ತಿನ್ನಿಸಿದೆನು.

೩. ಬೆಳಗ್ಗೆ ಎದ್ದನಂತರ ಬಂದ ಅನುಭೂತಿ

ಬೆಳಗ್ಗೆ ಎದ್ದ ನಂತರ ನನಗೆ ಹಿಂದಿನ ರಾತ್ರಿ ಬಿದ್ದ ಕನಸು ನೆನಪಾಗಿ ತುಂಬಾ ಆನಂದವಾಯಿತು. ಆಗ ನನಗೆ ನನ್ನ ಅಂಗೈಗಳು ನಿತ್ಯಕ್ಕಿಂತ ಮೃದು ಆಗಿರುವುದು ಅರಿವಾಯಿತು ಮತ್ತು ನನ್ನ ಬೆರಳುಗಳ ಗಂಟುಗಳಿಗೆ ಒಂದು ರೀತಿಯ ಬೇರೆಯೇ ಸುಗಂಧವೂ ಬರುತ್ತಿತ್ತು.

‘ಹೇ ಗುರುದೇವಾ, ತಮ್ಮ ಕೃಪೆಯಿಂದಲೇ ಎಲ್ಲ ಸಂತರು ನನ್ನ ಕನಸಿನಲ್ಲಿ ಬಂದರು ಮತ್ತು ಅವರು ನನ್ನ ಕೈಯಿಂದ ತಿಂಡಿಯನ್ನು ತಿನ್ನಿಸಿಕೊಂಡು ನನಗೆ ವಾತ್ಸಲ್ಯಸುಖದ ಮತ್ತು ಸಂತರೂಪದಲ್ಲಿನ ದೇವರಿಗೆ ನೈವೇದ್ಯವನ್ನು ತಿನ್ನಿಸುವ ಒಂದು ಬೇರೆಯೇ ಅನುಭೂತಿಯನ್ನು ನೀಡಿದರು, ಆದುದರಿಂದ ನಾನು ತಮ್ಮ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

– ಕು. ಮಧುರಾ ಭೊಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೪.೨೦೨೦)