

ಕೆಲವು ಸ್ತ್ರೀಯರು ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯದೇ ಅದನ್ನು ಎಡ ಅಥವಾ ಬಲ ಭಾಗಕ್ಕೆ ತೆಗೆಯುತ್ತಾರೆ. (ಛಾಯಾಚಿತ್ರ ೧) ಕೆಲವು ಸ್ತ್ರೀಯರು ಆಕರ್ಷಕ ಕೇಶರಚನೆಗಾಗಿ ಸ್ವಲ್ಪ ದೂರದ ವರೆಗೆ ನೇರವಾಗಿ ಬೈತಲೆಯನ್ನು ತೆಗೆಯುತ್ತಾರೆ. ನಂತರ ಬೈತಲೆಯ ದಿಕ್ಕನ್ನು ಬದಲಿಸುತ್ತಾರೆ (ಛಾಯಾಚಿತ್ರ ೨) ಕೆಲವೊಮ್ಮೆ ಕೂದಲಿನ ಬೈತಲೆಯನ್ನು ಸರಿಯಾಗಿ ಮತ್ತು ಮಧ್ಯದಲ್ಲಿ ತೆಗೆಯದ ಕಾರಣ ಅದು ಕೊನೆಗೆ ನೇರವಾಗಿರದೆ ಓರೆಯಾಗುತ್ತದೆ. ಈ ರೀತಿಯಾಗಿ ಬೈತಲೆ ತೆಗೆದು ಕೇಶರಚನೆಯನ್ನು ಮಾಡುವುದರಿಂದ ಸ್ತ್ರೀಯರಲ್ಲಿನ ರಜ-ತಮ ಗುಣಗಳು ಹೆಚ್ಚಾಗುತ್ತವೆ ಮತ್ತು ಸ್ತ್ರೀಯರ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಗಳ ಆವರಣವು ಬರುತ್ತದೆ. ಕೆಲವೊಮ್ಮೆ ಸ್ತ್ರೀಯರು ಕೆಟ್ಟ ಶಕ್ತಿಗಳ ಆಕ್ರಮಣಕ್ಕೂ ತುತ್ತಾಗಬಹುದು.
ಹಿಂದೂ ಧರ್ಮವು ಪ್ರಾಚೀನ ಕಾಲದಿಂದಲೂ ಸಾತ್ತ್ವಿಕ ಕೂದಲಿನ ರಚನೆಯನ್ನು ಮಾಡಲು ಕಲಿಸಿದೆ. ಮಧ್ಯದಲ್ಲಿ ಬೈತಲೆಯನ್ನು ತೆಗೆದು ಸಾತ್ತ್ವಿಕ ಕೂದಲಿನ ರಚನೆಯನ್ನು ಮಾಡಿದ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭಗಳು ಖಂಡಿತ ಆಗುತ್ತವೆ, ಅಲ್ಲದೇ ಆ ಕೇಶ ರಚನೆಯಿಂದ ಸಾತ್ತ್ವಿಕ ಲಹರಿಗಳು ಪ್ರಕ್ಷೇಪಿತವಾಗಿರುವುದರಿಂದ ಆ ಕೇಶ ರಚನೆಯನ್ನು ನೋಡುವವರ ಮನಸ್ಸಿನ ಮೇಲೆಯೂ ಒಳ್ಳೆಯ ಪರಿಣಾಮವಾಗುತ್ತದೆ. (ಛಾಯಾಚಿತ್ರ ೩) ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಮುಂದಿನ ಲಾಭಗಳಾಗಬಹುದು.
೧. ಈಶ್ವರಿ ಚೈತನ್ಯವು ಗ್ರಹಣವಾಗಿ ಸಹಸ್ರಾರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗುವುದು.
೨. ಈಶ್ವರಿ ಚೈತನ್ಯವು ಗ್ರಹಣವಾಗುವುದರಿಂದ ಕುಂಡಲಿನಿಚಕ್ರವು ಜಾಗೃತವಾಗಲು ಸಹಾಯವಾಗುತ್ತದೆ.
೩. ಈಶ್ವರಿ ಚೈತನ್ಯದಿಂದ ಅಂತರ್ಮುಖತೆಯು ನಿರ್ಮಾಣ ವಾಗುವುದು.
ಆದುದರಿಂದ ಸ್ತ್ರೀಯರು ಕೇವಲ ಬಾಹ್ಯ ಸೌಂದರ್ಯದ ವಿಚಾರವನ್ನು ಮಾಡದೆ ತಮ್ಮ ಕೇಶ ರಚನೆಯ ಆಧ್ಯಾತ್ಮಿಕ ಸ್ತರದಲ್ಲಿ ವಿಚಾರವನ್ನು ಮಾಡಬೇಕು. ‘ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದು’, ಇದು ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುವುದರಿಂದ ಸ್ತ್ರೀಯರು ಕೂದಲಿನ ಮಧ್ಯಭಾಗದಲ್ಲಿ ಬೈತಲೆಯನ್ನು ತೆಗೆಯಬೇಕು. ಕೂದಲಿನ ಬೈತಲೆ ಸಾತ್ತ್ವಿಕ ಸ್ಪಂದನಗಳ ದೃಷ್ಟಿಯಿಂದ ‘ಮಧ್ಯಭಾಗದಲ್ಲಿ ಮತ್ತು ನೇರವಾಗಿ ಕೊನೆಯ ವರೆಗೂ ಬರುವಂತೆ’, ನೋಡಬೇಕು.
– ಶ್ರೀಸತ್‌ಶಕ್ತಿ (ಸೌ) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೩.೨೦೨೨)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !