ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಂಡ ತಪ್ಪುಗಳ ಸತ್ಸಂಗದಿಂದ ಸನಾತನದ ಪುರೋಹಿತರ ಮೇಲಾಗುವ ಆಧ್ಯಾತ್ಮಿಕ ಸ್ತರದ ಪರಿಣಾಮ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

‘ಹಿಂದೂ ಧರ್ಮದಲ್ಲಿ ಹೇಳಿರುವ ಪೂಜಾವಿಧಿ, ಧಾರ್ಮಿಕ ವಿಧಿ, ಯಜ್ಞಯಾಗ ಇತ್ಯಾದಿಗಳನ್ನು ಮಾಡಲು ಸಾತ್ತ್ವಿಕ ಪುರೋಹಿತರ ಆವಶ್ಯಕತೆಯಿದೆ. ಪ್ರಸ್ತುತ ಕಲಿಯುಗದಲ್ಲಿ ಹೆಚ್ಚಿನ ಪುರೋಹಿತರು ಉದರ ನಿರ್ವಹಣೆಗಾಗಿ ಪೌರೋಹಿತ್ಯವನ್ನು ಮಾಡುತ್ತಾರೆ. ಪುರೋಹಿತರು ‘ಸಾಧನೆಯೆಂದು ಪೌರೋಹಿತ್ಯವನ್ನು  ಮಾಡಿದರೆ ಅವರ ಆಧ್ಯಾತ್ಮಿಕ ಪ್ರಗತಿ ಆಗುತ್ತದೆ. ಸಮಾಜಕ್ಕೆ ಧರ್ಮಾಚರಣೆ ಮಾಡಲು ಉತ್ತೇಜಿಸುವ ಹಾಗೂ ಈಶ್ವರ ಪ್ರಾಪ್ತಿಯ ಯೋಗ್ಯವಾದ ದಾರಿಯನ್ನು ತೋರಿಸುವ ಪುರೋಹಿತರನ್ನು ಸಿದ್ಧಪಡಿಸಿ ಕಡಿಮೆ ಸಮಯದಲ್ಲಿ ಮೋಕ್ಷಕ್ಕೆ ಒಯ್ಯುವ ವ್ಯಾಪಕ ಉದ್ದೇಶದಿಂದ ಪರಾತ್ಪರ ಗುರು ಡಾ. ಆಠವಲೆಯವರು ‘ಸನಾತನ-ಪುರೋಹಿತ ಪಾಠಶಾಲೆಯನ್ನು ಸ್ಥಾಪಿಸಿದರು. ಈ ಪಾಠಶಾಲೆಯ ಪುರೋಹಿತರಿಗೆ ಮಂತ್ರೋಚ್ಚಾರವನ್ನು ಹೇಗೆ ಮಾಡುವುದು ? ಎಂಬುದನ್ನು ಕಲಿಸುವುದರ ಜೊತೆಗೆ ವಿಧಿಯ ಮೊದಲು ದೇವತಾಪೂಜೆಯ ಸಿದ್ಧತೆಯನ್ನು ಶಾಸ್ತ್ರೋಕ್ತವಾಗಿ ಹೇಗೆ ಮಾಡುವುದು ? ವಿಧಿಯನ್ನು ಭಾವಪೂರ್ಣವಾಗಿ ಹೇಗೆ ಮಾಡುವುದು ? ಅದೇ ರೀತಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಶಿಕ್ಷಣವನ್ನೂ ನೀಡಲಾಗುತ್ತದೆ. ಈ ಪಾಠಶಾಲೆಯ ಪುರೋಹಿತರು ಯಜಮಾನರಿಗೆ ಧಾರ್ಮಿಕ ವಿಧಿಗಳ ಅರ್ಥವನ್ನು ಹೇಳಿ ಅವರಿಂದ ಆ ಶಾಸ್ತ್ರೋಕ್ತ ಪದ್ಧತಿಯನ್ನು ಮಾಡಿಸಿಕೊಳ್ಳುವುದರಿಂದ ಆ ವಿಧಿಯಿಂದ ಯಜಮಾನರಿಗೆ ಹೆಚ್ಚಿನ ಆಧ್ಯಾತ್ಮಿಕ ಲಾಭವಾಗುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಸಪ್ತರ್ಷಿಗಳ ಆಜ್ಞೆಗನುಸಾರ ಸನಾತನದ ರಾಮನಾಥಿ ಆಶ್ರಮದಲ್ಲಿ ೨೦೧೮ ರಿಂದ ಅನೇಕ ಯಜ್ಞಯಾಗಗಳನ್ನು ಮಾಡಲಾಯಿತು. ಸನಾತನ-ಪುರೋಹಿತ ಪಾಠಶಾಲೆಯ ಪುರೋಹಿತರು ಈ ಯಜ್ಞಯಾಗಗಳ ಪೌರೋಹಿತ್ಯವನ್ನು ಭಾವಪೂರ್ಣವಾಗಿ ಮಾಡಿದರು. ಅವರು ಪೌರೋಹಿತ್ಯದ ಸೇವೆ ಮಾಡುವಾಗ ತಮ್ಮಿಂದಾಗುವ ಚಿಕ್ಕಪುಟ್ಟ ತಪ್ಪುಗಳ ಬಗ್ಗೆ ಆಳವಾಗಿ ಚಿಂತನೆ ಮಾಡಿ ಅದಕ್ಕೆ ನಿವಾರಣೋಪಾಯವನ್ನು ಹುಡುಕಿ ಪ್ರಯತ್ನಿಸಿದರೆ ಅವರ ಸಾಧನೆಯಲ್ಲಿ ಶೀಘ್ರಗತಿಯಲ್ಲಿ ಪ್ರಗತಿಯಾಗುತ್ತದೆ. ಇದಕ್ಕಾಗಿ ಸನಾತನದ ಪುರೋಹಿತರಿಗೆ ಪದೇ ಪದೇ ಉನ್ನತ ಸಾಧಕರ ಹಾಗೂ ಸಂತರ ಮಾರ್ಗದರ್ಶನ ಲಭಿಸುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರು ೨.೮.೨೦೨೧ ರಂದು ಸನಾತನ ಪುರೋಹಿತರಿಗೆ ತಪ್ಪುಗಳ ಸತ್ಸಂಗದಲ್ಲಿ (ಟಿಪ್ಪಣಿ) ಮಾರ್ಗದರ್ಶನ ಮಾಡಿದರು. ಸಂತರ ಮಾರ್ಗದರ್ಶನದಿಂದ ಸನಾತನದ ಪುರೋಹಿತರಿಗಾಗುವ ಆಧ್ಯಾತ್ಮಿಕ ಸ್ತರದ ಪರಿಣಾಮವನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ಸನಾತನದ ಪುರೋಹಿತರನ್ನು ‘ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆ, ಅದರ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧ ಟಿಪ್ಪಣಿ – ಸನಾತನ ಸಂಸ್ಥೆಯಲ್ಲಿ ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಪ್ರಭಾವಪೂರ್ಣವಾಗಿ ಹಮ್ಮಿಕೊಳ್ಳಲು ಸತ್ಸಂಗದಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ. ಈ ಸತ್ಸಂಗಕ್ಕೆ ತಪ್ಪುಗಳ ಸತ್ಸಂಗ ಎನ್ನಲಾಗುತ್ತದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಸೌ. ಮಧುರಾ ಕರ್ವೆ

ಈ ಪರೀಕ್ಷಣೆಯಲ್ಲಿ ಶ್ರೀಸತ್‌ಶಕ್ತ್ತಿ (ಸೌ.) ಬಿಂದಾ ಸಿಂಗಬಾಳ ಇವರು ತೆಗೆದುಕೊಂಡ ತಪ್ಪುಗಳ ಸತ್ಸಂಗದಲ್ಲಿ ಸನಾತನ ಪುರೋಹಿತ ಪಾಠಶಾಲೆಯ ೬ ಪುರೋಹಿತರು ಉಪಸ್ಥಿತ ರಿದ್ದರು. ಅವರೆಲ್ಲರನ್ನು ಸತ್ಸಂಗದ ಮೊದಲು ಮತ್ತು ಸತ್ಸಂಗದ ನಂತರ ‘ಯು.ಎ.ಎಸ್. ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು.  ಸತ್ಸಂಗದ ಮೊದಲು ಸನಾತನದ ಪುರೋಹಿತರಲ್ಲಿ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಹಾಗೂ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆ ಇತ್ತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಸತ್ಸಂಗದ ಚೈತನ್ಯದಿಂದ ಸನಾತನದ ಪುರೋಹಿತರಲ್ಲಿನ ನಕಾರಾತ್ಮಕ ಉರ್ಜೆಯು ತುಂಬಾ ಕಡಿಮೆ ಆಯಿತು ಹಾಗೂ ಅವರಲ್ಲಿನ ಸಕಾರಾತ್ಮಕ ಉರ್ಜೆಯು ಬಹಳ ಹೆಚ್ಚಾಯಿತು. ಸನಾತನದ ಪುರೋಹಿತರ ಮೇಲಾದ ಸಕಾರಾತ್ಮಕ ಪರಿಣಾಮವು ಮುಂದಿನ ೨ ದಿನಗಳ ಕಾಲ ಅವರಲ್ಲಿತ್ತು. ಇದು ಮುಂದೆ ನೀಡಿರುವ ಪ್ರಭಾವಲಯದ ನೋಂದಣಿ ಇರುವ ಕೋಷ್ಟಕದಿಂದ ಅರಿವಾಗುತ್ತದೆ.

