ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳ ಇವರಿಂದ  ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !

ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಅವತಾರಿ ಕಾರ್ಯವು ಈ ಯುದ್ಧಕ್ಕಷ್ಟೇ ಸೀಮಿತವಾಗಿಲ್ಲ, ಎಲ್ಲಿಯವರೆಗೆ ಶುದ್ಧ ಧರ್ಮಬೀಜ ಪೃಥ್ವಿಯ ಮೇಲೆ ಬರುವುದಿಲ್ಲವೋ, ಅಲ್ಲಿಯವರೆಗೆ ಅವತಾರಗಳು ಕಾರ್ಯನಿರತವಾಗಿರುತ್ತವೆ. ಹೇಗೆ ‘ಶ್ರೀರಾಮ ಮತ್ತು ರಾಮಾಯಣ, ಹೇಗೆ ‘ಶ್ರೀಕೃಷ್ಣ ಮತ್ತು ಗೀತಾ-ಭಾಗವತ, ಹಾಗೆಯೇ, ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಗ್ರಂಥಗಳಾಗಿವೆ.

ಆಪತ್ಕಾಲವು ಅಶಾಶ್ವತ, ಆದರೆ ‘ಪರಾತ್ಪರ ಗುರು ಡಾ. ಆಠವಲೆ,  ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ರೂಪದಲ್ಲಿ ಕಾರ್ಯನಿರತವಾಗಿರುವ ಗುರುತತ್ತ್ವವೇ ಶಾಶ್ವತ !

ಕೆಲವೊಮ್ಮೆ ಒಬ್ಬರೇ ಸಾಧಕರಿಗೆ ತೊಂದರೆಯಾಗುವ ಮೊದಲೇ ಮೂರೂ ಗುರುಗಳು ಅವರನ್ನು ಜಾಗರೂಕಗೊಳಿಸುತ್ತಾರೆ. ಇಂತಹ ಸಮಯದಲ್ಲಿ ಅವರ ಮನಸ್ಸಿನಲ್ಲಿ ಆ ಸಾಧಕರ ನೆನಪಾಗಿ ಅವರು ಆ ಸಾಧಕನಿಗೆ ಇಂತಹ ಸ್ಥಳದಲ್ಲಿ ಸೇವೆಗೆ ಹೋಗುವಾಗ ಜಾಗರೂಕ ಇರಲು ಮತ್ತು ಎಲ್ಲ ನಾಮಜಪಾದಿ ಉಪಾಯ ಮಾಡಲು ಸೂಚಿಸಿದಂತಹ ಅನೇಕ ಪ್ರಸಂಗಗಳು ನೋಡಲು ಸಿಕ್ಕಿದವು.