ಟಿಪ್ಪಣಿ ೧ – ಸನಾತನದ ಈ ಪುರೋಹಿತರಿಗೆ ಕಾರಣಾಂತರದಿಂದ ಪರೀಕ್ಷಣೆಗೆ ಉಪಸ್ಥಿತರಿರಲು ಸಾಧ್ಯವಾಗಲಿಲ್ಲ. ಆದ್ದರಿಂದ ಕೋಷ್ಟಕದಲ್ಲಿ ಅವರ ಆ ದಿನದ ನಿರೀಕ್ಷಣೆಯನ್ನು ಕೊಟ್ಟಿಲ್ಲ.

೨. ಶ್ರೀಸತ್‌ಶಕ್ತ್ತಿ (ಸೌ.) ಬಿಂದಾ ಸಿಂಗಬಾಳರು ತಪ್ಪುಗಳ ಸತ್ಸಂಗದಲ್ಲಿ ನೀಡಿದ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನದಿಂದ ಸನಾತನದ ಪುರೋಹಿತರಲ್ಲಿ ಅಂತರ್ಮುಖತೆ ಮೂಡಿ ಅವರಿಗೆ ಆಧ್ಯಾತ್ಮಿಕ ಲಾಭವಾಗುವುದು ! : ಸಾಧಕರಿಂದಾಗುವ ಚಿಕ್ಕಪುಟ್ಟ ತಪ್ಪುಗಳಿಂದಾಗಿ ಅವರ ಸಾಧನೆಯು ಖರ್ಚಾಗುತ್ತದೆ. ಸಾಧಕನು ತಪ್ಪುಗಳ ಸತ್ಸಂಗದಲ್ಲಿ ತನ್ನ ತಪ್ಪುಗಳನ್ನು ಹೇಳುವುದರಿಂದ ಅವನ ಅಹಂ ಕಡಿಮೆಯಾಗುತ್ತದೆ, ಅದೇ ರೀತಿ ತಪ್ಪುಗಳನ್ನು ತಡೆಗಟ್ಟಲು ಮಾಡಬೇಕಾದ ಪ್ರಯತ್ನಗಳಿಗೆ ಸಂಬಂಧಿಸಿ ಅವನಿಗೆ ಸತ್ಸಂಗದಿಂದ ಯೋಗ್ಯವಾದ ಮಾರ್ಗದರ್ಶನ ಸಿಗುವುದರಿಂದ ಅವನ ಸಾಧನೆಗೆ ವೇಗ ಸಿಗುತ್ತದೆ. ಸಾಧಕನು ತನ್ನಿಂದಾದ ತಪ್ಪುಗಳಿಗಾಗಿ ಯೋಗ್ಯವಾದ ಪ್ರಾಯಶ್ಚಿತ್ತವನ್ನು ತೆಗೆದುಕೊಂಡರೆ ಅವನ ಸಾಧನೆ ಖರ್ಚಾಗುವುದಿಲ್ಲ. (ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯನ್ನು ಸತತವಾಗಿ ಮಾಡಿದರೆ ಸಾಧನೆಯಲ್ಲಿ ಶೀಘ್ರಗತಿಯಲ್ಲಿ ಪ್ರಗತಿಯಾಗುತ್ತದೆ. ಅದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರು ಬಹಳ ಹಿಂದೆಯೇ ಸಾಧಕರಿಗಾಗಿ ತಪ್ಪುಗಳ ಸತ್ಸಂಗ ತೆಗೆದುಕೊಳ್ಳಲು ಆರಂಭಿಸಿದರು. ಇಂದಿನ ವರೆಗೆ ಅವರ ಮಾರ್ಗದರ್ಶನದಲ್ಲಿ ಅನೇಕ ಜವಾಬ್ದಾರ ಸಾಧಕರು ಸಿದ್ಧರಾಗಿದ್ದು ಅವರು ಸಾಧಕರಿಗೆ ತಪ್ಪುಗಳ ಸತ್ಸಂಗದಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.) ಸನಾತನ ಪುರೋಹಿತರು ತಪ್ಪುಗಳ ಸತ್ಸಂಗದಲ್ಲಿ ತಮ್ಮಿಂದಾದ ತಪ್ಪುಗಳ ವಿಷಯದಲ್ಲಿ ಚಿಂತನೆಯನ್ನು ಹೇಳಿದರು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ತಪ್ಪುಗಳ ಸತ್ಸಂಗದಲ್ಲಿ ಮಾಡಿದ ಚೈತನ್ಯಮಯ ಮಾರ್ಗದರ್ಶನದಿಂದ ಸನಾತನ ಪುರೋಹಿತರ ಮನಸ್ಸು ಮತ್ತು ಬುದ್ಧಿಯ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಗಳ ಆವರಣ ತುಂಬಾ ಪ್ರಮಾಣದಲ್ಲಿ ಕಡಿಮೆಯಾಯಿತು. ಅವರಲ್ಲಿ ಅಂತರ್ಮುಖತೆ ಮೂಡಿ ಅವರು ಸತ್ಸಂಗದಲ್ಲಿನ ಚೈತನ್ಯವನ್ನು ಪಡೆದರು. ಅದರಿಂದ ಅವರಲ್ಲಿನ ಸಾತ್ತ್ವಿಕತೆ ಹೆಚ್ಚಾಯಿತು. ವಿಶೇಷವೆಂದರೆ ಅವರಲ್ಲಿ ಸತ್ಸಂಗದ ಸಕಾರಾತ್ಮಕ ಪರಿಣಾಮವು ಮುಂದಿನ ಎರಡು ದಿನಗಳವರೆಗೆ ಉಳಿದಿತ್ತು. ಇದರಿಂದ ಸಂತರ ಸತ್ಸಂಗದ ಮಹತ್ವದ ಅರಿವಾಗುತ್ತದೆ. ಸಾಧಕ ಪುರೋಹಿತರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಸತತವಾಗಿ ಹಮ್ಮಿಕೊಂಡರೆ ಅವರ ಪ್ರಯಾಣ ಸನಾತನ ಪುರೋಹಿತರಿಂದ ಸಾಧಕ ಪುರೋಹಿತರ ಕಡೆಗೆ, ಸಾಧಕ ಪುರೋಹಿತರಿಂದ ಶಿಷ್ಯ ಪುರೋಹಿತರ ಕಡೆಗೆ ಮತ್ತು ಶಿಷ್ಯ ಪುರೋಹಿತರಿಂದ ಸಂತ ಪುರೋಹಿತರ ಕಡೆಗೆ ಶೀಘ್ರಗತಿಯಲ್ಲಿ ಆಗುವುದು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೧೧.೨೦೨೧)

ವಿ-ಅಂಚೆ : [email protected]

ಸನಾತನ-ಪುರೋಹಿತ ಪಾಠಶಾಲೆಯಲ್ಲಿ ನಿಜವಾದ ಅರ್ಥದಲ್ಲಿ ನಿಃಸ್ವಾರ್ಥಿ ಪುರೋಹಿತರು ಸಿದ್ಧರಾಗುತ್ತಿದ್ದಾರೆ !

ಪ.ಪೂ. ನಾರಾಯಣ (ನಾನಾ) ಕಾಳೆಗುರೂಜಿ

ಸನಾತನ-ಪುರೋಹಿತ ಪಾಠಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಕಲ್ಯಾಣದ ದೃಷ್ಟಿಯಿಂದ ಸಿದ್ಧವಾಗುತ್ತಿದ್ದಾರೆ. ಪಾರಂಪರಿಕ ಪದ್ಧತಿಯಲ್ಲಿ ನಡೆಯುವ ವೇದಪಾಠಶಾಲೆಗಳಲ್ಲಿ ಇಂತಹ ಸಂಸ್ಕಾರಗಳ ಅಭಾವವಿರುತ್ತದೆ. ಆಧ್ಯಾತ್ಮಿಕ ಸಾಧನೆ, ತನ್ನಲ್ಲಿರುವ ದೋಷವನ್ನು ದೂರ ಮಾಡಿ ಒಳ್ಳೆಯ ಗುಣಗಳನ್ನು ಅಂಗೀಕರಿಸುವ ತಳಮಳ, ಸೇವಾಭಾವ, ಶಿಸ್ತು, ಗುರ್ವಾಜ್ಞಾಪಾಲನೆ, ಆತ್ಮೀಯತೆಯ ವರ್ತನೆ, ಶ್ರದ್ಧೆ, ನಮ್ರತೆ ಇತ್ಯಾದಿ ಅಪರೂಪದ ಗುಣಗಳನ್ನು ಈ ವಿದ್ಯಾರ್ಥಿಗಳಲ್ಲಿ ಬಿಂಬಿಸಲಾಗುತ್ತದೆ. ಸಂಸ್ಥೆಯ ಪಾಠಶಾಲೆಯಲ್ಲಿ ನಿಜವಾಗಿಯೂ ನಿಃಸ್ವಾರ್ಥಿ ಪುರೋಹಿತರು ಸಿದ್ಧರಾಗುತ್ತಿದ್ದಾರೆ. ಇದರಿಂದ ನನಗೆ ತುಂಬಾ ಸಮಾಧಾನವೆನಿಸುತ್ತದೆ. ಪಾಠಶಾಲೆ ಉತ್ತರೋತ್ತರ ವೃದ್ಧಿಯಾಗುತ್ತಾ ಸಾವಿರಾರು ನಿಷ್ಠಾವಂತ ಪುರೋಹಿತ ವೇದಾಭ್ಯಾಸಿ ವಿದ್ಯಾರ್ಥಿಗಳು ಸಮಾಜ, ಹಿಂದೂ ಸಂಸ್ಕೃತಿ ಮತ್ತು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಸಿದ್ಧರಾಗಲಿ, ಎಂದು ಹಾರೈಸುತ್ತೇನೆ ! – ಅಹಿತಾಗ್ನಿ ಸೋಮಯಾಜಿ ಪ.ಪೂ. ನಾರಾಯಣ (ನಾನಾ) ಕಾಳೆಗುರೂಜಿ, ಬಾರ್ಶಿ, ಸೋಲಾಪುರ ಜಿಲ್ಲೆ. (ಆಧಾರ : (೨೦.೪.೨೦೧೪)

ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ

ಸ್ವಭಾವದೋಷದಿಂದ ವ್ಯಕ್ತಿಯ ಮೇಲೆ ಶಾರೀರಿಕ, ಮಾನಸಿಕ ಬೌದ್ಧಿಕ, ಕೌಟುಂಬಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ದುಷ್ಪರಿಣಾಮಗಳಾಗುತ್ತವೆ. ಸ್ವಭಾವದೋಷಗಳಿಂದಾಗುವ ಈ ದುಷ್ಪರಿಣಾಮವನ್ನು ತಡೆಗಟ್ಟಿ ಅವನಿಗೆ ಯಶಸ್ವಿ ಹಾಗೂ ಸುಖಮಯ ಜೀವನವನ್ನು ನಡೆಸಲು ಸಾಧ್ಯವಾಗಬೇಕೆಂದು ಅವನಲ್ಲಿನ ಸ್ವಭಾವದೋಷಗಳನ್ನು ದೂರಗೊಳಿಸಿ ಅವನ ಚಿತ್ತದಲ್ಲಿ ಗುಣಗಳ ಸಂಸ್ಕಾರವನ್ನು ಬಿಂಬಿಸುವ ಪ್ರಕ್ರಿಯೆಗೆ ‘ಸ್ವಭಾವದೋಷ (ಷಡ್ರಿಪು)-ನಿರ್ಮೂಲನೆ ಪ್ರಕ್ರಿಯೆ, ಎಂದು ಹೇಳುತ್ತಾರೆ. (ಆಧಾರ : ಸನಾತನದ ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ ಈ ವಿಷಯದ ಗ್ರಂಥಮಾಲಿಕೆ)